ರಾಜಸ್ಥಾನದ ಮೂಲದ ವ್ಯಕ್ತಿ ಮೃತ್ಯು
ಬೈಂದೂರು, ಮೇ 4: ಮಕ್ಕಳನ್ನು ನೋಡಲು ರಾಜಸ್ಥಾನದಿಂದ ನಾವುಂದಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಮೇ 2ರಂದು ಬೆಳಗಿನ ಜಾವ ನಡೆದಿದೆ.
ಮೃತರನ್ನು ಬೀರ್ಬಲ್(52) ಎಂದು ಗುರುತಿಸಲಾಗಿದೆ. ಇವರು ನಾವುಂದ ಗ್ರಾಮದ ಮಸ್ಕಿ ಎಂಬಲ್ಲಿ ಗ್ರಾನೇಟ್ ಕೆಲಸ ಮಾಡಿಕೊಂಡು ಬಾಡಿಗೆ ಮನೆ ಯಲ್ಲಿ ವಾಸವಾಗಿರುವ ಮಕ್ಕಳನ್ನು ನೋಡಲು ಎ.28ರಂದು ನಾವುಂದಕ್ಕೆ ಬಂದಿದ್ದರು. ರಾತ್ರಿ ಮಲಗಿದ್ದ ಅವರು ಬೆಳಗ್ಗೆ ಏಳದೆ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಹೃದಯಘಾತದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





