ಪೊಲೀಸ್ ಸಿಬ್ಬಂದಿಗೆ ಕರಾಟೆಯಲ್ಲಿ ಬ್ಲಾಕ್‌ಬೆಲ್ಟ್

ಉಡುಪಿ, ಮೇ 3: ಕರಾವಳಿ ಕಾವಲು ಪೊಲೀಸ್ ಗುಪ್ತವಾರ್ತೆ ವಿಭಾಗದ ಹೆಡ್‌ಕಾನ್‌ಸ್ಟೇಬಲ್ ಗಣೇಶ್ ಎನ್, ಬೂಡೋಕಾನ್ ಕರಾಟೆ ಮತ್ತು ಸೆಲ್ಫ್ ಡಿಪೆನ್ಸ್ ಅಸೋಷಿಯೇಷನ್ ಆಫ್ ಇಂಡಿಯಾ ವತಿಯಿಂದ ಇತ್ತೀಚೆಗೆ ಉಡುಪಿಯಲ್ಲಿ ನಡೆದ ಕರಾಟೆ ಬ್ಲಾಕ್ ಬೆಲ್ಟ್ ಗ್ರೇಡಿಂಗ್ ಟೆಸ್ಟ್‌ನಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.
ಇವರು ರಾಜ್ಯ ಕರಾಟೆ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶಿಹಾನ್ ಲಕ್ಷ್ಮೀನಾರಾಯಣ ಆಚಾರ್ಯರಿಂದ ತರಬೇತಿ ಪಡೆದಿದ್ದಾರೆ. ಇವರನ್ನು ಕರಾವಳಿ ಕಾವಲು ಪೊಲೀಸ್ ಮಲ್ಪೆಘಟಕದ ಪೊಲೀಸ್ ಅಧೀಕ್ಷಕ ಪ್ರಮೋದ್ ರಾವ್ ಎನ್.ಟಿ ಅಭಿನಂದಿಸಿದ್ದಾರೆ.
Next Story





