ಮೇ 2 ರಿಂದ 16: ಸಚಿವ ಯು.ಟಿ. ಖಾದರ್ ಪ್ರವಾಸ

ಮಂಗಳೂರು: ರಾಜ್ಯ ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಮೇ 2 ರಿಂದ ಮೇ 16ರತನಕ ವಿವಿಧ ಕಡೆ ಪ್ರವಾಸದಲ್ಲಿರುವರು.
ಅವಶ್ಯಕತೆ ಇರುವ ಸಾರ್ವಜನಿಕರು ಮೇ 2 ರಂದು ಬೆಳಗ್ಗೆ 8 ರಿಂದ 11ರ ತನಕ ಉಳ್ಳಾಲ ನಗರಸಭೆಯ ಮೈದಾನದಲ್ಲಿ ಭೇಟಿಯಾಗಬಹುದು ಎಂದು ತಿಳಿಸಿದ್ದಾರೆ.
ಮೇ 2 ರಂದು ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಉಪಚುನಾವಣೆಯ ಪ್ರಚಾರಕ್ಕೆ ತೆರಳಲಿರುವ ಖಾದರ್ ಅವರು ಅಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಸುಮಾ ಸಿ. ಶಿವಳ್ಳಿ ಪರ ಪ್ರಚಾರ ನಡೆಸುವರು. ಅಲ್ಲಿಂದ ಬಳಿಕ ಪವಿತ್ರ ಉಮ್ರಾ ಯಾತ್ರೆಗೆ ತೆರಳುವರು. ಮೇ 16ರ ಬಳಿಕ ಸಾರ್ವಜನಿಕ ಭೇಟಿಗೆ ಲಭ್ಯರಿರುವರು.
ಹೆಚ್ಚಿನ ಮಾಹಿತಿಗಾಗಿ ಸಚಿವರ ಆಪ್ತ ಸಹಾಯಕ ಮಹಮ್ಮದ್ ಲಿಬ್ಝತ್ 7204440444 ಅಥವಾ 7026777777 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





