ಮಸೂದ್ ಅಝರ್ ಜಾಗತಿಕ ಉಗ್ರನೆಂದು ಘೋಷಿಸಿದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ
ನ್ಯೂಯಾರ್ಕ್, ಮೇ 1: ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕ ಮಸೂದ್ ಅಝರ್ ಜಾಗತಿಕ ಉಗ್ರನೆಂದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಬುಧವಾರ ಘೋಷಣೆ ಮಾಡಿದೆ.
ಇದರೊಂದಿಗೆ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೆಲುವಾಗಿದೆ. ಭಾರತ ಮಸೂದ್ ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮನವಿ ಮಾಡಿತ್ತು, ಆದರೆ ಚೀನಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಚೀನಾ ಆಕ್ಷೇಪವನ್ನು ಹಿಂಪಡೆದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮಂಡಳಿ ಮಸೂದ್ ಅಝರ್ ಜಾಗತಿಕ ಉಗ್ರನೆಂದು ಘೋಷಿಸಿದೆ.
Next Story