ತಾನೂ ಪ್ರಧಾನಿ ಹುದ್ದೆ ಆಕಾಂಕ್ಷಿ ಎಂದು ಸೂಚನೆ ನೀಡಿದ ಮಾಯಾವತಿ

ಲಕ್ನೋ,ಮೇ.6: ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ತಾನೂ ಪ್ರಧಾನ ಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದೇನೆ ಎಂದು ಸೋಮವಾರ ಹೇಳಿದ್ದಾರೆ. “ಎಲ್ಲವೂ ಸುಸೂತ್ರವಾಗಿ ನಡೆದರೆ ನಾನು ಅಂಬೇಡ್ಕರ್ ನಗರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕಾಗುತ್ತದೆ. ಯಾಕೆಂದರೆ ರಾಷ್ಟ್ರ ರಾಜಕಾರಣಕ್ಕೆ ದಾರಿ ಅಂಬೇಡ್ಕರ್ ನಗರದ ಮೂಲಕ ಸಾಗುತ್ತದೆ” ಎಂದು ಮಾಯಾವತಿ ಚುನಾವಣಾ ರ್ಯಾಲಿಯಲ್ಲಿ ತಿಳಿಸಿದ್ದಾರೆ.
63ರ ಹರೆಯದ ಮಾಯಾವತಿ 2008ರಲ್ಲಿ ಅಂಬೇಡ್ಕರ್ ನಗರ ರೂಪುಗೊಳ್ಳುವುದಕ್ಕೂ ಮೊದಲು ಇದ್ದ ಅಕ್ಬರ್‌ಪುರ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ನಮೋ,ನಮೋ ಯುಗ ಕಳೆದು ಹೋಗಿದೆ ಇನ್ನು ಜೈ ಭೀಮ ಎಂದು ಘೊಷಣೆ ಕೂಗುವ ಕಾಲ ಎಂದು ಮಾಯಾವತಿ ತಿಳಿಸಿದ್ದಾರೆ. ತಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಕಾರ್ಯಕರ್ತರು ಬೇಸರಗೊಳ್ಳಬಾರದು. ಅಗತ್ಯಬಿದ್ದರೆ ತಾನು ಪಕ್ಷ ಗೆಲುವು ಸಾಧಿಸಿರುವ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸಬಹುದು ಎಂದು ಮಾಯಾವತಿ ಕಳೆದ ಮಾರ್ಚ್‌ನಲ್ಲಿ ತಿಳಿಸಿದ್ದರು.
Next Story





