Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುವರ್ಣ ತ್ರಿಭುಜ ಬೋಟು ದುರಂತ: ಮನೆ...

ಸುವರ್ಣ ತ್ರಿಭುಜ ಬೋಟು ದುರಂತ: ಮನೆ ಮಕ್ಕಳ ನಿರೀಕ್ಷೆಯಲ್ಲಿ ಮಾಹಿತಿ ಅರಿಯದ ಹೆತ್ತ ಜೀವಗಳು !

ವಾರ್ತಾಭಾರತಿವಾರ್ತಾಭಾರತಿ4 May 2019 9:57 PM IST
share
ಸುವರ್ಣ ತ್ರಿಭುಜ ಬೋಟು ದುರಂತ: ಮನೆ ಮಕ್ಕಳ ನಿರೀಕ್ಷೆಯಲ್ಲಿ ಮಾಹಿತಿ ಅರಿಯದ ಹೆತ್ತ ಜೀವಗಳು !

ಉಡುಪಿ, ಮೇ 4: ಮಹಾರಾಷ್ಟ್ರದ ಮಾಲ್ವಾನ್ ಕರಾವಳಿ ತೀರದಿಂದ 33 ಕಿ.ಮೀ. ದೂರದ ಆಳ ಸಮುದ್ರದಲ್ಲಿ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆಯಾಗಿರುವುದರಿಂದ ಅದರಲ್ಲಿದ್ದ ಎಲ್ಲ ಏಳು ಮಂದಿ ಕೂಡ ಜಲ ಸಮಾಧಿಯಾಗಿರುವ ನಿರ್ಧಾರಕ್ಕೆ ಬಂದಿದ್ದರೂ ಹೆತ್ತ ಜೀವ ಮಾತ್ರ ಇನ್ನು ಕೂಡ ಯಾವುದೇ ಮಾಹಿತಿ ಅರಿಯದೆ ಮಕ್ಕಳ ಆಗಮನದ ನಿರೀಕ್ಷೆಯಲ್ಲಿದೆ.

ನಾಪತ್ತೆಯಾದವರ ಪೈಕಿ ಮಲ್ಪೆಯ ಬಡಾನಿಡಿಯೂರು ಗ್ರಾಮದ ಪಾವಂಜಿ ಗುಡ್ಡೆಯ ಸುವರ್ಣ ತ್ರಿಭುಜ ಬೋಟಿನ ಮಾಲಕ ಚಂದ್ರಶೇಖರ್ ಕೋಟ್ಯಾನ್ ಹಾಗೂ ಅಲ್ಲೇ ಸಮೀಪದ ದಾಮೋದರ್ ಸಾಲ್ಯಾನ್ ಅವರ ಮನೆಯಲ್ಲಿ ಕಳೆದ 138 ದಿನಗಳಿಂದ ನೀರವ ಮೌನ ಆವರಿಸಿದೆ. ಸದ್ಯ ಎಲ್ಲ ಮಾಹಿತಿಯನ್ನು ಆಘಾತಕ್ಕೆ ಒಳಗಾಗಬಹುದೆಂಬ ಕಾರಣದಿಂದ ನಾಪತ್ತೆಯಾದವರ ಇಬ್ಬರು ಪತ್ನಿಯರಿಗೆ ಹಾಗೂ ಹೆತ್ತವರಿಗೆ ತಿಳಿಸದೆ ಗೌಪ್ಯವಾಗಿ ಇರಿಸಲಾಗಿದೆ. ಇದರಿಂದ ಇವರೆಲ್ಲರು ನಾಪತ್ತೆಯಾದ ಮನೆಮಂದಿ ಮರಳಿ ಬರುವ ನಿರೀಕ್ಷೆಯಲ್ಲೇ ಇದ್ದಾರೆ.

ಟಿವಿ ಇಲ್ಲದೆ ಮಾಹಿತಿ ಸಿಕ್ಕಿಲ್ಲ: ಸುವರ್ಣ ತಿಂಗಳಾಯ ಹಾಗೂ ಸೀತಾ ಸಾಲ್ಯಾನ್ ದಂಪತಿಗೆ ನಾಪತ್ತೆಯಾದ ದಾಮೋದರ್ ಸಾಲ್ಯಾನ್ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂವರು ಸಹೋದರರು ಸದ್ಯ ಒಂದೇ ಮನೆಯಲ್ಲಿದ್ದು, ಶಾಲಾ ರಜೆಯಾಗಿರುವುದರಿಂದ ಇಬ್ಬರು ಸಹೋದರಿಯರು ಕೂಡ ತವರು ಮನೆಗೆ ಬಂದಿದ್ದಾರೆ.

ದಾಮೋದರ್ ಸಾಲ್ಯಾನ್‌ರ ಪತ್ನಿ ಮೋಹಿನಿ ಕಳೆದ ಕೆಲವು ತಿಂಗಳುಗಳಿಂದ ತವರು ಮನೆಯಾದ ಮಲ್ಪೆ ಪಡುಕೆರೆಯಲ್ಲಿದ್ದಾರೆ. ಬೋಟಿನ ಅವಶೇಷ ಪತ್ತೆಯಾಗಿರುವ ವಿಚಾರ ಈ ಮನೆಯಲ್ಲಿ ಸಹೋದರರ ಹೊರತುಪಡಿಸಿ ಉಳಿದಂತೆ ಯಾರಿಗೂ ಹೇಳದೆ ಮುಚ್ಚಿಡಲಾಗಿದೆ.

ಮನೆಯ ಟಿವಿ ಕಳೆದ 15 ದಿನಗಳಿಂದ ಹಾಳಾಗಿರುವುದರಿಂದ ಸಹೋದರಿ ಯರಿಗೂ ಈ ಕುರಿತು ಮಾಹಿತಿ ಸಿಕ್ಕಿಲ್ಲ ಎನ್ನುತ್ತಾರೆ ದಾಮೋದರ್ ಸಾಲ್ಯಾನ್‌ರ ಸಹೋದರರು. ಅದೇ ರೀತಿ ದಾಮೋದರ್ ಸಾಲ್ಯಾನ್‌ರ ಪತ್ನಿಯ ಮನೆಯ ವರಿಗೂ ಈ ವಿಚಾರ ತಿಳಿಸಿಲ್ಲ ಎಂದು ಕುಟುಂಬ ದವರು ಹೇಳಿದ್ದಾರೆ.

ಚಂದ್ರಶೇಖರ್ ಸಾಲ್ಯಾನ್‌ರ ಪತ್ನಿ ಶ್ಯಾಮಲಾ ಹಾಗೂ ತಾಯಿಗೂ ಬೋಟು ಅವಘಡಕ್ಕೆ ಒಳಗಾಗಿರುವ ವಿಚಾರವನ್ನು ತಿಳಿಸಿಲ್ಲ. ಆದರೆ ಶ್ಯಾಮಲಾ ಅವರಿಗೆ ಬೋಟಿನ ಸಣ್ಣ ತುಂಡು ಪತ್ತೆಯಾಗಿರುವ ಮಾಹಿತಿಯನ್ನು ಕುಟುಂಬದವರು ಹೇಳಿದ್ದಾರೆ ಎನ್ನಲಾಗಿದೆ. ‘ಬೋಟು ಅವಘಡಕ್ಕೆ ಒಳಗಾಗಿರುವುದು ಸ್ಪಷ್ಟ ವಾಗಿದ್ದು, ಇದರಲ್ಲಿದ್ದವರು ನಾಲ್ಕೈದು ತಿಂಗಳಾದರೂ ಬಾರದೆ ಇರುದರಿಂದ ಅವರೆಲ್ಲರು ಮೃತಪಟ್ಟಿರುವ ಸಂಶಯ ನಮಗೆ ಕಾಡುತ್ತದೆ’ ಎಂದು ಚಂದ್ರ ಶೇಖರ್ ಸಾಲ್ಯಾನ್‌ರ ಸಹೋದರ ನಿತ್ಯಾನಂದ ಕೋಟ್ಯಾನ್ ತಿಳಿಸಿದ್ದಾರೆ.

15 ಲಕ್ಷ ರೂ. ಬೋಟಿನ ಸಾಲ ಬಾಕಿ

ಮಲ್ಪೆ ತೊಟ್ಟಂ ಮೂಲದ ಚಂದ್ರಶೇಖರ್ ಕೋಟ್ಯಾನ್ ಒಂದೂವರೆ ವರ್ಷ ಗಳ ಹಿಂದೆ ಪಾವಂಜಿಗುಡ್ಡೆಯಲ್ಲಿ ಜಾಗ ಖರೀದಿಸಿ ಹೊಸ ಮನೆ ನಿರ್ಮಿಸಿದ್ದರು. ಇವರು 2016ರ ಸೆ.19ರಂದು 61.50 ಲಕ್ಷ ರೂ. ಮೊತ್ತದ ಸುವರ್ಣ ತ್ರಿಭುಜ ಬೋಟನ್ನು ಖರೀದಿಸಿ ನೊಂದಾವಣೆ ಮಾಡಿದ್ದರು.

ಈ ಬೋಟಿಗೆ ಚಂದ್ರಶೇಖರ್ ಕೋಟ್ಯಾನ್ ಮಲ್ಪೆಯ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನಲ್ಲಿ 45ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಸಾಕಷ್ಟು ಸಾಲವನ್ನು ಮರುಪಾವತಿಸಿದ್ದು, ಇನ್ನು 15.52ಲಕ್ಷ ರೂ. ಸಾಲದ ಮೊತ್ತ ಬಾಕಿ ಉಳಿದಿದೆ. ಈ ಬೋಟಿಗೆ ನ್ಯಾಶನಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ 40ಲಕ್ಷ ರೂ. ವಿಮೆ ಮಾಡಿದ್ದು, ಇದರ ಅವಧಿ 2019ರ ಅ.4ಕ್ಕೆ ಮುಗಿಯಲಿದೆ. ದುರಸ್ತಿ ಹಾಗೂ ಪೂಜೆ ನೆರವೇರಿಸಿದ ಬಳಿಕ ಡಿ.13ರಂದು ಮೊದಲ ಬಾರಿಗೆ ಈ ಬೋಟನ್ನು ಸಮುದ್ರಕ್ಕೆ ಇಳಿಸಿ ಇವರೆಲ್ಲರು ಮೀನುಗಾರಿಕೆ ತೆರಳಿದ್ದರು.

ಪತ್ನಿಯ ಕುಟುಂಬಕ್ಕೂ ಆಧಾರಸ್ತಂಭವಾಗಿದ್ದರು !

ದಾಮೋದರ ಸಾಲ್ಯಾನ್ ಐದು ವರ್ಷಗಳ ಹಿಂದೆ ಪಡುಕೆರೆಯ ಮೋಹಿನಿ ಅವರನ್ನು ವಿವಾಹವಾಗಿದ್ದು ಇವರಿಗೆ ಮಕ್ಕಳಿಲ್ಲ. ಹಲವು ವರ್ಷಗಳಿಂದ ಮೀನು ಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಇವರು ತನ್ನ ಪತ್ನಿ ಕುಟುಂಬಕ್ಕೂ ಆಧಾರ ಸ್ತಂಭವಾಗಿದ್ದರು.

ಮೋಹಿನಿ ಸಹೋದರ ನರ ಸಮಸ್ಯೆಯಿಂದ ಕಾಲಿನ ಸ್ವಾಧೀನ ಕಳೆದುಕೊಂಡು ಮಲಗಿದ್ದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಆದುದರಿಂದ ಈ ಕುಟುಂಬದ ದಿನ ದಾಮೋದರ್ ಸಾಲ್ಯಾನ್ ಅವರಿಂದ ಸಾಗುತ್ತಿತ್ತು. ಇದೀಗ ಈ ಕುಟುಂಬ ದಾಮೋದರ್ ಸಾಲ್ಯಾನ್ ಇಲ್ಲದೆ ಕಷ್ಟಕ್ಕೆ ಒಳಗಾಗಿದೆ. ಮೋಹಿನಿಯ ಅಕ್ಕ ದುಡಿದು ಕುಟುಂಬವನ್ನು ಸಾಕುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X