ಹಜಾಜ್ ಹಾಜಿ ಮನೆಗೆ ಯು.ಟಿ.ಖಾದರ್ ಭೇಟಿ

ಮಂಗಳೂರು: ಇತ್ತೀಚೆಗೆ ನಿಧನರಾದ ಹಜಾಜ್ ಸಮೂಹ ಸಂಸ್ಥೆಗಳ ಸ್ಥಾಪಕರು, ಹಿರಿಯ ಸಾಹಿತಿಯಾದ ದಿವಂಗತ ಅಬ್ದುಲ್ ಖಾದರ್ ಹಾಜಿ (ಅಬ್ಬೋನು ಹಾಜಿ) ಅವರ ಕಲ್ಲಡ್ಕ ಸಮೀಪದ ಗೋಳ್ತಮಜಲು ಮನೆಗೆ ರಾಜ್ಯ ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತವಾರಿ ಸಚಿವರಾದ ಯು.ಟಿ.ಖಾದರ್ ಅವರು ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.
ಯು.ಟಿ.ಖಾದರ್ ಅವರ ಮಾರ್ಗದರ್ಶಕರಾಗಿದ್ದ ಅಬ್ದುಲ್ ಖಾದರ್ ಹಾಜಿ ಯು.ಟಿ.ಯವರ ತಂದೆ ದಿವಂಗತ ಯು.ಟಿ.ಫರೀದ್ ಅವರ ಆತ್ಮೀಯರಾಗಿದ್ದನ್ನು ಈ ಸಂದರ್ಭ ಸ್ಮರಿಸಿದರು. ಅವರು ನಿಧನರಾದ ಸಂದರ್ಭ ಸಚಿವರು ಕೇರಳದಲ್ಲಿದ್ದ ಕಾರಣ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗಿರಲಿಲ್ಲ. ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ ಸಚಿವರ ಜೊತೆಗಿದ್ದರು. ಈ ಸಂದರ್ಭ ಅಬ್ದುಲ್ ಖಾದರ್ ಹಾಜಿ ಪುತ್ರರಾದ ಯೂಸುಫ್ ಹಾಜಿ, ಅಬ್ದುಲ್ ರಝಾಕ್ ಹಾಜಿ, ಅಹ್ಮದ್ ಮುಸ್ತಫಾ, ಶರೀಫ್, ಇಂತಿಯಾಝ್ ಮೊದಲಾದವರು ಉಪಸ್ಥಿತರಿದ್ದರು.
Next Story





