ಐಪಿಎಲ್‌ನಲ್ಲಿ ಭಾರತದ ವಿಶ್ವಕಪ್ ತಂಡದ ರಹಸ್ಯ ಸೋರಿಕೆ ?

ಮುಂಬೈ, ಮೇ 2: ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿದೇಶದ ಕೋಚ್‌ಗಳಿಗೆ ವಿವಿಧ ಐಪಿಎಲ್ ತಂಡಗಳು ಮಣೆ ಹಾಕಿದ್ದು, ಇದರಿಂದಾಗಿ ಐಪಿಎಲ್ ತಂಡಗಳಲ್ಲಿರುವ ಭಾರತದ ವಿಶ್ವಕಪ್ ತಂಡದ ಸದಸ್ಯರ ಸಾಮರ್ಥ್ಯ ಮತ್ತು ದೌರ್ಬಲ್ಯ ವಿದೇಶಿ ಕೋಚ್‌ಗಳಿಗೆ ಅರಿಯಲು ಅವಕಾಶ ಮಾಡಿ
ಕೊಟ್ಟಂತಾಗಿದೆ.
ಭಾರತ ತಂಡದ ಆರಂಭಿಕ ದಾಂಡಿಗ ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿದ್ದಾರೆ. ಆ ತಂಡದ ಕೋಚ್ ರಿಕಿ ಪಾಂಟಿಂಗ್. ಆಸ್ಟ್ರೇಲಿಯ ರಾಷ್ಟ್ರೀಯ ತಂಡಕ್ಕೆ ರಿಕಿ ಪಾಂಟಿಂಗ್ ಕೋಚ್ ಆಗಿದ್ದಾರೆ. ಅಷ್ಟು ಮಾತ್ರವಲ್ಲ ಪಾಂಟಿಂಗ್‌ಗೆ ತಂಡದಲ್ಲಿರುವ ಶ್ರೀರಾಮ್ ಸೋಮಯಾಜುಲು ಶ್ರೀಲಂಕಾ ರಾಷ್ಟ್ರೀಯ ತಂಡದ ತರಬೇತಿ ಬಳಗದಲ್ಲಿದ್ದಾರೆ.
ಶಿಖರ್ ಧವನ್‌ರ ಬ್ಯಾಟಿಂಗ್ ಒಳಗುಟ್ಟು ಪಾಂಟಿಂಗ್‌ಗೆ ಗೊತ್ತಾಗಿದೆ. ಅವರನ್ನು ಕಟ್ಟಿ ಹಾಕುವುದು ಹೇಗೆಂದು ಪಾಂಟಿಂಗ್ ತನ್ನ ತಂಡ ಆಸ್ಟ್ರೇಲಿಯದ ಆಟಗಾರರಿಗೆ ಹೇಳುವ ಸಾಧ್ಯತೆ ಇದೆ. ಅದೇ ಶ್ರೀಲಂಕಾ ತಂಡಕ್ಕೂ ಶ್ರೀರಾಮ್ ಅವರ ಮೂಲಕ ಧವನ್‌ರ ಬ್ಯಾಟಿಂಗ್ ರಹಸ್ಯ ಯಡವಟ್ಟು ಟೀಮ್ ಇಂಡಿಯಾದ ವಿಶ್ವಕಪ್ ಆಟದ ಮೇಲೆ ಪರಿಣಾಮ ಬೀಳಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಚೆನ್ನೈ ಮೂಲದ ಪ್ರಸನ್ನ ಅಗೋರಮ್ ದಕ್ಷಿಣ ಆಫ್ರಿಕ ರಾಷ್ಟ್ರೀಯ ತಂಡ ವಿಶ್ಲೇಷಕರಾಗಿದ್ದಾರೆ. ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ತರಬೇತಿ ಬಳಗದಲ್ಲ್ಲಿದ್ದಾರೆ. ಅವರು ಕಳೆದ ಎರಡು ತಿಂಗಳಿನಿಂದ ಭಾರತದಲ್ಲಿದ್ದುಕೊಂಡು ಭಾರತದ ಆಟಗಾರರ ಸಾಮರ್ಥ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕ ತಂಡದ ಆಟಗಾರರಿಗೆ ವಿಶ್ವಕಪ್ ವೇಳೆ ಪ್ರಸನ್ನ ಪಡೆದಿರುವ ಅನುಭವ ನೆರವಾಗಲಿದೆ.
ಐಪಿಎಲ್ ತಂಡದ ಕೋಚಿಂಗ್ ವಿಭಾಗದಲ್ಲಿ ವಿದೇಶದ ಮಾಜಿ ಆಟಗಾರರು ತುಂಬಿಕೊಂಡಿದ್ದಾರೆ. ಭಾರತದ ರಾಷ್ಟ್ರೀಯ ತಂಡದ ಕೋಚಿಂಗ್ ವಿಭಾಗದಲ್ಲಿರುವ ಯಾರಿಗೂ ಐಪಿಎಲ್‌ನಲ್ಲಿ ಅವಕಾಶ ಇಲ್ಲ. ಭಾರತದ ಆಟಗಾರರಿಗೆ ಸ್ವಹಿತಾಸಕ್ತಿ ಸಂಘರ್ಷ ಅಡ್ಡಿಯಾಗಿದೆ.
ಭಾರತ ತಂಡದ ಹಿರಿಯ ಆಟಗಾರರಾದ ರಾಹುಲ್ ದ್ರಾವಿಡ್, ಸೌರವ್ ಗಂಗುಲಿ ಮತ್ತು ವಿವಿಎಸ್ ಲಕ್ಷ್ಮಣ್ ಐಪಿಎಲ್‌ನಿಂದ ದೂರವಾಗಿದ್ದಾರೆ. ಇದರಿಂದಾಗಿ ಯಾರಿಗೆ ನಷ್ಟ ? ಪ್ರವೀಣ್ ಅಮ್ರೆ ಓರ್ವ ಅತ್ಯುತ್ತಮ ಬ್ಯಾಟಿಂಗ್ ಕೋಚ್. ಅವರು ಐಪಿಎಲ್‌ನಲ್ಲೇ ಉಳಿಯಬೇಕಾದರೆ ಅವರು ರಾಜ್ಯದ ತಂಡ ಅಥವಾ ಎನ್‌ಸಿಎ ಜೊತೆ ಕೆಲಸ ಮಾಡುವಂತಿಲ್ಲ. ಆದರೆ ವಿದೇಶಿ ಕೋಚ್‌ಗಳಿಗೆ ಅಂತಹ ನಿರ್ಬಂಧ ಇಲ್ಲ. ಟಾಮ್ ಮೋಡಿ ಸನ್ ರೈಸರ್ಸ್ ತಂಡದ ಕೋಚ್ ಆಗಿದ್ದಾರೆ. ಅವರಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಸೇವೆ ಸಲ್ಲಿಸುವ ಅವಕಾಶ ಇದೆ. ಸಂಜಯ್ ಬಾಂಗರ್ ಟೀಮ್ ಇಂಡಿಯಾದ ಸಹಾಯಕ ಕೋಚ್. ಆದರೆ ಅವರಿಗೆ ಐಪಿಎಲ್‌ನಲ್ಲಿ ಯಾವುದೇ ತಂಡಕ್ಕೂ ಕೋಚ್ ಆಗಿ ಸೇವೆ ಸಲ್ಲಿಸಲು ಅವಕಾಶ ಇಲ್ಲ.







