Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಪ್ರಾಚೀನ ಭಾರತದ ವಿಜ್ಞಾನ: ಅಧಃಪತನದ...

ಪ್ರಾಚೀನ ಭಾರತದ ವಿಜ್ಞಾನ: ಅಧಃಪತನದ ಹಾದಿ...

ಡಾ.ಕೆ. ಜಮನಾದಾಸ್ಡಾ.ಕೆ. ಜಮನಾದಾಸ್4 May 2019 9:55 PM IST
share
ಪ್ರಾಚೀನ ಭಾರತದ ವಿಜ್ಞಾನ: ಅಧಃಪತನದ ಹಾದಿ...

ಆಧುನಿಕ ಭಾರತದ ಖ್ಯಾತ ವಿಜ್ಞಾನಿ ನೀಲರತ್ನ ಧರ್ ಹೇಳುವಂತೆ, ಭಾರತದಲ್ಲಿ ಬೌದ್ಧ ಧರ್ಮದ ಅವನತಿಯಿಂದ ವಿಜ್ಞಾನದ ಪ್ರಗತಿ ಕುಂಠಿತಗೊಂಡಿತು. ಬೌದ್ಧ ವಿಶ್ವವಿದ್ಯಾನಿಲಯಗಳಿಂದ ಆಸ್ಪತ್ರೆಗಳ ರಾಸಾಯನಿಕ ಮತ್ತು ವೈದ್ಯಕೀಯ ವಿಜ್ಞಾನಕ್ಕೆ ದೊರೆಯುತ್ತಿದ್ದ ಸಹಾಯ ನಿಂತು ಹೋಯಿತು. ಹಿಂದುತ್ವವನ್ನು ಪುನರ್‌ಸ್ಥಾಪಿಸ ಲಾಯಿತು ಮತ್ತು ವಿದೇಶ ಪ್ರಯಾಣದ ಮೇಲೆ ನಿಷೇಧ ಹೇರಲಾಯಿತು. ವಿಜ್ಞಾನಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ಧರ್ಮವಿರೋಧಿ ಮತ್ತು ಅವಮಾನಕರ ಎಂದು ಘೋಷಿಸಲಾಯಿತು. ಜಾತಿ ನಿಯಮಗಳು, ಅಸ್ಪಶ್ಯತೆ ಕಾನೂನು ಮತ್ತು ಅಸಮಾನತೆ ಇತ್ಯಾದಿಗಳನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ವಿಜ್ಞಾನ ಮತ್ತು ಇತರ ಎಲ್ಲ ಜ್ಞಾನವನ್ನು ಮತ್ತಷ್ಟು ರಹಸ್ಯಮಯ ಮತ್ತು ಗೌಪ್ಯಗೊಳಿಸಲಾಯಿತು ಮತ್ತು ಹೊಸ ಯೋಚನೆ ಮತ್ತು ಸಂಶೋಧನೆಗಳನ್ನು ವಿರೋಧಿಸಲಾಯಿತು.

                                                    ಧನ್ವಂತರಿ 

ವೈದ್ಯಕೀಯ ಕ್ಷೇತ್ರದ ಇತ್ತೀಚಿನ ಪರಿಣತರು ಜೀವಕ, ನಾಗಾರ್ಜುನ, ಶುಶ್ರುತ, ಚರಕ ಮತ್ತು ವಾಗ್ಭಟ ಮುಂತಾದವರನ್ನು ಮರೆತಂತಿದೆ. ಅವರು ಧನ್ವಂತರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆದರೆ ಧನ್ವಂತರಿ ಬಗ್ಗೆ ಹೇಳುವಾಗ ಆತನನ್ನು ಓರ್ವ ವೈದ್ಯಕೀಯ ಶಿಕ್ಷಕನನ್ನಾಗಿ ಬಿಂಬಿಸದೆ ದೇವತೆಗಳು ಮತ್ತು ದಾನವರು ಕ್ಷೀರ ಸಾಗರ ಮಥನ ಮಾಡುವಾಗ ಉದ್ಭವಿಸಿದ ಪೌರಾಣಿಕ ದೇವರಂತೆ ಬಿಂಬಿಸಲಾಗಿದೆ. ಇತರ ಎಲ್ಲ ಐತಿಹಾಸಿಕ ವೈದ್ಯಕೀಯ ಪಂಡಿತರನ್ನು ನಿರ್ಲಕ್ಷಿಸಿ ಕೇವಲ ಧನ್ವಂತರಿಗೆ ಯಾಕೆ ಪ್ರಾಮುಖ್ಯತೆ ನೀಡಲಾಯಿತು ಎಂಬುದಕ್ಕೆ ಉತ್ತರ, ಉಳಿದವರೆಲ್ಲರೂ ಬೌದ್ಧರಾಗಿದ್ದರು ಎನ್ನುವುದು. ಹಾಗಾಗಿ ಆಯುರ್ವೇದಕ್ಕೆ ಓರ್ವ ದೇವರನ್ನು ಸೃಷ್ಟಿಸಲಾಯಿತು.

ನಾಗ್ಪುರದ ವೈದ್ಯಕೀಯ ತಜ್ಞರೊಬ್ಬರು ತಮ್ಮ ಇತ್ತೀಚಿನ ಲೇಖನದಲ್ಲಿ ಭಾರತದ ಪ್ರಾಚೀನ ವೈದ್ಯಕೀಯ ವಿಜ್ಞಾನದ ಬಗ್ಗೆ ವಿವರಿಸುತ್ತಾ, ಬುದ್ಧ ಬೋಧಿಸಿದ ಅಹಿಂಸಾ ತತ್ವದಿಂದ ಶಸ್ತ್ರಚಿಕಿತ್ಸೆ ವಿಜ್ಞಾನ ಪ್ರಾಮುಖ್ಯತೆ ಕಳೆದುಕೊಂಡಿತು ಎಂದು ಅಭಿಪ್ರಾಯಿಸಿದ್ದರು. ಈ ಹೇಳಿಕೆ ಆ ವ್ಯಕ್ತಿಗೆ ಭಾರತದ ಇತಿಹಾಸದ ಬಗ್ಗೆಯಿರುವ ನಿರ್ಲಕ್ಷವನ್ನು ಮಾತ್ರವಲ್ಲ ಬೌದ್ಧ ಧರ್ಮ ದ ಬಗ್ಗೆ ಸುಳ್ಳು ಆರೋಪ ಗಳನ್ನು ಮಾಡುವ ಬಯಕೆಯನ್ನೂ ಬಯಲು ಮಾಡುತ್ತದೆ. ಬೌದ್ಧ ಧರ್ಮದಲ್ಲಿ ಶಸ್ತ್ರಚಿಕಿತ್ಸೆ ಎಂದೂ ಹಿಂಸೆ ಎಂದು ಪರಿಗಣಿಸಲ್ಪಟ್ಟಿಲ್ಲ. ಖಂಡಿತವಾಗಿಯೂ ವಿಜ್ಞಾನದ ಅಧಃಪತನಕ್ಕೆ ಬುದ್ಧನ ಅಹಿಂಸೆ ಕಾರಣವಲ್ಲ. ಆಧುನಿಕ ವಿಜ್ಞಾನ ನಿಸ್ಸಂಶಯವಾಗಿ ಪಶ್ಚಿಮದ ಕೊಡುಗೆ. ಹಾಗಾಗಿ, ಎಲ್ಲ ಸಮಾಜದಲ್ಲೂ ವಿಜ್ಞಾನದ ಏಳಿಗೆಗೆ ತೊಡಕುಂಟು ಮಾಡುವ ಪ್ರಯತ್ನಗಳು ನಡೆದಿವೆ. ಭಾರತದಲ್ಲಿ ಅದು ಹೆಚ್ಚು ಯಶಸ್ವಿಯಾಗಿದೆ. ಒಂದು ಕಾಲದಲ್ಲಿ ಭಾರತೀಯ ವಿಜ್ಞಾನ ಕೇವಲ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲೇ ಪ್ರಸಿದ್ಧಿ ಪಡೆದಿತ್ತು. ಆರನೇ ಶತಮಾನದ ಬಳಿಕವೂ ಭಾರತೀಯ ವಿಜ್ಞಾನಕ್ಕೆ ಯಾವುದೇ ತೊಡಕಾಗದಂತೆ ನೋಡಿಕೊಳ್ಳುತ್ತಿದ್ದರೆ ನಾವು ಭಾರತೀಯರು ಇಂದು ವೈಜ್ಞಾನಿಕ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನದಲ್ಲಿರುತ್ತಿದ್ದೆವು.

► ಭಾರತದಲ್ಲಿ ವಿಜ್ಞಾನದ ಸ್ವರ್ಣ ಕಾಲ

ಭಾರತದಲ್ಲಿ ಆರ್ಯರಿಗಿಂತ ಮೊದಲು ನಾಗಾಗಳು ಎಂದು ಕರೆಯಲ್ಪಡುವ ದ್ರಾವಿಡರ ನಗರ ನಾಗರಿಕತೆ ಇತ್ತು ಎಂದು ಹರಪ್ಪ ಮತ್ತು ಮೊಹೆಂಜೊದಾರೊ ಅವಶೇಷಗಳಿಂದ ಸ್ಪಷ್ಟವಾಗುತ್ತದೆ. ಆ ಕಾಲದಲ್ಲಿ ನಗರ ಯೋಜನೆ, ನೀರು ಸರಬರಾಜು ಮತ್ತು ನಗರ ಸೌಲಭ್ಯಗಳು ಹಾಗೂ ಚರಂಡಿ ವ್ಯವಸ್ಥೆ ಮತ್ತು ಕೃಷಿಯ ವಿಷಯದಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಲಾಗಿತ್ತು. ಹರಪ್ಪನ್ ಸಂಸ್ಕೃತಿಯಲ್ಲಿ ಉಪಯೋಗಿಸಲಾದ ಚಿನ್ನ ಕೋಲಾರದಿಂದ ತೆಗೆದದ್ದಾಗಿದೆ ಎಂದು ಸರ್ ಎಡ್ವಿನ್ ಪಾಸ್ಕೊ ಅವರ ನೇತೃತ್ವದ ತಜ್ಞರ ಸಮಿತಿ ಸಾಬೀತುಪಡಿಸಿದೆ. ಹಾಗಾಗಿ ಆ ಕಾಲದಲ್ಲಿ ಚಿನ್ನ ಗಣಿಗಾರಿಕೆ ಒಂದು ಸಮೃದ್ಧ ಕೈಗಾರಿಕೆ ಆಗಿತ್ತು ಎನ್ನುವುದು ಸ್ಪಷ್ಟ. ಹರಪ್ಪನ್ ನಾಗರಿಕತೆಯಲ್ಲಿ ಬಳಸಲಾದ ತಾಮ್ರ ರಜಪೂತಾನಾದಿಂದ ಆಮದು ಮಾಡಲ್ಪಟ್ಟಿದ್ದರೆ ಟಿನ್ ಅನ್ನು ಹಝಾರಿ ಬಾಗ್‌ನಿಂದ ತರಿಸಿಕೊಳ್ಳಲಾಗುತ್ತಿತ್ತು. ಭಾರತದಾದ್ಯಂತ ಹಲವು ವಿಧದ ಕಲ್ಲುಗಳನ್ನು ಕ್ವಾರೆಗಳ ಮೂಲಕ ತೆಗೆಯಲಾಗುತ್ತಿತ್ತು. 0 ಯಿಂದ 9ರವರೆಗಿನ ದಶಮಾಂಶ ಬಿಂದುವಿನ ಬಳಕೆಯೊಂದಿಗಿನ ಆಧುನಿಕ ಸಂಖ್ಯಾ ವ್ಯವಸ್ಥೆ ಗಣಿತಕ್ಕೆ ಭಾರತ ನೀಡಿದ ಕೊಡುಗೆಯಾಗಿದೆ. ಇಲ್ಲಿಂದ ಅರಬ್ ದೇಶಗಳ ಮೂಲಕ ಅದು ಯೂರೋಪ್ ತಲುಪಿತು. ವೌರ್ಯರು ಇಂಜಿನಿಯರಿಂಗ್, ನಗರ ಯೋಜನೆ, ಶಿಲ್ಪಕಲೆ ಮತ್ತು ಚಿತ್ರಕಲೆ ಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದರು. ಭಾರತದ ಮೊತ್ತಮೊದಲ ನೀರಾವರಿ ಅಣೆಕಟ್ಟು ಈ ಕಾಲಕ್ಕೆ ಸೇರಿದ್ದಾಗಿದ್ದು ಅದಕ್ಕೆ ಸುದರ್ಶನ ಎಂದು ಹೆಸರಿಡಲಾಗಿತ್ತು. ಅಶೋಕ ಸ್ತಂಭ ಅದರ ಸೌಂದರ್ಯ, ಕಲೆಗಾರಿಕೆ ಮತ್ತು ಧಾರ್ಮಿಕ ಘೋಷಣೆಯಿಂದಾಗಿ ಪ್ರಾಮುಖ್ಯತೆ ಹೊಂದಿದೆ. ಆದರೆ ಅಶೋಕನ ಕಾಲದಲ್ಲಿ ಕೆತ್ತಲಾಗಿರುವ ಈ ಸ್ತಂಭ ಎಷ್ಟೊಂದು ನಾಜೂಕಾಗಿದೆಯೆಂದರೆ ಅದರ ಪಾಲಿಶಿಂಗ್ ಆಧುನಿಕ ವಿಜ್ಞಾನಕ್ಕೂ ಸವಾಲೊಡ್ಡುತ್ತದೆ. ಇಂತಹ ಪಾಲಿಶಿಂಗ್‌ನ್ನು ಆಧುನಿಕ ಶಿಲ್ಪಕಲಾ ತಜ್ಞರು ಮಾಡಲು ಸಾಧ್ಯವೇ ಇಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಮೊದಲ ಮತ್ತು ಮೂರನೇ ಶತಮಾನದಲ್ಲಿ ಚರಕ ಸಂಹಿತ ಮತ್ತು ಶುಶ್ರುತ ಸಂಹಿತ ಮುಂತಾದ ವೈದ್ಯಕೀಯ ವಿಜ್ಞಾನ ಪುಸ್ತಕಗಳನ್ನು ಬರೆಯಲಾಯಿತು. ಇದರಿಂದ ಭಾರತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಇದ್ದ ಅಗಾಧ ಜ್ಞಾನದ ಬಗ್ಗೆ ತಿಳಿಯುತ್ತದೆ. ಶಸ್ತ್ರಚಿಕಿತ್ಸಾ ವಿಜ್ಞಾನದ ಪುಸ್ತಕವಾಗಿರುವ ಶುಶ್ರುತ ಸಂಹಿತದಲ್ಲಿ ಶಸ್ತ್ರಚಿಕಿತ್ಸೆಯ ನೂರಕ್ಕೂ ಅಧಿಕ ಪರಿಕರಗಳ ಬಗ್ಗೆ ತಿಳಿಸಲಾಗಿದೆ. ಈ ಪುಸ್ತಕದಲ್ಲಿ ಪ್ಲಾಸ್ಟಿಕ್ ಸರ್ಜರಿ, ಮುಖ್ಯವಾಗಿ ಮೂಗನ್ನು ಮರುನಿರ್ಮಿಸುವ ಶಸ್ತ್ರಚಿಕಿತ್ಸೆ ಬಗ್ಗೆ ಉಲ್ಲೇಖಿಸಲಾಗಿದೆ. ಅಲೆಗ್ಸಾಂಡರ್ ಭಾರತಕ್ಕೆ ಆಗಮಿಸಿದ ಸಮಯದಲ್ಲಿ ಭಾರತ ಔಷಧ ಮತ್ತು ಶಸ್ತ್ರಚಿಕಿತ್ಸೆಗೆ ಪ್ರಸಿದ್ಧವಾಗಿತ್ತು. ಬೌದ್ಧ ಪುಸ್ತಕಗಳಲ್ಲಿ ಜೀವಕ ಎಂಬ ವ್ಯಕ್ತಿಯ ಬಗ್ಗೆ ಉಲ್ಲೇಖವಿದೆ. ಈತ ಓರ್ವ ವ್ಯಾಪಾರಿಯ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ್ದ. ರಾಜ ಬಿಂಬಸಾರ, ಜೀವಕನನ್ನು ಭಗವಾನ್ ಬುದ್ಧನ ಖಾಸಗಿ ವೈದ್ಯನಾಗಿ ನೇಮಿಸಿದ. ನಂತರ ಜೀವಕ ಬುದ್ಧನ ಮಲ ಬದ್ಧತೆ ಸಮಸ್ಯೆಯನ್ನು ತಾವರೆ ದಳದ ಮೇಲೆ ಔಷಧೀಯ ಪರಿಮಳವನ್ನು ಉಸಿರಾಡಲು ನೀಡುವ ಮೂಲಕ ಗುಣಪಡಿಸಿದ್ದ. ಆಧುನಿಕ ವೈದ್ಯಶಾಸ್ತ್ರದಲ್ಲಿ ಇನ್‌ಹೇಲರ್ ಔಷಧಿಗಳ ಬಳಕೆ ತೀರಾ ಇತ್ತೀಚಿನದ್ದು.

ದಿಲ್ಲಿಯ ಕುತುಬ್ ಮಿನಾರ್‌ನ ಆವರಣದಲ್ಲಿರುವ ಮೆಹರೌಲಿ ಕಬ್ಬಿಣದ ಸ್ತಂಭ ನಾಲ್ಕನೇ ಶತಮಾನಕ್ಕೆ ಸೇರಿದ್ದಾಗಿದೆ. ಹಲವು ಶತಮಾನಗಳಿಂದ ಕಾಲದ ಮತ್ತು ಪ್ರಕೃತಿಯ ಹೊಡೆತಕ್ಕೆ ಸಿಲುಕಿದರೂ ಈ ಸ್ತಂಭ ಒಂದಿನಿತೂ ತುಕ್ಕು ಹಿಡಿದಿಲ್ಲ ಮತ್ತು ಸವೆದಿಲ್ಲ. ಈ ಸ್ತಂಭವನ್ನು ಪರಿಶೀಲಿಸಿದ ತಜ್ಞರ ತಂಡ, ಜಗತ್ತಿನ ಯಾವುದೇ ಕಬ್ಬಿಣದ ಪರಿಣತರಿಗೆ ಇಂತಹ ಸ್ತಂಭವನ್ನು ನಿರ್ಮಿಸುವ ಸಾಮರ್ಥ್ಯವಿಲ್ಲ ಎಂದು ತಿಳಿಸಿದೆ. ಭಾರತ ಅತ್ಯುತ್ತಮ ಪೈಂಟ್ ಮತ್ತು ಡೈಗಳಿಗೂ ಪ್ರಸಿದ್ಧವಾಗಿತ್ತು. ಅಜಂತಾದ ಚಿತ್ರಕಲೆಗಳು ಕೇವಲ ಸೌಂದರ್ಯ, ಕಲೆ ಮತ್ತು ಇತಿಹಾಸಕ್ಕೆ ಪ್ರಸಿದ್ಧವಲ್ಲ. ಅದರಲ್ಲಿ ಬಳಸಲಾಗಿರುವ ಬಣ್ಣಗಳ ಗುಣಮಟ್ಟಕ್ಕೂ ಅದು ಪ್ರಸಿದ್ಧವಾಗಿದೆ.

► ಆರ್ಯಭಟ

ಕ್ರಿ.ಶ. 476ರಲ್ಲಿ ಜನಿಸಿದ ಆರ್ಯಭಟ ಪಾಟಲಿಪುತ್ರದಲ್ಲಿ ಬೆಳೆದ. ಕ್ರಿ.ಶ.499ರಲ್ಲಿ ಆತ ಆರ್ಯಭಟೀಯವನ್ನು ಬರೆದ. ಗಣಿತವನ್ನು ಭಿನ್ನ ವಿಷಯವಾಗಿ ಅಭ್ಯಸಿಸಿದ ಮೊದಲಿಗ ಆರ್ಯಭಟ. ಪೈಯ ನಿಖರವಾದ ಬೆಲೆ 3.1416 ಎಂದು ತಿಳಿಸಿದವನೂ ಆರ್ಯಭಟನೇ. ಭೂಮಿ ದುಂಡಗಿದೆ ಮತ್ತು ತನ್ನ ಕಕ್ಷೆಯಲ್ಲಿ ತಿರುಗುತ್ತದೆ ಎಂದು ಆತ ಪ್ರತಿಪಾದಿಸಿದ. ಗ್ರಹಣಗಳನ್ನು ರಾಹು ಮತ್ತು ಕೇತು ಸೃಷ್ಟಿಸುವುದಿಲ್ಲ. ಬದಲಿಗೆ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಆಗುವ ಪರಿಣಾಮ ಎಂದು ಆರ್ಯಭಟ ತಿಳಿಸಿದ. ಹಾಗಾಗಿ ಬೌದ್ಧ ಧರ್ಮ ಉತ್ತುಂಗದಲ್ಲಿದ್ದ ಕಾಲದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತ ಇತರ ಯಾವುದೇ ದೇಶಕ್ಕಿಂತ ಹಿಂದಿರಲಿಲ್ಲ. ಸಂಪ್ರದಾಯಗಳ ಅಡೆತಡೆಗಳಿಂದ ಮುಕ್ತವಾಗಿದ್ದಾಗ ಮಾತ್ರ ವಿಜ್ಞಾನ ಹರಡುತ್ತದೆ. ಭಗವಾನ್ ಬುದ್ಧ ಭಾರತೀಯ ಸಮಾಜಕ್ಕೆ ಆ ಸ್ವಾತಂತ್ರವನ್ನು ನೀಡಿದ್ದರು. ಜನರು ಯೋಚಿಸುವ ಮತ್ತು ಅದಕ್ಕೆ ತಕ್ಕಂತೆ ಕಾರ್ಯಾಚರಿಸುವ ಸ್ವಾತಂತ್ರ ನೀಡಿದ್ದರು. ಕಠಿಣ ಜಾತಿ ನಿಯಮಗಳಿಂದ ಮುಕ್ತವಾದ ಸಮಾಜ ವಿಜ್ಞಾನವನ್ನು ಸಮೃದ್ಧಗೊಳಿಸುವಲ್ಲಿ ಆಸಕ್ತಿತೋರಿಸಿತ್ತು. ಮೇಲೆ ಉಲ್ಲೇಖಿಸಲಾಗಿರುವ ಜೀವಕ, ಸೆಗಣಿಯ ರಾಶಿಯಲ್ಲಿ ಪತ್ತೆಯಾಗಿ ಅಂತಹ ಉನ್ನತ ಸ್ಥಾನವನ್ನು ಏರಬೇಕಾದರೆ ಅದಕ್ಕೆ ಕಾರಣ ಬೌದ್ಧ ವಾತಾವರಣ. ನಮಗೆಲ್ಲರಿಗೂ ತಿಳಿದಿರುವಂತೆ ಬ್ರಾಹ್ಮಣೀಯ ಸಂಪ್ರದಾಯದಲ್ಲಿ ಶಾಲೆಗಳಿಗೆ ಪ್ರವೇಶ ಜಾತಿ ಆಧಾರದಲ್ಲಿ ನೀಡಲಾಗುತ್ತಿತ್ತು. ಇದಕ್ಕೆ ಉತ್ತಮ ಉದಾಹರಣೆ, ಕರ್ಣ, ಏಕಲವ್ಯ ಮತ್ತು ಸತ್ಯಕಾಮ, ಜಬಾಲ ಮುಂತಾದವರು. ಪಾಶ್ಚಾತ್ಯ ಜಗತ್ತಿನಲ್ಲೂ ವಿಜ್ಞಾನದ ವಿರುದ್ಧ ಯುದ್ಧಗಳು ನಡೆದಿವೆ. ಆದರೆ ಭಾರತದಲ್ಲಿ ವಿಜ್ಞಾನದ ವಿರೋಧಿಗಳು ಈ ಯುದ್ಧದಲ್ಲಿ ಗೆಲುವು ಸಾಧಿಸಿದ್ದಾರೆ. ಬ್ರಾಹ್ಮಣರು ಮತ್ತು ಬೌದ್ಧರ ನಡುವಿನ ಸಂಬಂಧ ಎಷ್ಟು ಹಳಸಿತು ಎಂದರೆ ಅವರು ಪರಸ್ಪರ ಶತ್ರುಗಳಾದರು. ಬೌದ್ಧರು ಪರಿಣತಿ ಹೊಂದಿದ್ದ ಎಲ್ಲವನ್ನೂ ಬ್ರಾಹ್ಮಣರು ವಿರೋಧಿಸಲು ಆರಂಭಿಸಿದರು, ವಿಜ್ಞಾನವನ್ನೂ. ದೂರದ ದೇಶಗಳಲ್ಲಿ ಬೌದ್ಧ ಧರ್ಮ ಪ್ರಸಿದ್ಧವಾಗುತ್ತಿದ್ದರೆ ಭಾರತದಲ್ಲಿ ಅದನ್ನು ಬುಡಸಮೇತ ಕಿತ್ತು ಹಾಕುವ ಪ್ರಯತ್ನಗಳು ನಡೆದವು. ನಂತರ ತನ್ನ ಆಂತರಿಕ ಭಿನ್ನಾಭಿಪ್ರಾಯ ಮತ್ತು ವೈರುಧ್ಯಗಳ ಕಾರಣ ಬೌದ್ಧ ಧರ್ಮ ದುರ್ಬಲ ಗೊಂಡಾಗ ಬ್ರಾಹ್ಮಣರು ಆದರ ಜಾಗವನ್ನು ಅತಿಕ್ರಮಿಸಿದರು ಮತ್ತು ಬೌದ್ಧರು ಇಡೀ ಜಗತ್ತಿನಲ್ಲಿ ಯಾವುದಕ್ಕೆ ಪ್ರಸಿದ್ಧರೋ ಅವುಗಳೆಲ್ಲವನ್ನೂ ನಾಶಗೊಳಿಸುತ್ತಾ ಬಂದರು.

ಆಧುನಿಕ ಭಾರತದ ಖ್ಯಾತ ವಿಜ್ಞಾನಿ ನೀಲರತ್ನ ಧರ್ ಹೇಳುವಂತೆ, ಭಾರತ ದಲ್ಲಿ ಬೌದ್ಧ ಧರ್ಮದ ಅವನತಿಯಿಂದ ವಿಜ್ಞಾನದ ಪ್ರಗತಿ ಕುಂಠಿತಗೊಂಡಿತು. ಬೌದ್ಧ ವಿಶ್ವವಿದ್ಯಾನಿಲಯಗಳಿಂದ ಆಸ್ಪತ್ರೆಗಳ ರಾಸಾಯನಿಕ ಮತ್ತು ವೈದ್ಯಕೀಯ ವಿಜ್ಞಾನಕ್ಕೆ ದೊರೆಯುತ್ತಿದ್ದ ಸಹಾಯ ನಿಂತು ಹೋಯಿತು. ಹಿಂದುತ್ವವನ್ನು ಪುನರ್‌ಸ್ಥಾಪಿಸಲಾಯಿತು ಮತ್ತು ವಿದೇಶ ಪ್ರಯಾಣದ ಮೇಲೆ ನಿಷೇಧ ಹೇರಲಾಯಿತು. ವಿಜ್ಞಾನಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ಧರ್ಮವಿರೋಧಿ ಮತ್ತು ಅವಮಾನಕರ ಎಂದು ಘೋಷಿಸಲಾಯಿತು. ಜಾತಿ ನಿಯಮಗಳು, ಅಸ್ಪಶ್ಯತೆ ಕಾನೂನು ಮತ್ತು ಅಸಮಾನತೆ ಇತ್ಯಾದಿಗಳನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ವಿಜ್ಞಾನ ಮತ್ತು ಇತರ ಎಲ್ಲ ಜ್ಞಾನವನ್ನು ಮತ್ತಷ್ಟು ರಹಸ್ಯಮಯ ಮತ್ತು ಗೌಪ್ಯಗೊಳಿಸಲಾಯಿತು ಮತ್ತು ಹೊಸ ಯೋಚನೆ ಮತ್ತು ಸಂಶೋಧನೆಗಳನ್ನು ವಿರೋಧಿಸಲಾಯಿತು. ಜಾತಿ ಆಧಾರದಲ್ಲಿ ವಿವಿಧ ಹುದ್ದೆಗಳನ್ನು ನೀಡುವ ಪರಿಪಾಠ ಬೆಳೆಯಿತು. ಉನ್ನತ ಜಾತಿಗಳಿಗೆ ಬಿಳಿ ಕಾಲರ್ ಉದ್ಯೋಗ ನಿಗದಿಪಡಿಸಿದರೆ ಶೂದ್ರ, ಮರಾಠ ಅಥವಾ ಕುನ್ಬಿಗಳು, ಮಾಲಿ, ತೆಲಿ, ಗವಾಲಿ, ಲೋಹಾರ್, ಸುತಾರಾ, ಮಾಂಗ್, ಮಹಾರ್, ಚಮರ್, ಪರಧಿ, ಗೋಂಡ, ಬಿಲ್ ಇತ್ಯಾದಿ ಜಾತಿಗಳು ಶ್ರಮಿಕ ವರ್ಗವಾಗಿದ್ದವು.

ಶ್ರಮಿಕ ವರ್ಗ ತನ್ನ ಬೆವರು ಮತ್ತು ರಕ್ತ ಹರಿಸಿ ದುಡಿದರೆ ಉನ್ನತ ಜಾತಿಯವರು ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಪಾಶ್ಚಾತ್ಯ ದೇಶಗಳಲ್ಲಿ ಉತ್ಪಾದನಾ ಕ್ಷೇತ್ರದ ಉದ್ಯೋಗಗಳು ನಮ್ಮ ಆಯ್ಕೆಯ ಮತ್ತು ಆದ್ಯತೆಯ ವಿಷಯವಾಗಿದ್ದರೆ ಭಾರತದಲ್ಲಿ ಅದೊಂದು ಹೊರೆ, ನಿಬಂಧನೆ, ಒತ್ತಡ ಮತ್ತು ಹತಾಶೆ ಹಾಗೂ ಪೂರ್ವ ಜನ್ಮದ ಕರ್ಮದಿಂದ ಪಡೆದ ಕಡ್ಡಾಯ ಶಿಕ್ಷೆಯಂತೆ ಕಾಣಲಾಗುತ್ತಿತ್ತು. ಅಷ್ಟಕ್ಕೂ ಈ ಕಾಲದಲ್ಲಿ ಕೇವಲ ವಿಜ್ಞಾನ ಮಾತ್ರ ಅವನತಿಯತ್ತ ಸಾಗಲು ಕಾರಣವೇನು? ಉಳಿದಂತೆ ಸಾಹಿತ್ಯ ಲೋಕದಲ್ಲಿ ಅಂದು ಭಾರತ ಮಾಡಿದ್ದ ಸಾಧನೆಯನ್ನು ಇತರ ಯಾವುದೇ ದೇಶವು ಮಾಡಿರಲಿಲ್ಲ. ಅದಕ್ಕುತ್ತರ ಅಂದಿನ ಸಮಾಜವನ್ನು ನಾವು ಸರಿಯಾಗಿ ಗಮನಿಸಿದಾಗ ತಿಳಿಯುತ್ತದೆ. ಸಮಾಜವನ್ನು ಆರು ಸಾವಿರ ಜಾತಿಗಳಾಗಿ ವಿಂಗಡಿಲಾಗಿದೆ. ಒಂದರ ಮೇಲೊಂದರಂತೆ ಜೋಡಿಸಲ್ಪಟ್ಟಿರುವ ಜಾತಿಗಳ ಪಟ್ಟಿಯಲ್ಲಿ ಬ್ರಾಹ್ಮಣರು ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಅವರು ಈ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ವಿಜ್ಞಾನ ಮಾತ್ರ ಅವನತಿ ಕಾಣಲು ಇರುವ ಪ್ರಮುಖ ಕಾರಣ ವೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಾಮಾನ್ಯ ಜನಸಮೂಹಕ್ಕೆ ಜ್ಞಾನ ಮತ್ತು ಆರಾಮವನ್ನು ನೀಡುತ್ತದೆ. ಇದು ನಮ್ಮ ಆಚಾರ್ಯರಿಗೆ ಬೇಕಾಗಿಲ್ಲ. ಇವರ ಆರಾಮ ಜೀವನಶೈಲಿಗೆ ಅಪಾಯವೊಡ್ಡುವ ಎಲ್ಲವನ್ನೂ ಧರ್ಮ ವಿರೋಧಿ ಎಂದು ಪರಿಗಣಿಸಲಾಗುತ್ತದೆ. ಭೂಮಿ ಮೇಲಿರುವ ಈ ದೇವರುಗಳು ಮತ್ತು ಇವರ ಶಿಷ್ಯರಾದ ರಾಜರು ಜನರ ಏಳಿಗೆಯ ಬಗ್ಗೆ ಚಿಂತಿಸಿದ್ದರೆ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ನೋಡಿದ್ದರೆ ವಿಜ್ಞಾನ ಇಷ್ಟೊಂದು ಸಂಕಷ್ಟ ಎದುರಿಸುತ್ತಿರಲಿಲ್ಲ ಮತ್ತು ನಮ್ಮ ದೇಶ ಶತಮಾನಗಳ ಕಾಲ ಅನ್ಯ ನಂಬಿಕೆಯ ಜನರ ಹಿಡಿತದಲ್ಲಿ ಗುಲಾಮವಾಗುತ್ತಿರಲಿಲ್ಲ.

share
ಡಾ.ಕೆ. ಜಮನಾದಾಸ್
ಡಾ.ಕೆ. ಜಮನಾದಾಸ್
Next Story
X