ಕಾಶ್ಮೀರ, ಕೇರಳಕ್ಕೆ ಹೋಗಿದ್ದ ಉಗ್ರರು: ಶ್ರೀಲಂಕಾ ಸೇನಾ ಮುಖ್ಯಸ್ಥ

ಕೊಲಂಬೊ, ಮೇ 4: ಈಸ್ಟರ್ ರವಿವಾರದಂದು ಶ್ರೀಲಂಕಾದಲ್ಲಿ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟಗಳನ್ನು ನಡೆಸಿದ ಬಾಂಬರ್‌ಗಳ ಪೈಕಿ ಕೆಲವರು ಕಾಶ್ಮೀರ ಮತ್ತು ಕೇರಳಕ್ಕೆ ಭೇಟಿ ನೀಡಿದ್ದರು ಎಂದು ಶ್ರೀಲಂಕಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನಾನಾಯಕೆ ಶನಿವಾರ ಹೇಳಿದ್ದಾರೆ.
ಯಾವುದೋ ತರಬೇತಿಗಾಗಿ ಅಥವಾ ಹೆಚ್ಚಿನ ಸಂಪರ್ಕಗಳನ್ನು ಹೊಂದುವುದಕ್ಕಾಗಿ ಅವರು ಅಲ್ಲಿಗೆ ಹೋಗಿರುವ ಸಾಧ್ಯತೆ ಇದೆ ಎಂದು ಬಿಬಿಸಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.
‘‘ಅವರು (ಭಯೋತ್ಪಾದಕರು) ಭಾರತಕ್ಕೆ ಹೋಗಿದ್ದಾರೆ, ಅವರು ಕಾಶ್ಮೀರ, ಬೆಂಗಳೂರಿಗೆ ಹೋಗಿದ್ದಾರೆ. ಅವರು ಕೇರಳ ರಾಜ್ಯಕ್ಕೆ ಹೋಗಿದ್ದಾರೆ. ಇಷ್ಟು ಮಾಹಿತಿಗಳು ನಮ್ಮಲ್ಲಿ ಇವೆ’’ ಎಂದು ಅವರು ತಿಳಿಸಿದರು.
16 ಸರ್ಕೀಟ್ ಬೋರ್ಡ್‌ಗಳು, 16 ಸಿಮ್ ಕಾರ್ಡ್‌ಗಳು, ಹಲವಾರು ಸಿಡಿಗಳು, ಕಂಪ್ಯೂಟರ್ ಬಿಡಿಭಾಗಗಳು ಹಾಗೂ ಒಂದು ಕಾರನ್ನು ವೌಂಟ್ ಲವೀನಾದಲ್ಲಿರುವ ಮನೆಯೊಂದರಿಂದ ವಶಪಡಿಸಿಕೊಳ್ಳಲಾಗಿದೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಭವ್ಯ ಅರಮನೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ದೊರೆ ಮಹಾ ವಜಿರಲೊಂಗ್‌ಕೋರ್ನ್ ಅವರ ಅಧಿಕೃತ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಿತು. ಅವರ ಮುಂಭಾಗದಲ್ಲಿ ರಾಣಿ ಸುತಿದಾ ಇದ್ದಾರೆ.
ಫ್ಲೋರಿಡದ ಜಾಕ್ಸನ್‌ವಿಲ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ವಿಮಾನವೊಂದು ರನ್‌ವೇಯಿಂದ ಜಾರಿ ಸಮೀಪದ ಸೇಂಟ್ ಜಾನ್ಸ್ ನದಿಗೆ ಬಿತ್ತು.







