ಕ್ರೈಸ್ಟ್‌ಚರ್ಚ್ ಸಮೀಪ ಬಾಂಬ್ ಪತ್ತೆ; ಓರ್ವನ ಬಂಧನ
ಕ್ರೈಸ್ಟ್‌ಚರ್ಚ್ (ನ್ಯೂಝಿಲ್ಯಾಂಡ್), ಎ. 30: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್ ನಗರದ ಖಾಲಿ ನಿವೇಶನವೊಂದರಲ್ಲಿ ಸ್ಫೋಟಕ ವಸ್ತುವನ್ನೊಳಗೊಂಡ ಪೊಟ್ಟಣವೊಂದನ್ನು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ನ್ಯೂಝಿಲ್ಯಾಂಡ್ ಪೊಲೀಸರು ಮಂಗಳವಾರ ಹೇಳಿದ್ದಾರೆ.
ಈ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಕ್ರೈಸ್ಟ್‌ಚರ್ಚ್‌ನ ಫಿಲಿಪ್ಸ್‌ಟೌನ್ ಪ್ರದೇಶದ ರಸ್ತೆಗಳನ್ನು ಪೊಲೀಸರು ಮುಚ್ಚಿದ್ದಾರೆ.
ಮಾರ್ಚ್ 15ರಂದು ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕನೊಬ್ಬ 50 ಮಂದಿಯನ್ನು ಕೊಂದಿರುವುದನ್ನು ಸ್ಮರಿಸಬಹುದಾಗಿದೆ. ಆ ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.
Next Story