ಸಿಬಿಎಸ್ಇ ಫಲಿತಾಂಶ ಪ್ರಕಟ: ಕೇಂದ್ರೀಯ ವಿದ್ಯಾಲಯ, ಲೂರ್ಡ್ಸ್, ಮೌಂಟ್ ಕಾರ್ಮೆಲ್ ಶೇ.100 ಫಲಿತಾಂಶ

ಒರೆನ್ ಜೋಶುವಾ ಸಲ್ದಾನ, ಮಹೀಂದ್ರ, ವಿಷ್ಣು ಭಾರದ್ವಾಜ್, ವಿಘ್ನೇಶ್ ರವಿಚಂದ್ರ ರಾವ್, ಹನಾನ್ ಖಾನ್, ರೋಶನ್ ನಾರಾಯಣ, ಶ್ರೇಯಸ್ ವಾಸುದೇವ್
ಮಂಗಳೂರು, ಮೇ 2: ಸಿಬಿಎಸ್ಇ 12ನೇ ತರಗತಿ ಲಿತಾಂಶ ಗುರುವಾರ ಪ್ರಕಟವಾಗಿದ್ದು, ಕೇಂದ್ರೀಯ ವಿದ್ಯಾಲಯಗಳು, ಲೂರ್ಡ್ಸ್, ವೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಗಳು ಶೇ.100 ಲಿತಾಂಶ ದಾಖಲಿಸಿವೆ.
ಪಣಂಬೂರು ಕೆವಿ: ಪಣಂಬೂರು ಕೇಂದ್ರೀಯ ವಿದ್ಯಾಲಯದಿಂದ ಪರೀಕ್ಷೆಗೆ ಹಾಜರಾದ ಎಲ್ಲ 42 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.100 ಲಿತಾಂಶ ಬಂದಿದೆ.
14 ವಿದ್ಯಾರ್ಥಿಗಳಿಗೆ ಶೇ.90ಕ್ಕಿಂತ ಅಧಿಕ ಅಂಕಗಳು ಬಂದಿದೆ. ಒಟ್ಟು 500ರಲ್ಲಿ ಹರ್ಷ ಆರ್.ಲಕ್ಕಲಕಟ್ಟಿ- 482 (ಶೇ.96.4), ಎಚ್.ಇ.ದಿಶಾ- 478 (ಶೇ.95.6), ನಿಕಿತಾ ಸಿಂಗ್- 476(95.2), ವಿದ್ಯಾರಶ್ಮಿ ಹನೇಹಳ್ಳಿ-476 (95.2), ಗೋವಿಂದ್ ಆರ್.ಶೇಖರ್- 474 (94.8) ಅಂಕ ಪಡೆದಿದ್ದಾರೆ.
ಎಕ್ಕೂರು ಕೆವಿ:ಮಂಗಳೂರು ಎಕ್ಕೂರಿನ ಕೇಂದ್ರೀಯ ವಿದ್ಯಾಲಯ-2 ನಿಂದ ಪರೀಕ್ಷೆಗೆ ಹಾಜರಾಗಿದ್ದ 24 ವಿದ್ಯಾರ್ಥಿಗಳು ಕೂಡಾ ಉತ್ತೀರ್ಣರಾಗಿ ಶೇ.100 ಲಿತಾಂಶ ದಾಖಲಾಗಿದೆ.
ಇಶಾ ಛೋಪ್ರಾ ಶೇ.89, ನೇಹಾ ಶೆ.88.8 ಮತ್ತು ಎಸ್.ಆರ್. ಧನ್ಯಾ ಶೇ.86.2 ಅಂಕ ಪಡೆದು, ವಿದ್ಯಾಲಯದ ಟಾಪರ್ಗಳಾಗಿದ್ದಾರೆ.
ಲೂರ್ಡ್ಸ್ ಸೆಂಟ್ರಲ್ ಸ್ಕೂಲ್:ಸಿಬಿಎಸ್ಇ 12ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ನಗರದ ಲೂರ್ಡ್ಸ್ ಸೆಂಟ್ರಲ್ ಶಾಲೆಗೆ ಶೇ.100 ಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 80 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದು, 30 ವಿದ್ಯಾರ್ಥಿಗಳು ಶೇ.90 ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ವಿಘ್ನೇಶ್ ರವಿಚಂದ್ರ ರಾವ್ ಪಿಸಿಎಂಸಿ-ಶೇ.97.2, ಶ್ರೇಯಸ್ ವಾಸುದೇವ್ ಪೈ ಪಿಸಿಎಂಬಿ- ಶೇ.96.8, ಹನಾನ್ ಮುಸರಿ ಖಾನ್- ವಾಣಿಜ್ಯ ವಿಭಾಗ ಶೇ.90.2 ಅಂಕಗಳೊಂದಿಗೆ ಶಾಲಾ ಮಟ್ಟದಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಮೌಂಟ್ ಕಾರ್ಮೆಲ್:ಸಿಬಿಎಸ್ಇ ಪರೀಕ್ಷೆಯಲ್ಲಿ ಮೇರಿಹಿಲ್ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶೇ.100 ಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾಗಿದ್ದ ಎಲ್ಲ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 19 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಮತ್ತು ಒಂಬತ್ತು ಮಂದಿ ಪ್ರಥಮ ಶ್ರೇಣಿ ಅಂಕ ಪಡೆದಿದ್ದಾರೆ.
ಇಲ್ಲಂತೋಡಿ ವಿಷ್ಣು ಭಾರದ್ವಾಜ್ ಪಿಸಿಎಂಸಿಯಲ್ಲಿ ಶೇ.96, ಒರೆನ್ ಜೋಶುವಾ ಸಲ್ದಾನ ಶೇ.93.6, ಮಹೀಂದ್ರ ಶೇ.93 ಮತ್ತು ರೋಶನ್ ನಾರಾಯಣ ಶೇ.92.2 ಅಂಕ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಫ್ಯಾನ್ನಿ ಮರಿಯಾ ಡಿಸೋಜ, ಡೇನಿಯಲ್ ಪ್ರಮೋದ್ ಆರೊನ್, ಹ್ಯಾನ್ಸೆಲ್ ಲಿಯೋನ್ ಮೊರಾಸ್, ಸೃಷ್ಟಿ ಎಸ್.ಶೆಟ್ಟಿ, ವಿನೋಲ್ ಕ್ರಿಸ್ ಡಿಸೋಜ, ಆ್ಯಂಡ್ರಿಯಾ ಕ್ರಿಯೇಝೆಲ್ ಡಿಸೋಜ, ರಿಯಾ ವೆನೆಸಾ ಡಿಸೋಜ, ಡೋಲೆನ್ ಕ್ರಿಸೆಲ್ ಪಿಂಟೊ, ಕಾಲ್ವಿನ್ ಆ್ಯಂಟನಿ ಕ್ಯಾಸ್ಟೆಲಿನೊ, ಚೆಮ್ನಾಡ್ ಅಬ್ದುಲ್ ಶಾಝಿನ್, ಪ್ರತೀಕ್ಷಾ, ಮ್ಯಾಕ್ಸ್ ಮೇರಿಯೊ ಡಿಸೋಜ, ಕ್ರಿಸ್ಟಲ್ ಸಾರಾ ಮಿನೇಜಸ್, ಲಿಶಾ ಆ್ಯನ್ ಪಿರೇರಾ ಮತ್ತು ಪ್ರತೀಕ್ಷಾ ಎ.ಪಿ. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.







