Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎಚ್‌ಪಿಸಿಎಲ್-ಎಂಆರ್‌ಪಿಎಲ್ ವಿಲೀನಕ್ಕೆ...

ಎಚ್‌ಪಿಸಿಎಲ್-ಎಂಆರ್‌ಪಿಎಲ್ ವಿಲೀನಕ್ಕೆ ಹಣದ ಕೊರತೆ

ವಾರ್ತಾಭಾರತಿವಾರ್ತಾಭಾರತಿ28 April 2019 9:13 PM IST
share
ಎಚ್‌ಪಿಸಿಎಲ್-ಎಂಆರ್‌ಪಿಎಲ್ ವಿಲೀನಕ್ಕೆ ಹಣದ ಕೊರತೆ

ಮಂಗಳೂರು,ಎ.28: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿ. (ಎಂಆರ್‌ಪಿಎಲ್)ಅನ್ನು ಸ್ವಾಧೀನಪಡಿಸಿಕೊಳ್ಳುವ ಹಿಂದೂಸ್ಥಾನ್ ಪೆಟ್ರೋಲಿಯಂ ಕೊರ್ಪ್ ಲಿ. (ಎಚ್‌ಪಿಸಿಎಲ್)ನ ಯೋಜನೆಗೆ ಸದ್ಯ ಹಣದ ಸಮಸ್ಯೆ ಎದುರಾಗಿದೆ. ಈ ಒಪ್ಪಂದ ಕುದುರಿಸಲು ಎಚ್‌ಪಿಸಿಎಲ್‌ನ ಮಾತೃಸಂಸ್ಥೆ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕೋರ್ಪ್ (ಒಎನ್‌ಜಿಸಿ) ಶೇರುಗಳ ಬದಲಾಗಿ ನಗದಿಗೆ ಬೇಡಿಕೆ ಇಟ್ಟಿರುವುದು ಈ ಸಮಸ್ಯೆಗೆ ಕಾರಣ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಅತೀದೊಡ್ಡ ತೈಲ ಮತ್ತು ಅನಿಲ ಉತ್ಪಾದಕ ಸಂಸ್ಥೆಯಾಗಿರುವ ಒಎನ್‌ಜಿಸಿ ಕಳೆದ ವರ್ಷ 36,915 ಕೋ.ರೂ.ಗೆ ಎಚ್‌ಪಿಸಿಎಲ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು.

ಎಚ್‌ಪಿಸಿಎಲ್-ಎಂಆರ್‌ಪಿಎಲ್ ವಿಲೀನ ಒಪ್ಪಂದದಲ್ಲಿ ಆರಂಭದಲ್ಲಿ ನಗದು ಮತ್ತು ಶೇರು ಬದಲಾವಣೆ ಎರಡನ್ನೂ ಜೊತೆಯಾಗಿ ನಡೆಸುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಆದರೆ ಸದ್ಯ ಎಚ್‌ಪಿಸಿಎಲ್ ಶೇರುಗಳ ದರದಲ್ಲಿ ಗಣನೀಯ ಇಳಿಕೆಯಾಗಿರುವ ಕಾರಣ ಒಎನ್‌ ಜಿಸಿ ಕೇವಲ ನಗದು ಸ್ವೀಕರಿಸುವುದಾಗಿ ತಿಳಿಸಿದೆ.

2018ರ ಜನವರಿಯಲ್ಲಿ ಒಎನ್‌ಜಿಸಿ ಸರಕಾರದ ಬಳಿಯಿದ್ದ ಎಚ್‌ಪಿಸಿಎಲ್‌ನ ಶೇ.51.11 ಶೇರುಗಳನ್ನು ತಲಾ 473.97 ರೂ.ಗೆ ಖರೀದಿಸಿತ್ತು. ಇದೀಗ ಅದೇ ಶೇರುಗಳು ಶುಕ್ರವಾರದಂದು 282.60 ರೂ.ಗೆ ಕೊನೆಗೊಂಡಿದ್ದು 15 ತಿಂಗಳಲ್ಲಿ ಶೇ.40ರಷ್ಟು ಬೃಹತ್ ಪ್ರಮಾಣದ ಇಳಿಕೆ ದಾಖಲಿಸಿದೆ.

ಇನ್ನೊಂದು ಕಡೆ ಎಂಆರ್‌ಪಿಎಲ್‌ಅನ್ನು ಖರೀದಿಸಲು ಎಚ್‌ಪಿಸಿಎಲ್ ಸ್ಪಷ್ಟ ಮತ್ತು ಖಚಿತ ಪ್ರಸ್ತಾವವನ್ನು ಸಲ್ಲಿಸಿಲ್ಲ. ಅದು ಕೇವಲ ತೈಲ ಸಚಿವಾಲಯ ಮತ್ತು ಮಾಧ್ಯಮಗಳ ಮೂಲಕ ಹೇಳಿಕೆಗಳನ್ನು ನೀಡುತ್ತಿದೆಯಷ್ಟೇ ಎಂದು ಕಂಪೆನಿಯ ಒಳಗಿನ ವರದಿಗಳು ತಿಳಿಸಿವೆ.

ಆದರೆ ಎಂಆರ್‌ಪಿಎಲ್‌ ನಲ್ಲಿ ಶೇ.71.63 ಶೇರುಗಳನ್ನು ಹೊಂದಿರುವ ಒಎನ್‌ ಜಿಸಿ ವಿಲೀನದ ಬಗ್ಗೆ ಎಚ್‌ಪಿಸಿಎಲ್ ಸೂಕ್ತವಾದ ಒಪ್ಪಂದದೊಂದಿಗೆ ಬರಬೇಕು ಎಂದು ಬಯಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಎನ್‌ಜಿಸಿ ಬಳಿಯಿರುವ ಶೇರುಗಳನ್ನು ಖರೀದಿಸುವ ಮೂಲಕ ಎಚ್‌ಪಿಸಿಎಲ್ ಎಂಆರ್‌ಪಿಎಲ ಅನ್ನು ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಶುಕ್ರವಾರ ದಿನದಂತ್ಯಕ್ಕೆ ಈ ಶೇರುಗಳ ಒಟ್ಟು ವೌಲ್ಯ 9,300 ಕೋ.ರೂ. ಆಗಿತ್ತು.

ಇನ್ನೊಂದು ಸಾಧ್ಯತೆಯೆಂದರೆ ಒಎನ್‌ಜಿಸಿಗೆ ಎಚ್‌ಪಿಸಿಎಲ್‌ನಲ್ಲಿ ಹೆಚ್ಚಿನ ಶೇರುಗಳನ್ನು ನೀಡುವುದು. ಅದಕ್ಕೆ ಬದಲಾಗಿ ಎಂಆರ್‌ಪಿಎಲ್‌ನ ನಿಯಂತ್ರಣದ ಹಕ್ಕು ಪಡೆದುಕೊಳ್ಳಬಹುದು.

ಮೂಲಗಳ ಪ್ರಕಾರ, ಶೇರುಪೇಟೆಯಲ್ಲಿ ಎಚ್‌ಪಿಸಿಎಲ್ ಶೇರುಗಳ ದರ ನಿರಂತರವಾಗಿ ಕುಸಿಯುತ್ತಿರುವುದರಿಂದ ಹೆಚ್ಚು ಶೇರುಗಳನ್ನು ಖರೀದಿಸಲು ಒಎನ್‌ಜಿಸಿ ಸಿದ್ಧವಿಲ್ಲ. ಸದ್ಯ ಎಚ್‌ಪಿಸಿಎಲ್ ಎಂಆರ್‌ಪಿಎಲ್‌ನಲ್ಲಿ ಶೇ.16.96 ಶೇರುಗಳನ್ನು ಹೊಂದಿದೆ.

ಎಂಆರ್‌ಪಿಎಲನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ಕಂಪೆನಿಗೆ ಹೊಸಜೀವ ನೀಡಿದಂತಾಗುತ್ತದೆ ಎಂದು ಎಚ್‌ಪಿಸಿಎಲ್ ಮುಖ್ಯಸ್ಥ ಮತ್ತು ವ್ಯವಸ್ಥಾಪನಾ ನಿರ್ದೇಶಕ ಮುಕೇಶ್ ಕುಮಾರ್ ಸುರನ 2018ರ ಜನವರಿಯಿಂದ ಹೇಳುತ್ತಲೇ ಬಂದಿದ್ದಾರೆ.

ಎಚ್‌ಪಿಸಿಎಲ್ ಉತ್ಪಾದನೆಗಿಂತ ಹೆಚ್ಚಿನ ಪೆಟ್ರೋಲಿಯಂ ಉತ್ಪಾದನೆಗಳನ್ನು ಮಾರಾಟ ಮಾಡುತ್ತಿದ್ದು, ಎಂಆರ್‌ಪಿಎಲ್‌ನ ವಾರ್ಷಿಕ 15 ಮಿಲಿಯನ್ ಟನ್ ಶುದ್ಧೀಕರಣ ಘಟಕವೂ ಸೇರಿದರೆ ಉತ್ಪಾದನಾ ಕೊರತೆಯನ್ನು ನೀಗಿಸಬಹುದು ಎನ್ನುವುದು ಅವರ ವಾದ. ಎಚ್‌ಪಿಸಿಎಲ್‌ಗೆ ವಾರ್ಷಿಕ 23.8 ಮಿಲಿಯನ್ ಟನ್ ತೈಲ ಶುದ್ಧೀಕರಣಗೊಳಿಸುವ ಸಾಮರ್ಥ್ಯವಿದೆ. ಎಂಆರ್‌ಪಿಎಲ್ ವಿಲೀನಗೊಂಡರೆ ಎಚ್‌ಪಿಸಿಎಲ್ ಭಾರತದ ಎರಡನೇ ಅತೀದೊಡ್ಡ ಸರಕಾರಿ ಸ್ವಾಮ್ಯದ ತೈಲ ಶುದ್ಧೀಕರಣ ಕಂಪೆನಿಯಾಗಲಿದೆ. ಮೊದಲ ಸ್ಥಾನದಲ್ಲಿ ಇಂಡಿಯನ್ ಆಯಿಲ್ ಕೊರ್ಪ್ (ಐಒಸಿ) ಇದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X