ಎಸೆಸೆಲ್ಸಿ ಫಲಿತಾಂಶ: ಅಲ್‌ಅಝರ್ ಆಂಗ್ಲ ಮಾಧ್ಯಮ ಶಾಲೆಗೆ ಉತ್ತಮ ಫಲಿತಾಂಶ

ಮಂಗಳೂರು, ಎ.30: ಕಣ್ಣಂಗಾರ್ ಎಜುಕೇಶನ್ ಟ್ರಸ್ಟ್ ಅಧೀನದ ಉಡುಪಿ ಜಿಲ್ಲೆಯ ಹೆಜಮಾಡಿಯ ಅಲ್ ಅಝರ್ ಆಂಗ್ಲ ಮಾಧ್ಯಮ ಶಾಲೆಯು ಎಸೆಸೆಲ್ಸಿ ಫಲಿತಾಂಶದಲ್ಲಿ ವಿಶಿಷ್ಟ ಶ್ರೇಣಿಯನ್ನು ಪಡೆದಿದೆ.
ತಹ್‌ಸಿರ್ ಹುಸೈನ್ 592 (ಶೇ.94.72) ಅಂಕಗಳೊಂದಿಗೆ ಪ್ರಥಮ ಸ್ಥಾನ, ಆಯುಷತುಲ್ ಮುನೀರ 585 (ಶೇ.93.60) ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಆಯಿಷಾ ಅಫೀಫಾ 578 (ಶೇ.92.48) ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Next Story





