ಆಸ್ಟ್ರೇಲಿಯ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ರೂಪಿಂದರ್ ವಾಪಸ್

ಹೊಸದಿಲ್ಲಿ, ಎ.28: ಆಸ್ಟ್ರೇಲಿಯ ಪ್ರವಾಸಕ್ಕೆ ಭಾರತದ ಹಾಕಿ ತಂಡ ಪ್ರಕಟಗೊಂಡಿದ್ದು, ಅನುಭವಿ ಆಟಗಾರ ರೂಪಿಂದರ್ ಪಾಲ್ ಸಿಂಗ್ ವಾಪಸಾಗಿದ್ದಾರೆ.
ಜಸರಾನ್ ಸಿಂಗ್ ತಂಡದಲ್ಲಿರುವ ಏಕೈಕ ಮುಖ. ಆಸ್ಟ್ರೇಲಿಯ ಪ್ರವಾಸ ಮೇ 10ರಂದು ಆರಂಭವಾಗಲಿದೆ. ರೂಪಿಂದರ್ ಸಿಂಗ್ ಅವರು ಗಾಯದಿಂದ ಚೇತರಿಸಿಕೊಂಡು ಬಹಳ ಸಮಯಗಳ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ. 18ನೇ ಏಷ್ಯನ್ ಗೇಮ್ಸ್ ನಲ್ಲಿ ಕೊನೆಯ ಬಾರಿ ಅವರು ಆಡಿದ್ದರು.
18 ಮಂದಿ ತಂಡದ ನಾಯಕರಾಗಿ ಮಿಡ್ ಫೀಲ್ಡರ್ ಮನ್ಪ್ರೀತ್ ಸಿಂಗ್ ಮುನ್ನಡೆಸುತ್ತಿದ್ದಾರೆ.ಸುರೇಂದರ್ ಸಿಂಗ್ ಉಪನಾಯಕರಾಗಿದ್ದಾರೆ.
ಭಾರತದ ತಂಡ
►ಗೋಲ್ ಕೀಪರ್: ಕೃಷ್ಣ ಬಿ ಪಾಠಕ್, ಪಿ.ಆರ್.ಶ್ರೀಜೇಶ್
►ಡಿಫೆಂಡರ್: ರೂಪಿಂದರ್‌ಪಾಲ್ ಸಿಂಗ್, ಸುರೇಂದರ್ ಕುಮಾರ್(ಉಪನಾಯಕ),
ಹರ್ಮನ್‌ಪ್ರೀತ್ ಸಿಂಗ್, ಬಿರೇಂದ್ರ ಲಕ್ರಾ, ಗುರೇಂದರ್ ಸಿಂಗ್, ಕೊಥ್ಜಾಜಿತ್ ಸಿಂಗ್.
►ಮಿಡ್‌ಫೀಲ್ಡರ್: ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್(ನಾಯಕ), ಜಸ್ಕರಾನ್ ಸಿಂಗ್,
ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ
►ಫಾರ್ವರ್ಡ್: ಮನ್‌ದೀಪ್ ಸಿಂಗ್, ಗುರ್ಸಾಯಿಬಿಜಿತ್ ಸಿಂಗ್, ಆಕಾಶ್‌ದೀಪ್ ಸಿಂಗ್, ಸುಮೀತ್ ಕುಮಾರ್, ಅಮ್ರಾನ್ ಖುರೈಶಿ.







