ಅಂತರ್ ರಾಷ್ಟ್ರೀಯ ಐಎಸ್‍ಇಎಫ್ ಸ್ಪರ್ಧೆ: ಫಿಲೋಮಿನಾ ವಿದ್ಯಾರ್ಥಿನಿ ಅನುಷಾ ಆಯ್ಕೆ

ಪುತ್ತೂರು : ಪುತ್ತೂರಿನ ಸಂತ ಫಿಲೋಮಿನಾ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಅನುಷಾ ಎನ್ ಅಮೇರಿಕಾದ ಅರಿಝೋನದಲ್ಲಿ ಮೇ 12ರಿಂದ 18 ತನಕ ನಡೆಯಲಿರುವ 'ಇಂಟರ್ ನ್ಯಾಷನಲ್ ಸೈಯನ್ಸ್ ಆ್ಯಂಡ್ ಎಂಜಿನಿಯರಿಂಗ್ ಫ್ಯಾರ್ ( ಐಎಸ್‍ಇಎಫ್) ಯೋಜನಾ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾಳೆ. ಆಕೆ ಭಾರತವನ್ನು ಪ್ರತಿನಿಧಿಸಲಿದ್ದಾಳೆ.
ದೆಹಲಿಯಲ್ಲಿ ನಡೆದಿದ್ದ `ಐಆರ್ ಐಎಸ್-2018' ಯೋಜನಾ ಸ್ಪರ್ಧೆಯಲ್ಲಿ ಅನುಷಾ "ಇಕೋ ಫ್ರೆಂಡ್ಲಿ ಇನ್ಸುಲೇಟರ್ ಆ್ಯಂಡ್ ಪ್ಯಾಕಿಂಗ್ ಮೆಟೀರಿಯಲ್ ಯೂಸಿಂಗ್ ಅರೇಕಾ ಶೀತ್ " ಎನ್ನುವ ವಿಜ್ಞಾನ ಯೋಜನೆಯನ್ನು ಮಂಡಿಸಿ 'ಗ್ರಾಂಡ್ ಎವಾರ್ಡ್' ಪಡೆಯುವ ಮೂಲಕ ಈ ಅರ್ಹತೆ ಪಡೆದುಕೊಂಡಿದ್ದು, ಇದೀಗ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ.
ಅನುಷಾ ಶಾಲೆಯ ಗಣಿತ ಶಿಕ್ಷಕ ಕ್ಲೆಮೆಂಟ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಈ ವಿಜ್ಞಾನ ಯೋಜನೆಯನ್ನು ತಯಾರಿಸಿ ಮಂಡಿಸಿದ್ದರು.
ಅನುಷಾ ಅವರು ಪುತ್ತೂರಿನ ನೆಕ್ಕರೆ ನಿವಾಸಿ, ಮಂಗಳೂರಿನ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಡಾ. ಸೂರ್ಯ ನಾರಾಯಣ ಮತ್ತು ವಿದ್ಯಾಲಕ್ಷ್ಮೀ ದಂಪತಿ ಪುತ್ರಿ.





