ಮೈಸೂರು: ಬೈರಪ್ಪ ವಿರುದ್ದ ಪ್ರಗತಿಪರರಿಂದ ಪ್ರತಿಭಟನೆ

ಮೈಸೂರು: ಸಾಹಿತಿ ಪ್ರೊ.ಎಸ್.ಎಲ್.ಬೈರಪ್ಪ ವಿರುದ್ದ ಪ್ರಗತಿಪರರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಬುಧವಾರ ಜಮಾಯಿಸಿದ ಪ್ರತಿಭಟನಕಾರರು ಸಾಹಿತಿ ಬೈರಪ್ಪ ವಿರುದ್ದ ಧಿಕ್ಕಾರ ಕೂಗಿದರು.
ಈ ವೇಳೆ ಮಾತನಾಡಿದ ಸಾಹಿತಿ ರತಿರಾವ್, ಭೈರಪ್ಪ ಒಬ್ಬ ಮನುವಾದಿ "ನಮ್ಮ ಧರ್ಮಶಾಸ್ತ್ರವೇ ನಮಗೆ ಸಂವಿಧಾನ" ಎಂದು ಹೇಳಿರುವುದು ತಳಸಮುದಾಯ ಮತ್ತು ಮಹಿಳೆಯರನ್ನು ತುಳಿಯುವ ಯತ್ನ, "ಪತ್ನಿಯ ಅನುಮತಿ ಇಲ್ಲದೆ ಲೈಂಗಿಕ ಸಂಪರ್ಕ ಬೆಳೆಸುವುದನ್ನು ಅತ್ಯಾಚಾರ ಎಂದು ಪರಿಗಣಿಸುವ ಕಾನೂನು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ" ಎನ್ನುವ ಮೂಲಕ ಮಹಿಖಾ ವಿರೋಧಿ ನಿಲುವನ್ನು ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯ ಮೇಲೆ ಹಿಂಸೆ ಅತ್ಯಾಚಾರ ನಡೆಸುವುದು ಗಂಡನೇ ಆಗಿದ್ದರೂ ಅದು ಶಿಕ್ಷಾರ್ಹ ಅಪರಾಧ ಎಂದು ನಮ್ಮ ಕಾನೂನು ಹೇಳುತ್ತದೆ. ಆದರೆ ಕೌಟುಂಬಿಕ ಹಿಂಸೆಯ ಕಾನೂನನ್ನೇ ಧರ್ಮಶಾಸ್ತ್ರಕ್ಕೆ ವಿರುದ್ಧ, ಪರಂಪರೆಗೆ ವಿರುದ್ಧ ಎಂದು ಭೈರಪ್ಪ ಹೇಳಿರುವುದು ಎಲ್ಲಾ ಸಂವಿಧಾನವಾದಿಗಳ ಹಾಗೂ ಮಹಿಳಾ ಪರ ನಿಲುವಿನವರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಜನಾರ್ಧನ್(ಜನ್ನಿ), ದಸಂಸ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕೆ.ದೀಪಕ್, ಕೆ.ಆರ್.ಗೋಪಾಲಕೃಷ್ಣ, ಕಲೀಂ, ದೇವನೂರು ಪುಟ್ಟನಂಜಯ್ಯ, ಸೇರುದಂತೆ ಹಲವರು ಭಾಗವಹಿಸಿದ್ದರು.







