ಪ್ರೆಸ್ಟೀಜ್ ಎಕ್ಸಕ್ಲ್ಯೂಸಿವ್: ಪ್ರೆಸ್ಟೀಜ್ ರಮಝಾನ್ ವಿಶೇಷ ಮಾರಾಟ

ಉಡುಪಿ, ಮೇ 4: ಬನ್ನಂಜೆ ರಸ್ತೆಯ ಗ್ಯಾಲರಿಯ ಫರ್ನಿಚರ್ ಎದುರಿನ ಪ್ರೆಸ್ಟೀಜ್ ಉತ್ಪನ್ನಗಳ ಮಾರಾಟ ಮಳಿಗೆ ‘ಪ್ರೆಸ್ಟೀಜ್ ಎಕ್ಸಕ್ಲ್ಯೂಸಿವ್’ನಲ್ಲಿ ಅಡುಗೆ ಉಪಕರಣಗಳ ಭಾರೀ ರಮಝಾನ್ ಸೇಲ್ ಹಮ್ಮಿಕೊಳ್ಳಲಾಗಿದೆ.
ಈ ಸೇಲ್ ಒಮೇಗಾ ಡೀಲಕ್ಸ್ ಮೆಟಾಲಿಕಾ ನಾನ್‌ಸ್ಟಿಕ್ ಪಾತ್ರೆಗಳಿಗೆ ಶೇ. 48, ಬಿರಿಯಾನಿ ಪಾತ್ರೆಗಳಿಗೆ ಶೇ. 20, ಗ್ರಿಲ್ ತವಾಗಳಿಗೆ ಶೇ.20, ಹೊಸ ಎಡ್ಜ್ ಗ್ಯಾಸ್ ಸ್ಟವ್‌ಗಳಿಗೆ ಶೇ.35, ಇದ್ದಿಲಿನ ಗ್ರಿಲ್ ಗಳಿಗೆ ಶೇ. 24 ಹಾಗೂ 16 ಮತ್ತು 20 ಲೀಟರ್ ಕುಕ್ಕರ್ಗಳಿಗೆ ಶೇ.14ರ ನೇರ ರಿಯಾಯತಿ ಪಡೆಯಬಹುದು.
ಇದೇ ಸಂದರ್ಭದಲ್ಲಿ ಎಕ್ಸ್ಚೇಂಜ್ ಮೇಳ ಎನಿಥಿಂಗ್ ಫಾರ್ ಎನಿಥಿಂಗ್ ನಡೆಯುತ್ತಿದ್ದು ಇದು ಬೇಡದ್ದನ್ನು ಕೊಟ್ಟು ಬೇಕಾದ್ದನ್ನು ಪಡೆಯುವ ಉತ್ತಮ ಅವಕಾಶ. ಬದಲಾವಣೆಗಳಿಗೆ ಶೇ. 55ರ ತನಕ ರಿಯಾಯತಿ ಪಡೆಯಬಹುದು.
ಗ್ರಾಹಕರು ಯಾವುದೇ ಕಂಪನಿಯ ಹಳೆಯ ಕೆಲಸ ಮಾಡುವ ಅಥವಾ ಕೆಟ್ಟು ಹೋದ ಅಡುಗೆ ಉಪಕರಣಗಳಾದ ಕುಕ್ಕರ್, ಕುಕ್‌ವೇರ್, ಗ್ಯಾಸ್‌ಸ್ಟವ್, ಮಿಕ್ಸರ್ ಗ್ರೈಂಡರ್, ವೆಟ್ ಗ್ರೈಂಡರ್, ಇಂಡಕ್ಶನ್ ಕುಕ್ ಟಾಪ್, ಚಿಮಿಣಿ, ಹಾಬ್, ಓಟಿಜಿ, ಇಸ್ತ್ರಿ ಪೆಟ್ಟಿಗೆ, ರೋಟಿ ಮೇಕರ್ ಇನ್ನಿತರ ಅಡುಗೆಗೆ ಸಂಬಂಧ ಪಟ್ಟ ಉಪಕರಣಗಳನ್ನು ಕೊಟ್ಟು ಬದಲಿಗೆ ಯಾವುದೇ ಹೊಸ ಉಪಕರಣಗಳನ್ನು ಪಡೆಯಬಹುದು.
ಕುಕ್ಕರ್ ಮೇಲೆ ಶೇ.40, ಕುಕ್‌ವೇರ್ ಮೇಲೆ ಶೇ. 55, ಮಿಕ್ಸರ್ ಗ್ರೈಂಡರ್ ಶೇ.44, ಗಾಸ್‌ಸ್ಟವ್ ಶೇ.46, ಕಿಚನ್ ಹುಡ್ ಶೇ.50, ವಾಟರ್ ಪ್ಯೂರಿಫೈರ್ ಶೇ. 40, ಮ್ಯಾಜಿಕ್ ಮಾಪ್ಗಳ ಮೇಲೆ ಶೇ. 49ರ ತನಕ ವಿನಿಮಯ ಕೊಡುಗೆ ಇರುತ್ತವೆ. ಸಣ್ಣ ಉಪಕರಣಗಳಾದ ಇಂಡಕ್ಷನ್, ಇಸ್ತ್ರಿಪೆಟ್ಟಿಗೆ, ಓಟಿಜಿ, ವ್ಯಾಕ್ಯುಮ್ ಫ್ಲಾಸ್ಕ್, ಕೆಟಲ್, ಟೋಸ್ಟರ್, ಸ್ಯಾಂಡ್‌ವಿಚ್ ಮೇಕರ್, ರೋಟಿ ಮೇಕರ್, ಬ್ಲೆಂಡರ್ಗಳಿಗೆ ಶೇ.55 ರವರೆಗೆ ವಿನಿಮಯ ರಿಯಾಯತಿ ಇರುತ್ತವೆ ಎಂದು ಪ್ರಕಟಣೆ ತಿಳಿಸಿದೆ.







