ವಿವಾದಾಸ್ಪದ ಇಂಟರ್ನೆಟ್ ಮಸೂದೆಗೆ ಪುಟಿನ್ ಸಹಿ
ಮಾಸ್ಕೋ, ಮೇ 2: ರಶ್ಯದ ‘ಸಾರ್ವಭೌಮ ಇಂಟರ್ನೆಟ್’ ಮಸೂದೆಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಸಹಿ ಹಾಕಿದ್ದು, ಅದು ಕಾನೂನಾಗಿದೆ.
ದೇಶದ ಇಂಟರ್ನೆಟನ್ನು ಪ್ರತ್ಯೇಕಿಸಲು ಈ ಕಾನೂನು ಅಧಿಕಾರಿಗಳಿಗೆ ಅವಕಾಶ ನೀಡುತ್ತದೆ. ಆದರೆ, ಮಾನವಹಕ್ಕು ಸಂಘಟನೆಗಳು ಇದನ್ನು ಪ್ರತಿಭಟಿಸಿವೆ.
ರಶ್ಯದ ಆನ್ಲೈನ್ ನೆಟ್ವರ್ಕ್ಗಳ ಭದ್ರತೆಗಾಗಿ ನೂತನ ಕಾನೂನು ಅಗತ್ಯ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಸ್ಪಷ್ಟ ಪದಗಳನ್ನು ಹೊಂದಿರುವ ಮಸೂದೆಯು ಸರಕಾರಿ ಉಸ್ತುವಾರಿಗಳಿಗೆ ಹೊಸ ಸೆನ್ಸರ್ಶಿಪ್ ಅಧಿಕಾರಗಳನ್ನು ನೀಡುತ್ತದೆ ಎಂದು ಟೀಕಾಕಾರು ಹೇಳುತ್ತಾರೆ.
Next Story