ಮಟ್ಕಾ ಜುಗಾರಿ: ಮೂವರ ಬಂಧನ
ಕೋಟ, ಎ.30: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ.29ರಂದು ಮಟ್ಕಾ ಜುಗಾರಿಗೆ ಸಂಬಂಧಿಸಿ ಕಾರ್ಕಡ ಗ್ರಾಮದ ಡಿವೈನ್ ಪಾರ್ಕ್ ರಿಕ್ಷಾ ನಿಲ್ದಾಣದ ಬಳಿ ಕಾರ್ಕಡ ನಿವಾಸಿ ಸುಕೇಶ್ (25), ಬೇಳೂರು ಗ್ರಾಮದ ಮೊಗೆಬೆಟ್ಟು ಫಿಶ್‌ಲ್ಯಾಂಡ್ ಹೋಟೆಲ್ ಎದುರು ಸ್ಥಳೀಯ ನಿವಾಸಿ ಸಂದೀಪ್ (43), ಸಾಸ್ತಾನ ಕಾಮಧೇನು ಬೇಕರಿ ಎದುರು ಗುಂಡ್ಮಿಯ ಆನಂದ ಪೂಜಾರಿ (43) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





