ಕ್ಯಾಂಟರ್ ಢಿಕ್ಕಿ: ಪೌರ ಕಾರ್ಮಿಕ ಮಹಿಳೆ ಮೃತ್ಯು
ಬೆಂಗಳೂರು, ಎ.28: ಬಿಬಿಎಂಪಿ ಮಹಿಳಾ ಪೌರ ಕಾರ್ಮಿಕ ಮಹಿಳೆಗೆ ಕ್ಯಾಂಟರ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಜೆ.ಪಿ ನಗರದಲ್ಲಿ ನಡೆದಿದೆ.
ಕಮಲಮ್ಮಾ (47) ಮೃತ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಜೆ.ಪಿ.ನಗರದ ದಾಲ್ಮಿಯಾ ಸಿಗ್ನಲ್ ಬಳಿ ಎಂದಿನಂತೆ ಕಮಲಮ್ಮಾ ರಸ್ತೆ ಗುಡಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕ್ಯಾಂಟರ್ ವಾಹನ ರಸ್ತೆ ಗುಡಿಸುತ್ತಿದ್ದ ಕಮಲಮ್ಮನಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ನಡೆದ ಬಳಿಕ ಕ್ಯಾಂಟರ್ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಕೈಗೊಂಡಿದ್ದಾರೆ.
Next Story