ಡಾ.ಸತೀಶ್ ನಾಯಕ್‌ಗೆ ‘ಬಾಲವಾತ್ಸಲ್ಯ ಸಿಂಧು’ ಪ್ರಶಸ್ತಿ ಪ್ರದಾನ

ಉಡುಪಿ, ಮೇ 4: ಉಡುಪಿ ಪೇಜಾವರ ಮಠ ಹಾಗೂ ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ವತಿಯಿಂದ ನಡೆಯುವ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದ ವತಿಯಿಂದ ನೀಡಲಾಗುವ ‘ಬಾಲವಾತ್ಸಲ್ಯ ಸಿಂಧು’ ಪ್ರಶಸ್ತಿಯನ್ನು ಕಾರ್ಕಳದ ಡಾ.ಸತೀಶ್ ನಾಯಕ್ ಇವರಿಗೆ ಸಂಸ್ಥೆಯ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ಪ್ರದಾನ ಮಾಡಲಾಯಿತು.
ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಸಮಾಜ ದಲ್ಲಿ ಮಕ್ಕಳ ಕುರಿತು ವಿಶೇಷ ಸೇವೆ ಸಲ್ಲಿಸಿದ ಡಾ. ಸತೀಶ ನಾಯಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಡಾ.ನಾಯಕ್ ಇವರು ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಪೋಕ್ಸೊ ಕಾಯಿದೆ ಕುರಿತು ಕಾರ್ಯಾಗಾರ ನಡೆಸಿ ಸಾವಿರಾರು ಪೋಷಕರು ಹಾಗೂ ಮಕ್ಕಳಲ್ಲಿ ಜಾಗ್ರತಿ ಮತ್ತು ಕಾನೂನು ಪರಿಪಾಲನೆಯ ತಿಳುವಳಿಕೆ ಮೂಡಿಸಿದರು. ಇವರು ಸಮಾಜದಲ್ಲಿ ಇನ್ನೂ ಹೆಚ್ಚಿನ ಮಕ್ಕಳ ಸೇವೆ ಮಾಡುವಂತಾಗಲಿ ಎಂದು ಸ್ವಾಮೀಜಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತನಾಮ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ, ಮಣಿಪಾಲ ಕೆಎಂಸಿಯ ಡೀನ್ ಡಾ. ಪ್ರಜ್ಞಾ ರಾವ್ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ನಾರಾಯಣ ಬಿ.ಕೆ. ಭಾಗವಹಿಸಿದ್ದರು.
ಶ್ರೀಕೃಷ್ಣ ಬಾಲನಿಕೇತನದ ಕಮಲಾಕ್ಷ ಸ್ವಾಗತಸಿದರು. ರಾಮಚಂದ್ರ ಉಪಾಧ್ಯಾಯ ವರದಿ ಮಂಡಿಸಿದರು. ರಾಘವೇಂದ್ರ ರಾವ್ ವಂದಿಸಿ, ಗುರುರಾ್ ಭಟ್ ಕಾರ್ಯಕ್ರಮ ನಿರೂಪಿಸಿದರು.





