ಎಸ್ಡಿಎಸಿಯು(ಆಟೋ ಯೂನಿಯನ್) ಬಂಟ್ವಾಳ ತಾಲೂಕು ಪದಾದಿಕಾರಿಗಳ ಆಯ್ಕೆ

ಬಂಟ್ವಾಳ, ಎ. 30: ಸೋಶಿಯಲ್ ಡೆಮೋಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಸಂಶುದ್ದೀನ್ ಪಲ್ಲಮಜಲ್, ಪ್ರಧಾನ ಕಾರ್ಯದರ್ಶಿಯಾಗಿ ಇಲ್ಯಾಸ್ ವಗ್ಗ, ಉಪಾಧ್ಯಕ್ಷರಾಗಿ ಯಾಕೂಬ್ ಮದ್ದ, ಜೊತೆ ಕಾರ್ಯದರ್ಶಿಯಾಗಿ ಜಲೀಲ್ ವಿಟ್ಲ, ಕೋಶಾಧಿಕಾರಿಯಾಗಿ ಮುಸ್ತಕ್ ಬಿಸಿರೋಡ್, ಸದಸ್ಯರಾಗಿ ಇಸ್ಮಾಯಿಲ್ ಕೈಕಂಬ, ಅಝೀಝ್ ಕಾರಾಜೆ, ಲತೀಫ್ ಬಂಟ್ವಾಳ, ಝಕರಿಯ ವಿಟ್ಲ, ಇಬ್ರಾಹಿಮ್ ಕೈಕಂಬ, ಹನೀಫ್ ಸರಪಾಡಿಯವರನ್ನು ಆಯ್ಕೆ ಮಾಡಲಾಯಿತು.
ಅಸಂಘಟಿತವಾದ ಕಾರ್ಮಿಕರು ಸಂಘಟಿತವಾಗಿ ಸಮಾಜದಲ್ಲಿ ಘನತೆ ಗೌರವದಿಂದ ಜೀವಿಸಲು ಪ್ರಯತ್ನಿಸಬೇಕು ಈ ನಿಟ್ಟಿನಲ್ಲಿ ಆಟೋ ಯೂನಿಯನ್ ಕಾರ್ಯಚರಿಸಲಿದೆ ಎಂದು ಎಸ್ಡಿಟಿಯು ಜಿಲ್ಲಾ ಸಂಚಾಲಕ ಜಾಬಿರ್ ಅರಿಯಡ್ಕ ಈ ಸಂದರ್ಭ ಮಾತನಾಡಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು
ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್ಎಚ್, ತಾಲೂಕು ಸಂಚಾಲಕ ಮಾಲಿಕ್ ಕೊಳಕೆ ಯೂನಿಯನ್ ಅಗತ್ಯತೆ ಬಗ್ಗೆ ಮಾತನಾಡಿದರು, ಕಳೆದ ಸಾಲಿನ ಯೂನಿಯನ್ ಬಂಟ್ವಾಳ ತಾಲೂಕು ಪ್ರ. ಕಾರ್ಯದರ್ಶಿ ಹಾಲಿ ಜಿಲ್ಲಾಧ್ಯಕ್ಷ ಕಾದರ್ ಫರಂಗಿಪೇಟೆ ವರದಿ ಮಂಡಿಸಿದರು. ಸಂಶುದ್ದೀನ್ ನಿರೂಪಿಸಿ, ವಂದಿಸಿದರು.





