ಬೋಟಿನಿಂದ ಬಿದ್ದು ಸಮುದ್ರಪಾಲು
ಮಲ್ಪೆ, ಮೇ 4: ಮೀನುಗಾರಿಕೆಗೆ ತೆರಳಿದ್ದ ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾಗಿರುವ ಘಟನೆ ಎ.30ರಂದು ನಡೆದಿದೆ.
ನಾಪತ್ತೆಯಾದವರನ್ನು ಗೋವಿಂದ ಮಾಬ್ಲುಗೌಡ(38)ಗುರುತಿಸಲಾಗಿದೆ. ಇವರು ಸಾನ್ವಿ ಮೀನುಗಾರಿಕಾ ಬೋಟಿನಲ್ಲಿ ಎ.24ರಂದು ರಾತ್ರಿ ಇತರ ಮೀನುಗಾರರೊಂದಿಗೆ ಮಲ್ಪೆಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು. ಎ.30ರಂದು ಬೆಳಗಿನ ಜಾವ ಭಟ್ಕಳದ ನೇರ ಸಮುದ್ರದಲ್ಲಿ ಗೋವಿಂದ ಮಾಬ್ಲು ಗೌಡ ಬೋಟಿನ ದಂಡೆಯಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





