ಬೌದ್ಧ ದೇವಾಲಯಗಳ ಮೇಲೆ ದಾಳಿ ಸಾಧ್ಯತೆ: ಗುಪ್ತಚರ ವರದಿ
ಕೊಲಂಬೊ, ಎ. 29: ಭಕ್ತರಂತೆ ವೇಷ ಧರಿಸಿದ ಮಹಿಳಾ ಬಾಂಬರ್ಗಳು ಶ್ರೀಲಂಕಾದ ಬೌದ್ಧ ದೇವಾಲಯಗಳಲ್ಲಿ ದಾಳಿ ನಡೆಸಲು ಹೊಂಚು ಹಾಕುತ್ತಿರುವ ಸಾಧ್ಯತೆಯಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ‘ಡೇಲಿ ಮಿರರ್’ ಸೋಮವಾರ ವರದಿ ಮಾಡಿದೆ.
ಐಸಿಸ್ ಉಗ್ರರ ಮನೆಯ ಮೇಲೆ ಇತ್ತೀಚೆಗೆ ನಡೆದ ದಾಳಿಯ ವೇಳೆ ಬಿಳಿ ವಸ್ತ್ರಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಭಯೋತ್ಪಾದಕರು ಬೌದ್ಧ ಭಕ್ತರಂತೆ ವೇಷ ಧರಿಸಿ ಬೌದ್ಧ ದೇವಾಲಯಗಳಿಗೆ ದಾಳಿ ನಡೆಸುವ ಸಾಧ್ಯತೆಯನ್ನು ಇದು ಸೂಚಿಸಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ ಎಂದು ಪತ್ರಿಕೆ ಹೇಳಿದೆ.
Next Story