ಖಾಸಗಿ ಕಂಪನಿ ಉದ್ಯೋಗಿಗಳಿದ್ದ ಬಸ್ಗೆ ಟ್ರಕ್ ಢಿಕ್ಕಿ: ಹಲವರಿಗೆ ಗಾಯ

ಹೊಸದಿಲ್ಲಿ, ಮೇ 4: ಖಾಸಗಿ ಕಂಪನಿಯ 40ಕ್ಕೂ ಅಧಿಕ ಉದ್ಯೋಗಿಗಳನ್ನು ಕರೆದೊಯ್ಯುತ್ತಿದ್ದ ಬಸ್ಗೆ ವೇಗವಾಗಿ ಬಂದ ಟ್ರಕ್ವೊಂದು ಢಿಕ್ಕಿಯಾದ ಪರಿಣಾಮ ಹಲವು ಮಂದಿ ಗಾಯಗೊಂಡಿರುವ ಘಟನೆ ನೊಯ್ಡಿದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೊಯ್ಡ ಸೆಕ್ಟರ್-93ರಲ್ಲಿ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಬಸ್ನಲ್ಲಿ 42 ಜನರು ಪ್ರಯಾಣಿಕರಿದ್ದರು. ಎಲ್ಲರೂ ಖಾಸಗಿ ಕಂಪೆನಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಾಗಿದ್ದರು. ಟ್ರಕ್ ಢಿಕ್ಕಿಯಾದ ರಭಸಕ್ಕೆ ಬಸ್ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಗೆ ಢಿಕ್ಕಿ ಹೊಡೆದ ಟ್ರಕ್ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Next Story