ಐಪಿಎಲ್ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ರಬಾಡಗೆ ಅಗ್ರಸ್ಥಾನ

ಹೊಸದಿಲ್ಲಿ, ಎ.29: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಕಾಗಿಸೊ ರಬಾಡ 47 ಓವರ್‌ಗಳಲ್ಲಿ ಒಟ್ಟು 25 ವಿಕೆಟ್‌ಗಳನ್ನು ಪಡೆದು ಈ ವರ್ಷದ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.
ರವಿವಾರ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿಯ 2 ಪ್ರಮುಖ ವಿಕೆಟ್ ಪಡೆದ ರಬಾಡ ಡೆಲ್ಲಿ ತಂಡ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ನೆರವಾಗಿದ್ದಾರೆ. ರಬಾಡ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಪಿನ್ ಬೌಲರ್ ಇಮ್ರಾನ್ ತಾಹಿರ್ 2ನೇ ಸ್ಥಾನದಲ್ಲಿದ್ದಾರೆ. ತಾಹಿರ್ 46 ಓವರ್‌ಗಳಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ತಾಹಿರ್ ಸಹ ಆಟಗಾರ ದೀಪಕ್ ಚಹಾರ್ 46 ಓವರ್‌ಗಳಲ್ಲಿ 15 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ.
ಆರ್‌ಸಿಬಿಯ ಯಜುವೇಂದ್ರ ಚಹಾಲ್ 45 ಓವರ್‌ಗಳಲ್ಲಿ 16 ವಿಕೆಟ್‌ಗಳನ್ನು ಪಡೆದು 3ನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಚಹಾಲ್ 2 ವಿಕೆಟ್ ಪಡೆದಿದ್ದರು. ಶ್ರೇಯಸ್ ಗೋಪಾಲ್ 43 ಓವರ್‌ಗಳಲ್ಲಿ 15 ವಿಕೆಟ್ ಪಡೆದು 4ನೇ ಸ್ಥಾನದಲ್ಲಿದ್ದಾರೆ. ಮುಹಮ್ಮದ್ ಶಮಿ, ಜಸ್‌ಪ್ರಿತ್ ಬುಮ್ರಾ, ಆರ್. ಅಶ್ವಿನ್, ಕ್ರಿಸ್ ಮೊರಿಸ್ ಹಾಗೂ ಲಸಿತ್ ಮಾಲಿಂಗ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.





