ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲು ಢಿಕ್ಕಿಯಾಗಿ ಮೂವರು ಯುವಕರು ಬಲಿ

ಹೊಸದಿಲ್ಲಿ: ಹರ್ಯಾಣದ ಪಾಣಿಪತ್ ಎಂಬಲ್ಲಿ ಬುಧವಾರ ರೈಲು ಹಳಿಯಲ್ಲಿ ಸೆಲ್ಫಿ ತೆಗೆಯುತ್ತಿದ್ದ ಮೂವರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ. ಇನ್ನೊಬ್ಬ ರೈಲು ಹಳಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ.
ಯುವಕರು ಸೆಲ್ಫಿ ತೆಗೆಯುತ್ತಿದ್ದಾಗ ರೈಲು ಬರುತ್ತಿರುವುದನ್ನು ಗಮನಿಸಿ ಪಕ್ಕದ ಇನ್ನೊಂದು ಹಳಿಗೆ ಹಾರಿದ್ದರು. ಆದರೆ ಇನ್ನೊಂದು ರೈಲು ಅವರು ಹಾರಿದ್ದ ಹಳಿಯಲ್ಲಿ ಬರುತ್ತಿತ್ತೆಂಬುದು ಅವರ ಅರಿವಿಗೆ ಬಂದಿರದ ಕಾರಣ ಮೂವರು ಬಲಿಯಾದರೆ ಇನ್ನೊಬ್ಬ ಪಕ್ಕದ ಹಳಿಗೆ ತಕ್ಷಣ ಹಾರಿದ್ದಾನೆ.
ಮೃತ ಪಟ್ಟವರಲ್ಲಿ ಇಬ್ಬರ ವಯಸ್ಸು 19 ಆಗಿದ್ದರೆ ಒಬ್ಬ 18 ವರ್ಷದವನಾಗಿದ್ದಾನೆ. ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ಪಾಣಿಪತ್ ಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ.
Next Story





