ನಾಲೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಮಂಡ್ಯ,ಎ.29: ಸ್ನೇಹಿತನೊಂದಿಗೆ ಈಜಲು ನಾಲೆಗೆ ಧುಮುಕಿದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿ ಸೋಮವಾರ ನಡೆದಿದೆ.
ನಾಗಮಂಗಲ ತಾಲೂಕಿನ ಅಗ್ರಹಾರದ ನಿವಾಸಿ ಹೇಮಂತ್‍ಗೌಡ(16) ಮೃತ ವಿದ್ಯಾರ್ಥಿ. ಮದ್ದೂರು ತಾಲೂಕಿನ ಶಿವಾರಗುಡ್ಡ ನವೋದಯ ಶಾಲೆಯಲ್ಲಿ 10 ತರಗತಿ ವ್ಯಾಸಂಗ ಮಾಡಿದ್ದ ಈತ ಇತ್ತೀಚೆಗಷ್ಟೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದನು ಎಂದು ತಿಳಿದುಬಂದಿದೆ. ರಜೆ ಹಿನ್ನಲೆಯಲ್ಲಿ ಶಾಲೆಯ 8 ಮಂದಿ ಸ್ನೇಹಿತರು ಸೋಮವಾರ ಬೆಳಗ್ಗೆ ಮೇಲುಕೋಟೆಗೆ ಪ್ರವಾಸ ಹೊರಟಿದ್ದರು.
ಪ್ರವಾಸ ಮುಗಿಸಿ ಸ್ನೇಹಿತ ಗುಣಶೇಖರ್ ಗ್ರಾಮವಾದ ಗುನ್ನಾಯಕನಹಳ್ಳಿಗೆ ಎಲ್ಲರೂ ತೆರಳಿದ್ದಾರೆ. ಈ ವೇಳೆ ಗ್ರಾಮದ ಹೊರವಲಯದಲ್ಲಿರುವ ವಿಸಿ ನಾಲೆಯಲ್ಲಿ ಗುಣಶೇಖರ್ ಈಜುತ್ತಿದ್ದಾಗ, ಈಜು ಬಾರದ ಹೇಮಂತ್ ಟ್ಯೂಬ್‍ನ ಸಹಾಯದಿಂದ ಕಾಲುವೆಗೆ ಧುಮುಕಿ ಆಯತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಕಾಲುವೆಯಲ್ಲಿ ಈಜುತ್ತಿದ್ದ ಗುಣಶೇಖರ್ ಮತ್ತು ನಾಲೆ ಮೇಲಿದ್ದ ಸ್ನೇಹಿತರು ಹೇಮಂತ್‍ನನ್ನು ಬದುಕಿಸಲು ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ಆಳವಾದ ಕಾಲುವೆ, ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಹೇಮಂತ್ ಕೊಚ್ಚಿ ಹೋಗಿದ್ದಾನೆ.
ಪೊಲೀಸರು ಮತ್ತು ಗ್ರಾಮಸ್ಥರು ರಾತ್ರಿ ಬಹುಹೊತ್ತಿನವರೆಗೆ ಹೇಮಂತ್ ಗೌಡನ ಹುಡಕಾಟದಲ್ಲಿದ್ದರು.







