Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಬರವಣಿಗೆ ಸುಲಭವಲ್ಲ: ಕವಿ ಜಯಂತ್...

ಬರವಣಿಗೆ ಸುಲಭವಲ್ಲ: ಕವಿ ಜಯಂತ್ ಕಾಯ್ಕಿಣಿ

ವಾರ್ತಾಭಾರತಿವಾರ್ತಾಭಾರತಿ28 April 2019 10:35 PM IST
share
ಬರವಣಿಗೆ ಸುಲಭವಲ್ಲ: ಕವಿ ಜಯಂತ್ ಕಾಯ್ಕಿಣಿ

ಬೆಂಗಳೂರು, ಎ.28: ಬರವಣಿಗೆ ಸುಲಭವಲ್ಲ. ಬದುಕಿನ ಅರ್ಥ ತಿಳಿಸುವ ಕಥನಗಳು ಹೆಚ್ಚಾಗಿ ಬರಬೇಕು ಎಂದು ಕವಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲರೂ ಬರೆಯಬಹುದು ಎಂಬ ಭಾವನೆಯಿದೆ. ಆದರೆ, ಬರವಣಿಗೆ ಅಷ್ಟು ಸುಲಭವಾಗಿ ಸಿಗುವಂತಹದಲ್ಲ ಎಂದು ಹೇಳಿದರು.

ಕವಿಗಳು, ಸಾಹಿತಿಗಳು, ಲೇಖಕರು ತಮ್ಮ ಬರವಣಿಗೆಯಲ್ಲಿ ಜೀವನದ ಅರ್ಥವನ್ನು ತಿಳಿಸುವ ಬರಹಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂದ ಅವರು, ಕವಿಯಾದವರಿಗೆ ಸಣ್ಣ ಕಥೆಗಳ ಪ್ರಕಾರಗಳಿಗೆ ಹೆಚ್ಚು ಒಲವು ಇರುತ್ತದೆ. ಪ್ರತಿಯೊಬ್ಬ ಕವಿಗೂ ವಿಶಿಷ್ಟ ಕೌಶಲ್ಯವಿರುತ್ತದೆ. ಕವಿ, ಕಥೆಗಾರ, ಲೇಖಕ ಯಾವುದೇ ಸನ್ನಿವೇಶದಲ್ಲಿ ತಮ್ಮ ಚಿಂತನೆ ಹೊರಹಾಕುತ್ತಾರೆ ಎಂದು ನುಡಿದರು.

ಕವಿಯಾಗುವವರು ಕಥೆಯಾದಳು ಹುಡುಗಿ ಕತೆ ಪುಸ್ತಕ ಓದಲೇಬೇಕು ಎಂದ ಅವರು, ಜಿ.ಎಸ್.ಅವಧಾನಿ ಕವಿತೆಗಳನ್ನು ಓದಿದ್ದರಿಂದ ನಾನು ಕವಿಯಾದೆ. ಅವರ ಕವಿತೆಗಳೇ ನನಗೆ ಮಾರ್ಗದರ್ಶನ ನೀಡಿವೆ. ಪತ್ರಕರ್ತರಾದ ತಕ್ಷಣ ಅವರ ಸ್ವಂತ ಕೃಷಿ ಕಡಿಮೆಯಾಗುತ್ತಿದೆ. ಇಂತ ಪರಿಸ್ಥಿತಿ ಪ್ರಸ್ತುತ ನಿರ್ಮಾಣವಾಗಿದೆ. ಪ್ರತಿಯೊಬ್ಬರಿಗೂ ವಿಕಾಸದ ಪಥವಿದೆ. ಭಾಷೆಯ ಹಂಗಿನಲ್ಲಿಯೇ ದುಂಡಿರಾಜ್ ಜನರನ್ನು ನಗಿಸುತ್ತಾರೆ ಎಂದು ನುಡಿದರು.

ಪ್ರತಿಯೊಬ್ಬ ಲೇಖಕರಲ್ಲಿಯೂ ಅವರದ್ದೇ ಆದ ವಿಶಿಷ್ಟವಾದ ಒಕ್ಕಣಿಕೆ ಇರುತ್ತದೆ. ಅಲ್ಲದೆ, ಕವಿಯಾದವರಿಗೆ ಹಿಂಜರಿಕೆ ಗುಣ ಇರುತ್ತದೆ. ಕಥೆಯಲ್ಲಿ ಒಂದು ಶಬ್ದ ಹೆಚ್ಚಾಗುವಂತಿಲ್ಲ. ಎಲ್ಲಿ ತಪ್ಪಾಗುತ್ತದೆ ಎಂಬ ಭಯವಿರುತ್ತದೆ. ಅದಕ್ಕೆ ಬರಹಗಾರರ ಪ್ರತಿ ಪದದ ನಡುವೆಯೂ ಜಾಗೃತೆಯನ್ನು ಕಾಯ್ದಿಟ್ಟುಕೊಳ್ಳಬೇಕು ಎಂದರು.

ಹಾಸ್ಯ ಕವಿ ಡುಂಡಿರಾಜ್‌ರ ಕತೆಗಳು ಹರಿಕಥೆ ಇದ್ದಂತೆ. ಬಸವರಾಜು ಅವರ ಬರಹಗಳಲ್ಲಿ ಅರ್ಥವಂತಿಕೆಯ ಭಾವಗಳಿದ್ದರೆ, ದುಂಡಿರಾಜು ಅವರ ಕೃತಿಗಳಲ್ಲಿ ಅರ್ಥವಂತಿಕೆಯ ಗೋಜು ಮತ್ತು ಭಾರವಿಲ್ಲ. ವಿಕ್ರಮ್ ಅವರ ಹಮಾರಾ ಬಜಾಜ್‌ನಲ್ಲಿ ತಂದೆಯ ನೆನಪು ಇದೆ. ಕೊಳ್ಳದ ಹಾದಿ ಕೃತಿಯೂ ಶರಾವತಿ ನದಿ ತಡದಲ್ಲಿನ ಕಥನ ತಿಳಿಸುತ್ತದೆ ಎಂದು ಹೇಳಿದರು.

ಪತ್ರಕರ್ತ ಹರೀಶ್ ಕೇರ ಮಾತನಾಡಿ, ದುಂಡಿರಾಜ್ ರ ಕರೆಗಳು ಸಾರ್ ಕರೆಗಳು ಪುಸ್ತಕದಲ್ಲಿನ ಕತೆಗಳು ಸತ್ಯ ಮತ್ತು ಶಾಶ್ವತವಿದೆ. ಕೃತಿಯು ಓದಿಸಿಕೊಂಡು ಹೋಗುವಂತಿದ್ದು, ಪುಸ್ತಕದಲ್ಲಿರುವ 40 ಕತೆಗಳು ನಕ್ಕು ನಗಿಸುತ್ತವೆ. ಹಾಸ್ಯಕ್ಕೆ ಸಬ್ಯತೆ, ಸಂಯಮವಿದೆ. ಪದಗಳ ಜೊತೆ ಆಟವಾಡಿದ್ದಾರೆ. ಅವಮಾನ, ಗೊರಕೆ ಬಗ್ಗೆಯೂ ಅರ್ಥಗರ್ಭಿತವಾಗಿ ಬರೆದು ಹನಿಗವನಗಳ ಗುಣ ಗದ್ಯದಲ್ಲಿಯೂ ಬಂದಿದೆ ಎಂದು ಅಭಿಪ್ರಾಯಪಟ್ಟರು.

ನಾಟಕಕಾರ ಎಸ್. ಸುರೇಂದ್ರನಾಥ್ ಮಾತನಾಡಿ, ಶೂನ್ಯದಲ್ಲಿ ಕತೆ ಹುಟ್ಟಲ್ಲ, ಅನುಭವ ಮುಖ್ಯ. ಕೇಳಿದ್ದು, ಓದಿದ್ದು, ನಡೆದಿದ್ದ ಘಟನೆಗಳು ಆಗಿರಬಹುದು. ಇದನ್ನು ಆಧಾರವಾಗಿಟ್ಟುಕೊಂಡು ಕತೆ ರಚನೆಯಾಗುತ್ತದೆ. ಅನುಭವ ಇಲ್ಲದೇ ಸಾಹಿತ್ಯವಾಗಲ್ಲ. ಕೇವಲ ಅನುಭವ ಸಾಹಿತ್ಯವಲ್ಲ. ಕವಿಗೆ ಕಲ್ಪನೆ ಇರಬೇಕು. ಸಾಹಿತ್ಯಕ್ಕೆ ಅನುಭವ ಮತ್ತು ಕಲ್ಪನೆ ಬೇಕು. ಕೆಲ ಕತೆಗಳು ತಾರ್ಕಿಕ ವಾಗಿದ್ದರೂ, ಅತಾರ್ಕಿಕವಾಗಿರುತ್ತವೆ. ತರ್ಕವನ್ನು ಮೀರಿದ ಕತೆಗಳೂ ರಚನೆಯಾಗಿವೆ. ಕತೆ ಅರ್ಥ ಮಾಡಿಕೊಳ್ಳಲೂ ಅನುಭವ ಬೇಕು ಎಂದರು.

ಪುಸ್ತಕಗಳ ಬಿಡುಗಡೆ

ಎಚ್.ದುಂಡಿರಾಜ್ ಅವರ ಕರೆಗಳು ಸಾರ್ ಕರೆಗಳು ಲಘುಧಾಟಿಯ ಲೇಖನಗಳು, ಜಿ.ಪಿ.ಬಸವರಾಜು ಅವರ ಕೊಳ್ಳದ ಹಾದಿ ಕಲೆಗಳು, ವಿಕ್ರಮ ಹತ್ವಾರ ಅವರ ಹಮಾರಾ ಬಜಾಜ್, ರಾಜು ಹೆಗೆಡೆ ಅವರ ಜಾಂಬ್ಳಿ ಟುವಾಲು ಪುಸ್ತಕಗಳನ್ನು ಕವಿ ಜಯಂತ್ ಕಾಯ್ಕಿಣಿ ಬಿಡುಗಡೆ ಮಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X