ಎಸೆಸೆಲ್ಸಿ ಪರೀಕ್ಷೆ: ತರೀಕೆರೆಯ ಓಂಪ್ರಭಾಗೆ ಶೇ.98.56 ಅಂಕ
ತರೀಕೆರೆ, ಮೇ 2: ಈ ಬಾರಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆಯ ಬಿ.ಆರ್.ಓಂಪ್ರಭಾ ಶೇ.98.56 ಅಂಕ ಪಡೆದುಕೊಂಡಿದ್ದಾಳೆ.
ತರೀಕೆರೆ ಮೂಲದವಳಾಗಿರುವ ಓಂಪ್ರಭಾ ಕನ್ನಡ 123, ಇಂಗ್ಲೀಷ್ 100, ಹಿಂದಿ, 99, ಗಣಿತ 95, ವಿಜ್ಞಾನ 99, ಸಮಾಜದಲ್ಲಿ 100 ಅಂಕಗಳಿಸಿ ಸಾಧನೆ ಮಾಡಿದ್ದು, ಈಕೆ ಬಿ.ಎನ್.ರಾಜಣ್ಣ ತುಂಗಭದ್ರ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಜಂಟಿ ಕಾರ್ಯದರ್ಶಿ ಮತ್ತು ಸಿ.ಎಂ.ಕಾವೇರಿ ದಂಪತಿಯ ಮಗಳಾಗಿದ್ದಾರೆ.
ಮಗಳ ಸಾಧನೆಗೆ ಕುಟುಂಬ ಮತ್ತು ಪೋಷಕ ವರ್ಗ, ಪೂರ್ಣಪ್ರಜ್ಞಾ ಸಂಸ್ಥೆಯ ಆಡಳಿತ ವರ್ಗ ಮತ್ತು ಶಿಕ್ಷಕ ವೃಂದಕ್ಕೆ ಬಿ.ಎನ್.ರಾಜಣ್ಣ ಅಭಿನಂದಿಸಿದ್ದಾರೆ.
Next Story