Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ29 April 2019 12:01 AM IST
share
ಓ ಮೆಣಸೇ…

ಸಿಎಂ ಆಗುವ ವಿಷಯದಲ್ಲಿ ನನಗೆ ಆಸೆ ಇದೆಯೇ ಹೊರತು ದುರಾಸೆ ಇಲ್ಲ - ಎಂ.ಬಿ.ಪಾಟೀಲ್, ಸಚಿವ
 
ಕಾಂಗ್ರೆಸ್‌ನ ಉಳಿದವರ ಪಾಲಿಗೆ ಇದು ದುರಾಸೆಯಂತೆ ಕಾಣುತ್ತಿದೆ.

---------------------

ಬಾಬರಿ ಮಸೀದಿಯನ್ನು ಧ್ವಂಸ ಮಾಡಿದಕ್ಕೆ ನನಗೆ ಹೆಮ್ಮೆ ಇದೆ -ಸ್ವಾಧ್ವ್ವಿ ಪ್ರಜ್ಞಾಸಿಂಗ್ ಠಾಕೂರ್, ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮತ್ತು ಕರ್ಕರೆಯನ್ನು ಕೊಂದವರ ಕುರಿತಂತೆಯೂ ಹೆಮ್ಮೆಯಿದ್ದಂತಿದೆಯಲ್ಲ?

---------------------

ಪ್ರಧಾನಿ ಮೋದಿಯನ್ನು ತೋರಿಸಿ ಮತ ಕೇಳುವುದೆಂದರೆ ಅಪ್ಪನನ್ನು ತೋರಿಸಿ ಮಗನಿಗೆ ಹೆಣ್ಣು ಕೇಳಿದಂತೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಪ್ರಿಯಾಂಕಾ ಗಾಂಧಿಯನ್ನು ತೋರಿಸಿ ಮತ ಯಾಚಿಸಿದರೆ?
---------------------

ನನಗೀಗ ಮಂಡ್ಯವೇ ಸಿಂಗಾಪುರ - ಸುಮಲತಾ ಅಂಬರೀಷ್, ಮಂಡ್ಯ ಪಕ್ಷೇತರ ಲೋಕಸಭಾ ಅಭ್ಯರ್ಥಿ
ಫಲಿತಾಂಶ ಉಲ್ಟಾ ಹೊಡೆದರೆ ಸಿಂಗಾಪುರವೇ ಮಂಡ್ಯ ಇರಬೇಕು, ಅಲ್ಲವೇ?

---------------------

ನನ್ನ ನಾಲಿಗೆ ಉದ್ದವಿಲ್ಲ, ಎಲ್ಲರಂತೆಯೇ ಇದೆ - ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

ಅದು ನಾಲಗೆಯಲ್ಲ, ವಿಷದ ಹಾವು ಎನ್ನುವುದು ಜನರ ಭೀತಿ.

---------------------

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಎಲ್ಲ ಹಿಂದೂಗಳನ್ನು ಒಗ್ಗೂಡಿಸಿದರೆ ಅವರ ಹೆಸರಲ್ಲಿ ದೇವಸ್ಥಾನ ಕಟ್ಟಿಸುವೆ -ಆನಂದ ಅಸ್ನೋಟಿಕರ್, ಉ.ಕ.ಕ್ಷೇತ್ರದ ಮೈತ್ರಿ ಅಭ್ಯರ್ಥಿ

ಯಾವ ಮಸೀದಿಯನ್ನು ಒಡೆದು?
---------------------

ನನಗೆ ಬಿಜೆಪಿ ಸೆಟ್ಟಾಗುತ್ತಿಲ್ಲ -ಡಾ.ಉಮೇಶ್ ಜಾಧವ್, ಕಲಬುರಗಿ ಬಿಜೆಪಿ ಅಭ್ಯರ್ಥಿ
ಪ್ರಸ್ತದ ಹೊತ್ತಿನಲ್ಲಿ ವಧುವಿನ ಕುರಿತಂತೆ ದೂರು.

---------------------

ಮೋದಿ ಹೆಸರಲ್ಲಿ ಮತಯಾಚನೆ ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಬಹುಶಃ ಆರೆಸ್ಸೆಸ್‌ನ ಭವಿಷ್ಯದ ಬಗ್ಗೆ ಅವರು ಯೋಚಿಸುತ್ತಿರಬೇಕು.

---------------------

ಮೂಲತಃ ನಾನೊಬ್ಬಳು ನಟಿ - ಸ್ಮತಿ ಇರಾನಿ, ಕೇಂದ್ರ ಸಚಿವೆ

ಸಂಸತ್ತಿನಲ್ಲಿ ಚೆನ್ನಾಗಿಯೇ ನಟಿಸಿದ್ದೀರಿ ಬಿಡಿ.

---------------------

ಸಿನೆಮಾದವರು ಜನರ ಆಸ್ತಿ -ಯಶ್, ನಟ

ನಿಮ್ಮ ಆಸ್ತಿಯಲ್ಲಿ ಅವರು ಪಾಲು ಕೇಳಬಹುದೇ?

---------------------

ಉಗ್ರತ್ವ ಮಟ್ಟ ಹಾಕದಿದ್ದರೆ ವಿಶ್ವದ ಎಲ್ಲಾ ದೇಶಗಳೂ ಕಷ್ಟ ಅನುಭವಿಸಬೇಕಾಗುತ್ತದೆ - ವೆಂಕಯ್ಯನಾಯ್ಡು, ಉಪ ರಾಷ್ಟ್ರಪತಿ

ಅದಕ್ಕಾಗಿ ತಮ್ಮವರು ಪ್ರಜ್ಞಾಸಿಂಗ್ ಠಾಕೂರ್‌ಗೆ ಟಿಕೆಟ್ ಕೊಟ್ಟಿರಬೇಕು.

---------------------

ನಾನು ಉಪ ಮುಖ್ಯಮಂತ್ರಿ ಆಗಲ್ಲ, ಆಗುವುದಾದರೆ ಮುಖ್ಯಮಂತ್ರಿ -ಉಮೇಶ್ ಕತ್ತಿ, ಶಾಸಕ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಕನಸು ಇನ್ನೂ ಇದ್ದಂತಿದೆ.

---------------------

ಪ್ರಧಾನಿ ಹುದ್ದೆ ಹರಾಜಿಗಿಲ್ಲ - ನರೇಂದ್ರ ಮೋದಿ, ಪ್ರಧಾನಿ
ಆದರೆ ಅದರ ಘನತೆಯನ್ನು ಮಾತ್ರ ಹರಾಜಿಗಿಟ್ಟು ಬಿಟ್ಟಿರಿ.

---------------------

ಕಾಂಗ್ರೆಸ್‌ನವರ ಜಗಳದಲ್ಲಿ ನಾವಿಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸದ್ಯಕ್ಕೆ ನಿಮಗೆ ನಿಮ್ಮೆಳಗಿನ ಜಗಳವೇ ಹೆಚ್ಚಾಗಿ ಬಿಟ್ಟಂತಿದೆ.

---------------------

ಹೊಸ ಪಂಚಾಂಗದಂತೆ ಜೋತಿಷ್ಯ ಹೇಳುತ್ತ್ತಿದ್ದೇನೆ ಬಿಜೆಪಿಯವರಿಗೆ ಮೈತ್ರಿ ಸರಕಾರವನ್ನು ಅಲುಗಾಡಿಸಲೂ ಸಾಧ್ಯವಿಲ್ಲ - ಎಚ್.ಡಿ.ರೇವಣ್ಣ, ಸಚಿವ
  ಪಂಚಾಂಗ ಪ್ರಜಾಪ್ರಭುತ್ವದ ಎಷ್ಟನೆಯ ಅಂಗ?

---------------------

ನಮ್ಮ ದೇಶದಲ್ಲಿ ಯುವ ಜನರ ಬುದ್ಧಿವಂತಿಕೆಗೆ ತಕ್ಕ ಅವಕಾಶ ಸಿಗುತ್ತಿಲ್ಲ - ವಿಜಯಸಂಕೇಶ್ವರ, ಮಾಜಿ ಸಂಸದ
ನಿಮ್ಮಂತಹ ವೃದ್ಧರು ಅದಕ್ಕೆ ಅವಕಾಶ ನೀಡಬೇಕಲ್ಲ?

---------------------

ಶಾಸಕ ರಮೇಶ್ ಜಾರಕಿಹೊಳಿ ರಕ್ತ, ಡಿಎನ್‌ಎ ಕಾಂಗ್ರೆಸ್‌ನದ್ದು - ದಿನೇಶ್‌ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಹೌದು, ಆ ಕಾರಣದಿಂದಲೇ ಅವರು ಸಮಯಸಾಧಕರಂತೆ ವರ್ತಿಸುತ್ತಿದ್ದಾರೆ.

---------------------

ಬಿಜೆಪಿ ಎಂದಿಗೂ ಭಯೋತ್ಪದಕರ ಜೊತೆ ಇಲು - ಇಲು ( ಐ ಲವ್ ಯೂ) ಮಾಡುವುದಿಲ್ಲ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಮತ್ತೇಕೆ ಕಾಶ್ಮೀರದಲ್ಲಿ ಪಿಡಿಪಿ ಜೊತೆಗೆ ಇಲು ಇಲು ಮಾಡಿದ್ದು?

---------------------

ಹಸಿರು ಧ್ವಜ ಕಂಡರೆ ಪಾಕಿಸ್ತಾನ ನೆನಪಾಗುತ್ತದೆ - ಗಿರಿರಾಜ್‌ಸಿಂಗ್, ಕೇಂದ್ರ ಸಚಿವ
ಚುನಾವಣೆ ಪ್ರಚಾರದಲ್ಲಿ ಅದೊಂದು ಧ್ವಜ ಹಾರಿಸುವುದಷ್ಟೇ ಬಾಕಿಯಿತ್ತು.

---------------------

ಅಮೃತಕ್ಕಾಗಿ ಎಲ್ಲ ದೇವತೆಗಳು ಒಂದಾದಂತೆ ಹಿಂದೂ ಧರ್ಮದ ರಕ್ಷಣೆಗೆ ಎಲ್ಲರೂ ಒಂದುಗೂಡಬೇಕು - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಕಡೆದವರಿಗೆ ಜಾತೀಯತೆಯ ವಿಷಯ ಮಾತ್ರ ಸಿಕ್ಕಿತಂತೆ.

--------------------

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಪ್ರತಿ ಪಕ್ಷಗಳೆಲ್ಲ ಒಂದಾಗಲಿದೆ - ವೀರಪ್ಪಮೊಯ್ಲಿ, ಕಾಂಗ್ರೆಸ್ ನಾಯಕ

ಚುನಾವಣೆಯ ಮೊದಲು ಒಂದಾಗಿದ್ದರೆ ಏನಾದರೂ ಒಂದಿಷ್ಟು ಲಾಭವಿತ್ತು.

---------------------

ಮೋದಿ ಮತ್ತೆ ಪ್ರಧಾನಿಯಾದರೆ ಅದಕ್ಕೆ ರಾಹುಲ್‌ ಗಾಂಧಿ ನೇರ ಹೊಣೆಗಾರ - ಅರವಿಂದ್‌ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಪ್ರಧಾನಿಯಾಗದಿದ್ದರೆ ಅದಕ್ಕೆ ನೀವು ಹೊಣೆಗಾರರೇ?

---------------------
ರಾಜಕಾರಣದಲ್ಲಿ ಯಾರೂ ಅಸ್ಪಶ್ಯರಲ್ಲ - ಕಮಲ್‌ಹಾಸನ್, ನಟ
  ಬಿಜೆಪಿಯೊಳಗಿನ ಮೋಹ ತುಂಬಿ ತುಳುಕುತ್ತಿರುವಂತಿದೆ.
---------------------

share
ಪಿ.ಎ.ರೈ
ಪಿ.ಎ.ರೈ
Next Story
X