ಸ್ಕಾರ್ಫ್ ವಿವಾದ: ಪೊಲೀಸ್ ಕಮಿಷನರ್ ರನ್ನು ಭೇಟಿಯಾದ ಎಂಡಿಸಿ

ಮಂಗಳೂರು: ಮುಸ್ಲಿಮ್ ಡೆವಲಪ್ಮೆಂಟ್ ಕಮಿಟಿ (ಎಂಡಿಸಿ) ಪೋಲಿಸ್ ಗುರುವಾರ ಕಮಿಷನರ್ ಭೇಟಿ ಮಾಡಿ ಸ್ಕಾರ್ಫ್ ವಿವಾದದ ಬಗ್ಗೆ ಚರ್ಚೆ ನಡೆಸಿತು.
ನಿಯೋಗದಲ್ಲಿ ಎಂಡಿಸಿ ಅಧ್ಯಕ್ಷ ಅಮೀರ್ ತುಂಬೆ, ರಫೀಉದ್ದೀನ್ ಕುದ್ರೋಳಿ, ಝಾಕಿರ್ ಉಳ್ಳಾಲ, ಅಲಿ ಹಸನ್, ಶಾಕಿರ್ , ಮುಹಮ್ಮದ್ ರಫೀಕ್ ಮಾಣಿಲ ಉಪಸ್ಥಿತರಿದ್ದರು.
ಅದಕ್ಜಿಂತ ಮೊದಲು ಎಸಿಪಿ ಮತ್ತು ಡಿಸಿಪಿ ಯ ಜತೆಗೂ ಎಂಡಿಸಿ ಈ ಬಗ್ಗೆ ಚರ್ಚೆ ನಡೆಸಿತು.
ನಿಯೋಗವು ತಮ್ನ ನಿಲುವನ್ನು ಸ್ಪಷ್ಟಪಡಿಸಿದ್ದು, “ಇದು ಕೇವಲ ಒಂದು ವಿದ್ಯಾರ್ಥಿನಿಯ ಪ್ರಶ್ನೆಯಲ್ಲ.. ಇದು ಸಮುದಾಯದ ಧಾರ್ಮಿಕ ಭಾವನೆಯ ಪ್ರಶ್ನೆ. ಆದ್ದರಿಂದ ಕಾಲೇಜು ಸ್ಕಾರ್ಫ್ ಧರಿಸಲು ಅವಕಾಶ ಮಾಡಿ ಕೊಡಬೇಕು. ಪೋಲೀಸರು ಇದರಲ್ಲಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿತು.
ಎಂಡಿಸಿ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಹೋರಾಡುತ್ತಿದ್ದು ಸೌಹಾರ್ದಯುತವಾಗಿ ಇದನ್ನು ಬಗೆಹರಿಯಬಯಸುತ್ತದೆ ಎಂದು ಅದು ಇಲಾಖೆಗೆ ತಿಳಿಸಿದ್ದು, .ನ್ಯಾಯಯುತವಾಗಿ ಹೋರಾಡಲು ಸಮಿತಿ ತೀರ್ಮಾನಿಸಿದೆ.
ಮುಂದಿನ ನಡೆಯ ಕುರಿತು ಚರ್ಚಿಸಲು ಎಂಡಿಸಿ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಮೇ 5 ರ ಶುಕ್ರವಾರ ಸಾಯಂಕಾಲ 4 ಗಂಟೆಗೆ ಫಳ್ನೀರ್ ನ ಲುಲು ಸೆಂಟರ್ ನಲ್ಲಿ ಕರೆಯಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.





