Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ರೈತರಿಂದ ನೇರವಾಗಿ ಮಾವು ಖರೀದಿಗೆ ಬಿ2ಸಿ...

ರೈತರಿಂದ ನೇರವಾಗಿ ಮಾವು ಖರೀದಿಗೆ ಬಿ2ಸಿ ವೆಬ್ ಪರಿಚಯ

ರಾಜ್ಯದ ಮಾವಿಗೆ ಕಾರ್‌ಸಿರಿ ಬ್ರಾಂಡ್

-ಬಾಬುರೆಡ್ಡಿ ಚಿಂತಾಮಣಿ-ಬಾಬುರೆಡ್ಡಿ ಚಿಂತಾಮಣಿ3 May 2019 9:10 PM IST
share
ರೈತರಿಂದ ನೇರವಾಗಿ ಮಾವು ಖರೀದಿಗೆ ಬಿ2ಸಿ ವೆಬ್ ಪರಿಚಯ

► ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು

ಬೆಂಗಳೂರು, ಮೇ 3: ಮಾವು ಪ್ರಿಯರಿಗೆ ಮಾರುಕಟ್ಟೆಗೆ ಹೋಗಿಯೇ ಖರೀದಿ ಮಾಡುವುದನ್ನು ತಪ್ಪಿಸುವ ಸಲುವಾಗಿ ಆನ್‌ಲೈನ್‌ ಮೂಲಕ ಗ್ರಾಹಕರಿಗೆ ಇಷ್ಟವಾದ ಮಾವಿನ ಹಣ್ಣು ತಲುಪಿಸಲು ರಾಜ್ಯ ಮಾವು ಮಂಡಳಿಯಿಂದ ಬಿ2ಸಿ(ಬ್ಯುಸಿನೆಸ್ ಟು ಕಸ್ಟಮರ್) ಎಂಬ ವೆಬ್ ಪರಿಚಯಿಸಿದೆ.

ಮಾವು ಬೆಳೆಗಾರರು ನೇರವಾಗಿ ಗ್ರಾಹಕರಿಗೆ ಆನ್‌ಲೈನ್ ಮೂಲಕ ಮಾವಿನ ಹಣ್ಣು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಈ ವೆಬ್ ಪರಿಚಯಿಸಿದ್ದು, ಇನ್ನು ಮುಂದೆ ನಗರ ಪ್ರದೇಶದ ಮಾವು ಪ್ರಿಯರು ಮಾರುಕಟ್ಟೆಗಳಿಗೆ ಹೋಗುವುದನ್ನು ತಪ್ಪಿಸಿ, ಮನೆ ಬಾಗಿಲಿಗೆ ಮಾವನ್ನು ತರಿಸಿಕೊಳ್ಳಬಹುದಾಗಿದೆ.

ಆನ್‌ಲೈನ್ ಮೂಲಕ ಮಾವು ಮಾರಾಟದ ಸಂಬಂಧ ಈಗಾಗಲೇ ರಾಜ್ಯದಲ್ಲಿ ಅತಿಹೆಚ್ಚು ಮಾವು ಬೆಳೆಯುವ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳ ರೈತರೊಂದಿಗೆ ಚರ್ಚೆ ಮಾಡಲಾಗಿದೆ. ಇದರಲ್ಲಿ ಮಾರಾಟಕ್ಕೆ 30 ಕ್ಕೂ ಅಧಿಕ ರೈತರು ಒಪ್ಪಿಕೊಂಡು, ನೋಂದಣಿಯೂ ಮಾಡಿಕೊಂಡಿದ್ದಾರೆ. ಇನ್ನು ಗ್ರಾಹಕರು ಹಲವರು ಇದರಲ್ಲಿ ನೋಂದಣಿಗೆ ಮುಂದಾಗಿದ್ದಾರೆ ಎಂದು ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ. ನೋಂದಣಿ ಮಾಡಿಕೊಂಡಿರುವ ರೈತರು ಬೆಂಗಳೂರಿನ ಸುತ್ತಮುತ್ತಲಿನ ಭಾಗಗಳಲ್ಲಿ ಸ್ಥಳಗಳನ್ನು ಗುರುತು ಮಾಡಿದ್ದಾರೆ. ಆ ಸ್ಥಳಗಳಲ್ಲಿ ಹಣ್ಣುಗಳನ್ನು ಶೇಖರಣೆ ಮಾಡಲಿದ್ದು, ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು, ಹಣ್ಣು ಬೇಕೆಂದವರಿಗೆ ಹತ್ತಿರದಲ್ಲಿರುವ ರೈತರು ತಲುಪಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಕಾರ್‌ಸಿರಿ ಬ್ರಾಂಡ್: ರಾಜ್ಯದಲ್ಲಿ ಉತ್ಪಾದನೆಯಾಗುವ ಸೋಪಿಗೆ ಮೈಸೂರು ಸ್ಯಾಂಡಲ್, ಹಾಲಿಗೆ ನಂದಿನಿ ಎಂಬ ಮಾದರಿಯ ಬ್ರಾಂಡ್‌ಗಳಿವೆ. ಅದೇ ಮಾದರಿಯಲ್ಲಿ ರಾಜ್ಯದ ಮಾವಿಗೂ ಒಂದು ಬ್ರಾಂಡ್ ಬೇಕು ಎಂದು ಯೋಚಿಸಲಾಗಿತ್ತು. ಅಲ್ಲದೆ, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ರಾಜ್ಯದ ಮಾವನ್ನು ಗುರುತಿಸಲು ಒಂದು ಹೆಸರು ಬೇಕಿತ್ತು. ದೇಶದ ವಿವಿಧ ಕಡೆಗಳಿಂದ ವಿಶ್ವದ ಹಲವು ದೇಶಗಳಿಗೆ ರಫ್ತಾಗುತ್ತದೆ. ಆದರೆ, ಅದರಲ್ಲಿ ಕರ್ನಾಟಕದ ಮಾವು ಹೆಚ್ಚು ರುಚಿಯಿದ್ದರೂ, ಅದು ರಾಜ್ಯದ್ದೇ ಎಂದು ಗುರುತಿಸಲು ಕಷ್ಟವಾಗುತ್ತಿತ್ತು. ಈ ನಿಟ್ಟಿನಲ್ಲಿ ಮಾವು ಮಂಡಳಿ ಕಳೆದ ಎರಡು ವರ್ಷಗಳಿಂದ ಹೊಸ ಬ್ರಾಂಡ್ ಗುರುತಿಸಲು ಪ್ರಯತ್ನಿಸುತ್ತಿದೆ. ಕೊನೆಗೆ ವಿವಿಧ ಕ್ಷೇತ್ರದ ತಜ್ಞರೊಂದಿಗೆ ಚರ್ಚಿಸಿ ‘ಕರ್ನಾಟಕ ಸಿರಿ’ ಎಂಬ ಹೆಸರು ಅಂತಿಮ ಮಾಡಲಾಗಿದೆ ಎಂದು ಮಾವು ಮಂಡಳಿ ಹೇಳಿದೆ.

ಆನ್‌ಲೈನ್ ಹಣ ಪಾವತಿ: ಆನ್‌ಲೈನ್‌ನಲ್ಲಿಯೇ ಮಾವು ಖರೀದಿಸಲು ಆಸಕ್ತಿಯುಳ್ಳವರು ಕಾರ್‌ಸಿರಿ karsirimangoes ಪೋರ್ಟಲ್‌ಗೆ ಭೇಟಿ ನೀಡಿ ರಿಸರ್ವ್ ಬ್ಯಾಂಕ್ ಮಾನದಂಡದಂತೆ ಆನ್‌ಲೈನ್ ಮೂಲಕ ಹಣ ಪಾವತಿ ಮಾಡಬೇಕಾಗುತ್ತದೆ. ಅಲ್ಲದೆ, ಇದನ್ನು ನಿರ್ವಹಿಸಲು ಐವಿಆರ್ ಸೇವೆ(ದೂ.ಸಂ.76040 92292) ಒದಗಿಸಲಾಗಿದೆ.

ಗ್ರಾಹಕರು ಕಾರ್‌ಸಿರಿ ವೆಬ್ ಮೂಲಕ ನೇರವಾಗಿ ಆಯ್ದ ರೈತರ ತೋಟಗಳಿಂದ, ಆಯ್ದ ತಳಿಗಳ ತಾಜಾ ಮಾವನ್ನು ಸ್ಪರ್ಧಾತ್ಮಕ ದರಗಳಲ್ಲಿ ಕೊಳ್ಳುವ ಅವಕಾಶವಿದೆ. ಇದರಿಂದ ರಾಜ್ಯದ ಮಾವು ಬೆಳೆಗಾರರ ಆರ್ಥಿಕ ಸ್ವಾವಲಂಬನೆಗೆ ಸಹಕರಿಸಲು ಸಾಧ್ಯವಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಎಲ್ಲ ಬಗೆಯ ಮಾವು ಲಭ್ಯ: ಈ ವೆಬ್ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವ ರೈತರು ವಿವಿಧ ತಳಿಯ ಮಾವುಗಳನ್ನು ಬೆಳೆಯುತ್ತಾರೆ. ಆದುದರಿಂದಾಗಿ ಬಹುತೇಕ ರೀತಿಯ ಮಾವಿನ ಹಣ್ಣುಗಳು ಗ್ರಾಹಕರಿಗೆ ಲಭ್ಯವಾಗುತ್ತದೆ. ರಾಜ್ಯದ ರೈತರು ಬೆಳೆಯುವ ರಸಪುರಿ, ಮಲ್ಗೋವಾ, ಬಾದಾಮಿ, ಮಲ್ಲಿಕ, ತೋತಾಪುರಿ, ಅಪ್ಪೆಮಿಡಿ, ನೀಲಗಿರಿ, ಬೆಂಗಳೂರ ಸೇರಿದಂತೆ ಹಲವು ಹಣ್ಣುಗಳು ಸಿಗುತ್ತವೆ.

ಮೊಬೈಲ್ ಆ್ಯಪ್ ಬಿಡುಗಡೆಗೆ ಸಿದ್ಧತೆ

ವಿವಿಧ ಕಾರ್ಪೋರೇಟ್ ಕಂಪನಿಗಳು ಬಿಡುಗಡೆ ಮಾಡಿರುವ ರೀತಿಯಲ್ಲಿಯೇ ಮಾವು ಮಂಡಳಿಯಿಂದಲೂ ಮಾವು ಪ್ರಿಯರಿಗೆ ಅನುಕೂಲವಾಗುವ ಸಲುವಾಗಿ ನೂತನ ವೊಬೈಲ್ ಆ್ಯಪ್ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.

ಗುಣಮಟ್ಟದ, ರಾಸಾಯನಿಕ ಮುಕ್ತವಾದ ಮಾವನ್ನು ಹಣ್ಣು ಪ್ರಿಯರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಈ ವೆಬ್ ರಚಿಸಲಾಗಿದೆ. ನಗರ ಪ್ರದೇಶದಲ್ಲಿರುವ ಜನತೆ ಸಮಯದ ಕೊರತೆಯಿಂದ ಮಾವಿನ ರುಚಿಯಿಂದ ದೂರ ಸರಿಯುವ ಸ್ಥಿತಿ ನಿರ್ಮಾಣವಾಗುತ್ತದೆ. ಅಂತಹವರಿಗೆ ಬಿಟುಸಿ(ಬ್ಯುಸಿನೆಟ್ ಟು ಕಸ್ಟಮರ್) ವೆಬ್‌ಗೆ ಭೇಟಿ ನೀಡಿ, ನೋಂದಣಿ ಮಾಡಿಕೊಂಡು, ಮಾವು ಖರೀದಿಸಬಹುದಾಗಿದೆ.

-ಡಾ.ಸಿ.ಜೆ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಮಾವು ಅಭಿವೃದ್ಧಿ ಮಂಡಳಿ

share
-ಬಾಬುರೆಡ್ಡಿ ಚಿಂತಾಮಣಿ
-ಬಾಬುರೆಡ್ಡಿ ಚಿಂತಾಮಣಿ
Next Story
X