ಪಿಯುಸಿ ರ್ಯಾಂಕ್ ವಿಜೇತೆ ರಈಸಾಗೆ ಸನ್ಮಾನ

ಹೆಬ್ರಿ, ಎ.28: ಹೆಬ್ರಿ ಚೈತನ್ಯ ಯುವ ವೃಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಟನೆ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದ ಹೆಬ್ರಿ ಎಸ್.ಆರ್. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹಿರಿಯಡ್ಕ ಪುತ್ತಿಗೆಯ ರಈಸಾ ಅವರನ್ನು ಶನಿವಾರ ಸನ್ಮಾನಿಸಲಾಯಿತು.
ಚೈತನ್ಯ ಯುವ ವೃಂದದ ಅಧ್ಯಕ್ಷ ಶಂಕರ ಸೇರಿಗಾರ, ಸ್ಥಾಪಕಾಧ್ಯಕ್ಷ ಪ್ರಕಾಶ ಮಲ್ಯ, ಪೂರ್ವಾಧ್ಯಕ್ಷ ಎಚ್.ಜನಾರ್ಧನ್, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಸದಸ್ಯರಾದ ಎಚ್.ವಸಂತ ಪ್ರಭು, ಸುಂದರ ಪೂಜಾರಿ, ಪಂಡರಿನಾಥ ನಾಯಕ್, ಎಚ್.ಸುದೇಶ ಪ್ರಭು, ಹರಿಪ್ರಸಾದ ಶೆಟ್ಟಿ, ರಾಯಿಸ ತಂದೆ ಉಮರಬ್ಬ, ತಾಯಿ ರುಕ್ಸಾನ ಉಪಸ್ಥಿತರಿದ್ದರು.
Next Story





