48 ಪಂದ್ಯಗಳಲ್ಲಿ 36 ಮಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಹೊಸದಿಲ್ಲಿ, ಎ.30:ಇಂಡಿಯನ್ ಪ್ರಿಮಿಯರ್ ಲೀಗ್ ಟ್ವೆಂಟಿ-20ಟೂರ್ನಿಯಲ್ಲಿ ಈ ವರೆಗೆ ನಡೆದಿರುವ 48 ಪಂದ್ಯಗಳಲ್ಲಿ 36 ಮಂದಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್‌ನಲ್ಲಿ ಶೇ 80ರಷ್ಟು ಕೊಡುಗೆ ನೀಡಿರುವ ಆ್ಯಂಡ್ರೆ ರಸೆಲ್ 4 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜರಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಿಗೆ ತಲಾ 8 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ವಿವಿಧ ತಂಡಗಳ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ವಿವರ ಇಂತಿವೆ.
► ಡೆಲ್ಲಿ ಕ್ಯಾಪಿಟೆಲ್ಸ್: ಪಂದ್ಯಶ್ರೇಷ್ಠ 8
ರಿಷಭ್ ಪಂತ್(2), ಶಿಖರ್ ಧವನ್(2) ತಲಾ ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಪೃಥ್ವಿ ಶಾ, ಕಾಗಿಸೊ ರಬಾಡ, ಕೇಮೊ ಪಾಲ್, ಶ್ರೇಯಸ್ ಅಯ್ಯರ್ ತಲಾ 1 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
► ಚೆನ್ನೈ ಸೂಪರ್ ಕಿಂಗ್ಸ್: ಪಂದ್ಯಶ್ರೇಷ್ಠ 8
ಹರ್ಭಜನ್ ಸಿಂಗ್ (2) ಮತ್ತು ಶೇನ್ ವ್ಯಾಟ್ಸನ್(2) ಮತ್ತು ಎಂ.ಎಸ್.ಧೋನಿ (2) ತಲಾ ಎರಡು ಬಾರಿ, ದೀಪಕ್ ಚಹಾರ್ ಮತ್ತು ಇಮ್ರಾನ್ ತಾಹಿರ್ ತಲಾ ಒಂದು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
► ಮುಂಬೈ :ಪಂದ್ಯಶ್ರೇಷ್ಠ 7
ಹಾರ್ದಿಕ್ ಪಾಂಡ್ಯ (2), ಜಸ್‌ಪ್ರೀತ್ ಬುಮ್ರಾ , ಅಳ್ಝಾರಿ ಜೋಸೆಫ್, ಕೀರನ್ ಪೊಲಾರ್ಡ್, ಲಸಿತ್ ಮಾಲಿಂಗ , ರೋಹಿತ್ ಶರ್ಮಾ .
ಸನ್‌ರೈಸರ್ಸ್ : ಪಂದ್ಯಶ್ರೇಷ್ಠ 6 ಜಾನಿ ಬೈರ್‌ಸ್ಟೋವ್ (2) ಮತ್ತು ಡೇವಿಡ್ ವಾರ್ನರ್(2) ಎರಡು ಬಾರಿ, ರಶೀದ್ ಖಾನ್, ಮತ್ತು ಖಲೀಲ್ ಅಹ್ಮದ್ ತಲಾ 1 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
► ಕೋಲ್ಕತಾ : ಪಂದ್ಯಶ್ರೇಷ್ಠ 5
ಆ್ಯಂಡ್ರೆ ರಸೆಲ್ 4 ಬಾರಿ ಮತ್ತು ಹ್ಯಾರಿ ಗರ್ನಿ 1 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
► ಪಂಜಾಬ್: ಪಂದ್ಯಶ್ರೇಷ್ಠ 5
ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಸ್ಯಾಮ್ ಕುರ್ರನ್, ಲೋಕೇಶ್ ರಾಹುಲ್, ಆರ್.ಅಶ್ವಿನ್ ತಲಾ 1 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
►ರಾಜಸ್ಥಾನ : ಪಂದ್ಯಶ್ರೇಷ್ಠ 5
ಶ್ರೇಯಸ್ ಗೋಪಾಲ್, ಜೋಸ್ ಬಟ್ಲರ್, ಸ್ಟೀವ್ ಸ್ಮಿತ್, ವರುಣ್ ಆ್ಯರೊನ್, ಜಯದೇವ್ ಉನದ್ಕಟ್ ತಲಾ 1 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
► ಬೆಂಗಳೂರು : ಪಂದ್ಯಶ್ರೇಷ್ಠ 4
ಎಬಿ ಡಿವಿಲಿಯರ್ಸ್ 2 ಬಾರಿ, ವಿರಾಟ್ ಕೊಹ್ಲಿ ಮತ್ತು ಪಾರ್ಥಿವ್ ಪಟೇಲ್ ತಲಾ 1 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.







