ನಾಟಾ ಪರೀಕ್ಷೆ: ಎಕ್ಸಲೆಂಟ್ ಮೂಡುಬಿದಿರೆಗೆ ಶೇ. 100 ಫಲಿತಾಂಶ

ಮೂಡುಬಿದಿರೆ: ನಾಟಾ ಪರೀಕ್ಷೆಯಲ್ಲಿ ಎಕ್ಸಲೆಂಟ್ ಸೈನ್ಸ್ ಮತ್ತು ಕಾಮರ್ಸ್ ಪದವಿ ಪೂರ್ವ ಕಾಲೇಜಿನ 25 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳೂ ತೇರ್ಗಡೆ ಹೊಂದಿದ್ದಾರೆ.
ಐಶ್ವರ್ಯ, ಸ್ಮಿತಾ, ತೃಪ್ತಿ, ಕ್ಷಿತಿಜ, ಪ್ರತೀಕ್ಷ, ಚಂದನ್ ಎಮ್ ಗೌಡ, ಯೋಗರಾಜ್ ಶೆಟ್ಟಿ ಹಾಗೂ ಸುಮಂತ್ ಡಿ. ಎಮ್ ಇವರು 85ಕ್ಕಿಂತಲೂ ಹೆಚ್ಚಿನ ಅಂಕವನ್ನು ಪಡೆದಿರುತ್ತಾರೆ. ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಸಂಯೋಜಕ ಪ್ರೊ. ರಾಮಮೂರ್ತಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
Next Story





