ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಡಾ. ಸಾದ್ ಬೆಳಗಾಮಿ ನೇಮಕ

ಬೆಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ 2019-23 ರ ರಾಜ್ಯಾಧ್ಯಕ್ಷರಾಗಿ ಡಾ ಮಹಮ್ಮದ್ ಸಾದ್ ಬೆಳಗಾಮಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾದ ಸಯ್ಯದ್ ಸಾದತುಲ್ಲ ಹುಸೈನಿಯವರು ನೇಮಕ ಮಾಡಿದ್ದಾರೆ.
ಡಾ. ಸಾದ್ ಬೆಳಗಾಮಿ ಖ್ಯಾತ ಮೂತ್ರತಜ್ಞರಾಗಿದ್ದು ಬೆಂಗಳೂರಿನಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದಾರೆ. ಇವರು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿ ಹಾಗು ಜಮಾಅತೆ ಇಸ್ಲಾಮೀ ಹಿಂದ್ ಬೆಂಗಳೂರು ಮೆಟ್ರೋ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
Next Story





