Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಎಸೆಸೆಲ್ಸಿ ಪರೀಕ್ಷೆ: ಕೋಟದ ಅನಘ ಉಡುಪ...

ಎಸೆಸೆಲ್ಸಿ ಪರೀಕ್ಷೆ: ಕೋಟದ ಅನಘ ಉಡುಪ ರಾಜ್ಯಕ್ಕೆ ತೃತೀಯ

ವಾರ್ತಾಭಾರತಿವಾರ್ತಾಭಾರತಿ30 April 2019 8:04 PM IST
share
ಎಸೆಸೆಲ್ಸಿ ಪರೀಕ್ಷೆ: ಕೋಟದ ಅನಘ ಉಡುಪ ರಾಜ್ಯಕ್ಕೆ ತೃತೀಯ

ಉಡುಪಿ, ಎ.30: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅನಘ ಉಡುಪ 623 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ತೃತೀಯ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕೋಟ ಮಣೂರು ನಿವಾಸಿ ನಾಗೇಶ್ ಉಡುಪ ಹಾಗೂ ವಿನಯ ಉಡುಪ ದಂಪತಿ ಪುತ್ರಿ ಅನಘ ಉಡುಪ, ಸಂಸ್ಕೃತದಲ್ಲಿ 125, ಕನ್ನಡದಲ್ಲಿ 100, ಇಂಗ್ಲಿಷ್‌ನಲ್ಲಿ 100, ವಿಜ್ಞಾನದಲ್ಲಿ 100, ಗಣಿತದಲ್ಲಿ 100, ಸಮಾಜ ವಿಜ್ಞಾ ದಲ್ಲಿ 98 ಅಂಕವನ್ನು ಗಳಿಸಿದ್ದಾರೆ.

ನಾಗೇಶ್ ಉಡುಪ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ. ‘ನಮ್ಮದೆ ಕಾಲೇಜಿನಲ್ಲಿ ಪಿಯುಸಿಯಲ್ಲಿ ವಿಜ್ಞಾನವನ್ನು ಕಲಿತು, ಮುಂದೆ ಏರೋ ನಾಟಿಕಲ್ ಇಂಜಿನಿಯರಿಂಗ್ ಕಲಿಯಬೇಕೆಂಬ ಗುರಿ ಹೊಂದಿದ್ದೇನೆ’ ಎಂದು ಅನಘ ತಿಳಿಸಿದ್ದಾರೆ.

‘ನನ್ನ ಈ ಸಾಧನೆಗೆ ತಂದೆ ತಾಯಿ ಹಾಗೂ ಶಿಕ್ಷಕರ ಪ್ರೋತ್ಸಾಹ ಮುಖ್ಯ. ನನ್ನಷ್ಟೆ ಶ್ರಮವನ್ನು ಅವರು ಕೂಡ ಹಾಕಿರುವುದರಿಂದ ಈ ಸಾಧನೆ ಮಾಡಲಾ ಯಿತು. ಪರೀಕ್ಷೆಗಾಗಿ ಟೈಮ್‌ಟೇಬಲ್ ಪ್ರಕಾರ ಓದುತ್ತಿದ್ದೆ. ಯಾವುದೇ ಕೋಚಿಂಗ್ ಕ್ಲಾಸ್‌ಗೆ ಹೋಗದೆ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಸಂದೇಹ ಇರುವಲ್ಲಿ ಶಿಕ್ಷಕರಲ್ಲಿ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆ. ಮೊಬೈಲ್‌ನಲ್ಲಿ ನನಗೆ ಆಸಕ್ತಿ ಇಲ್ಲದೆ ಇರುವುದರಿಂದ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ನಾನು ಇಲ್ಲ’ ಎಂದು ಅವರು ಹೇಳಿದರು.

ಉಡುಪಿ ಜಿಲ್ಲೆಯ ಐವರು ವಿದ್ಯಾರ್ಥಿಗಳಿಗೆ 622 ಅಂಕ

ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಐವರು ವಿದ್ಯಾರ್ಥಿಗಳು 622 ಅಂಕ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಧನ್ಯಶ್ರೀ: ಅಜ್ಜರಕಾಡು ಸೈಂಟ್ ಸಿಸಿಲಿ ಪ್ರೌಢಶಾಲೆಯ ವಿದ್ಯಾರ್ಥಿನಿ ಧನ್ಯಶ್ರೀ ಗಣಿತ 100, ವಿಜ್ಞಾನ 100, ಸಮಾಜ 100, ಕನ್ನಡ 100, ಇಂಗ್ಲಿಷ್ 123, ಹಿಂದಿ 93 ಅಂಕಗಳಿಸಿದ್ದಾರೆ. ಇವರು ಚಿಟ್ಪಾಡಿಯ ನಿವಾಸಿ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಸೇತು ಮಾಧವ ರಾವ್ ಹಾಗೂ ಎಲ್‌ಐಸಿ ಉದ್ಯೋಗಿ ಸುಮತಿ ದಂಪತಿ ಪುತ್ರಿ.

‘ಪೋಷಕರು, ಶಿಕ್ಷಕರ ಸಹಕಾರ, ಟ್ಯೂಶನ್ ತರಗತಿ ಮಾರ್ಗದರ್ಶನ ನನ್ನ ಸಾಧನೆಯ ಹಿಂದಿನ ಶಕ್ತಿ. ಬೆಳಗ್ಗೆ ಮತ್ತು ಸಂಜೆ, ರಾತ್ರಿ ಮೂರು ಹಂತದ ನಿರ್ದಿಷ್ಟ ಅವಧಿಯಲ್ಲಿ ಓದುತ್ತಿದ್ದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡು ವೈದ್ಯೆಯಾಗುವ ಕಸನಸ್ಸು ಹೊಂದಿದ್ದೇನೆ ಎಂದು ಧನ್ಯಶ್ರೀ ತಿಳಿಸಿದರು.

ಚಂದನ ಶೆಣೈ: ಮುದರಂಗಡಿ ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಚಂದನ ಶೆಣೈ ಕನ್ನಡ- 125, ಇಂಗ್ಲಿಷ್-100, ಹಿಂದಿ- 100, ಸಮಾಜ- 97, ವಿಜ್ಞಾನ- 100, ಗಣಿತ- 100 ಅಂಕಗಳನ್ನು ಗಳಿಸಿ ದ್ದಾರೆ. ಪಡುಬಿದ್ರೆಯ ನಿವಾಸಿಯಾಗಿರುವ ಇವರ ತಂದೆ ಗಣೇಶ್ ಶೆಣೈ ಕೃಷಿಕ ರಾಗಿದ್ದು, ತಾಯಿ ವಿದ್ಯಾ ಶೆಣೈ ಗೃಹಿಣಿಯಾಗಿದ್ದಾರೆ.

‘ಟ್ಯುಶನ್ ತರಗತಿಗಳಿಗೆ ಹೋಗದೆ ಪ್ರತಿದಿನ ನಾಲ್ಕು ಗಂಟೆ ಓದುತ್ತಿದ್ದೆ. ತಂದೆ ತಾಯಿ, ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದೇನೆ. ಪಿಯುಸಿ ಯಲ್ಲಿ ಕಾಮರ್ಸ್ ಆಯ್ದುಕೊಳ್ಳಲಿದ್ದೇನೆ. ಮುಂದೆ ಏನಾಗಬೇಕೆಂಬುದನ್ನು ಪಿಯುಸಿ ನಂತರ ನಿರ್ಧಾರ ಮಾಡುತ್ತೇನೆ’ ಎಂದು ಚಂದನ ಶೆಣೈ ತಿಳಿಸಿದರು.
ಸುಮಂತ್ ಕಾರಂತ್: ಉಡುಪಿ ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಮಂತ್ ಎಸ್.ಕಾರಂತ್ ಇಂಗ್ಲಿಷ್- 124, ಕನ್ನಡ 100, ಹಿಂದಿ 100, ಗಣಿತ 98, ವಿಜ್ಞಾನ 100, ಸಮಾಜ ವಿಜ್ಞಾನ 100 ಅಂಕ ಗಳಿಸಿದ್ದಾರೆ. ಕಡಿಯಾಳಿ ನಿವಾಸಿಯಾಗಿರುವ ಇವರ ತಂದೆ ಎನ್.ಸುರೇಶ್ ಸುಗುಣ ಪ್ರಿಂಟರ್ಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದರೆ, ತಾಯಿ ಹೇಮ ಗೃಹಿಣಿಯಾಗಿದ್ದಾರೆ.

‘ತಂದೆ, ತಾಯಿ, ಶಿಕ್ಷಕರ ಪ್ರೋತ್ಸಾಹದಿಂದ ಇಷ್ಟೊಂದು ಅಂಕಗಳಿಸಲು ಸಾಧ್ಯವಾಗಿದೆ. ತರಗತಿಯಲ್ಲಿ ಶಿಕ್ಷಕರು ವಿಷಯಗಳನ್ನು ಚೆನ್ನಾಗಿ ಕಲಿಸಿದ್ದರಿಂದ, ಮನೆಯಲ್ಲಿ ಅದನ್ನು ಮತ್ತೆ ಮತ್ತೆ ಓದಿ, ಮನನ ಮಾಡಿಕೊಳ್ಳುತ್ತಿದ್ದೆ. ಪಿಯುಸಿ ಯಲ್ಲಿ ಪಿಸಿಎಂಬಿ ವಿಷಯ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಸುಮಂತ್ ಕಾರಂತ್ ತಿಳಿಸಿದ್ದಾರೆ.

ಸುಪ್ರಿತಾ ನಾಯಕ್:  ಉಡುಪಿ ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಪ್ರಿತಾ ನಾಯಕ್ ಇಂಗ್ಲಿಷ್ 124, ಕನ್ನಡ 100, ಹಿಂದಿ 100, ಗಣಿತ 98, ವಿಜ್ಞಾನ 100, ಸಮಾಜ 100 ಅಂಕಗಳನ್ನು ಪಡೆದಿದ್ದಾರೆ. ಇವರು ಮಣಿಪಾಲ ಎಂಐಟಿಯ ಲೈಬ್ರರಿ ಉದ್ಯೋಗಿ ಸುರೇಶ್ ನಾಯಕ್ ಹಾಗೂ ಕೆಎಂಸಿಯ ಸೀನಿಯರ್ ನರ್ಸ್ ಗೀತಾ ಎಸ್.ನಾಯಕ್ ದಂಪತಿ ಪುತ್ರಿ.

‘ಪರೀಕ್ಷೆ ಸಮಯದಲ್ಲಿ ಒತ್ತಡ ಇಲ್ಲದೆ ಓದಿದ ಪರಿಣಾಮ ಈ ಸಾಧನೆ ಮಾಡಲು ಸಾಧ್ಯವಾಯಿತು. ಭಾಷಣ ಸೇರಿದಂತೆ ಪಠ್ಯೇತರ ಚಟುವಟಿಕೆ ತೊಡಗಿಸಿಕೊಂಡಿದ್ದೆ. ಟ್ಯೂಶನ್, ಕೋಚಿಂಗ್ ಪಡೆದುಕೊಳ್ಳದೆ ಅಂದಿನ ಪಾಠ ವನ್ನು ಅಂದೇ ಮನೆಯಲ್ಲಿ ಬಂದು ಓದುತ್ತಿದ್ದೆ. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡು ಕಣ್ಣಿನ ವೈದ್ಯೆಯಾಗುವ ಕನಸು ಹೊಂದಿದೆ್ದೀನೆ ಎನ್ನುತ್ತಾರೆ ಸುಪ್ರಿತಾ ನಾಯಕ್.

ಪ್ರಾಪ್ತಿ ಶೆಟ್ಟಿ: ಕಾರ್ಕಳ ಕುಕ್ಕುಂದೂರು ಗಣಿತ ನಗರದ ಕಾರ್ಕಳ ಜೆಎನ್‌ಎ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾಪ್ತಿ ಶೆಟ್ಟಿ, ಇಂಗ್ಲಿಷ್ 124, ಹಿಂದಿ 99, ಕನ್ನಡ 100, ಗಣಿತ 100, ವಿಜ್ಞಾನ 100, ಸಮಾಜ 99 ಅಂಕ ಗಳಿಸಿದ್ದಾರೆ. ಇವರು ಬೈಲೂರಿನ ಉದ್ಯಮಿ ವಿನಯ ಕುಮಾರ್ ಶೆಟ್ಟಿ ಹಾಗೂ ನಿಟ್ಟೆ ಇಂಜಿನಿಯ ರಿಂಗ್ ಕಾಲೇಜಿನ ಉದ್ಯೋಗಿ ಜ್ಯೋತಿ ಶೆಟ್ಟಿ ದಂಪತಿಯ ಪುತ್ರಿ.

‘ಪೋಷಕರು, ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಮಾಡಿದ್ದೇನೆ. ಮನೆಯಲ್ಲಿ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಓದುತ್ತಿದೆ. ಮುಂದೆ ಪಿಯುಸಿ ಯಲ್ಲಿ ವಿಜ್ಞಾನ ಆಯ್ದುಕೊಂಡು ವೈದ್ಯೆಯಾಗುವ ಕನಸು ಹೊಂದಿದ್ದೇನೆ ಎಂದು ಪ್ರಾಪ್ತಿ ಶೆಟ್ಟಿ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X