ಉಷ್ಣಾಂಶ ಕಡಿಮೆ ಮಾಡಲು ‘ಆನ್ ಗ್ರೀನ್‌ಕೋಟ್’
ಬೆಂಗಳೂರು, ಮೇ.6: ಸನ್ ಶಾಡೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕಟ್ಟಡ ಮತ್ತು ಕೈಗಾರಿಕಾ ಶೆಡ್‌ಗಳ ಮೇಲ್ಮೈ ಉಷ್ಣಾಂಶವನ್ನು 20-25 ಡಿಗ್ರಿ ಕಡಿಮೆ ಮಾಡಲು ಆನ್ ಗ್ರೀನ್‌ಕೋಟ್ (ಪೈಂಟ್) ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಮಿಟೆಡ್‌ನ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರರೆಡ್ಡಿ, ಆಡ್ ಗ್ರೀನ್‌ಕೋಟ್ ಇಂಧನ ವೆಚ್ಚವನ್ನು ಉಳಿತಾಯ ಮಾಡುತ್ತದೆ. ಸಿಒ2 ಔಟ್‌ಪುಟ್ ಅನ್ನು ಕಡಿಮೆ ಮಾಡುವ ಮೂಲಕ ಪರಿಸರ ಸ್ನೇಹಿಯಾಗಿ ಕೆಲಸ ಮಾಡುತ್ತದೆ. ಅಲ್ಲದೆ, 0.5 ಮೈಕ್ರಾನ್ ಸಾಲಿಡ್ ಸ್ಫೇರಿಕಲ್ ಸಿಲಿಕಾದೊಂದಿಗೆ ನ್ಯಾನೋ ಸೆರಾಮಿಕ್ ಸಿಲಿಕಾನ್ ಆಧಾರಿತ ಕೋಟಿಂಗ್ ಸಿಸ್ಟಮ್ ಇದಾಗಿದೆ ಎಂದು ತಿಳಿಸಿದರು.
ಆಡ್‌ಗ್ರೀನ್‌ಕೋಟ್ ತನ್ನ ನ್ಯಾನೋ ಸೆರಾಮಿಕ್ ಕಾರ್ಯಾಚರಣೆ ಮೂಲಕ ಕಟ್ಟಡದ ಮೇಲ್ಮೈ ಬಿಸಿಯಾಗಲು ಬಿಡುವುದಿಲ್ಲ. ಈ ಕೋಟಿಂಗ್ ಶೇ.97ರಷ್ಟು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಇದು ಮೇಲ್ಮೈನಲ್ಲಿ ಬಿಸಿ ಶೇಖರಣೆಯಾಗಲು ಬಿಡುವುದಿಲ್ಲ. ಈ ಮೂಲಕ ಇದು ಶೇ.20 ರಿಂದ 25 ರಷ್ಟು ಉಷ್ಣಾಂಶ್ವವನ್ನು ಕಡಿಮೆ ಮಾಡುತ್ತದೆ. ಇದರಿಂದ ಕಟ್ಟಡದೊಳಗಿನ ಉಷ್ಣಾಂಶವು 4 ರಿಂದ 5 ಡಿಗ್ರಿಯಷ್ಟು ಕಡಿಮೆಯಾಗುತ್ತದೆ. ಕೋಟಿಂಗ್‌ನ್ನು ಬ್ರಶ್ ರೋಲರ್‌ಗಳು ಮತ್ತು ಏರ್‌ಲೆಸ್ ಸ್ಪ್ರೇ ಮೂಲಕ ಮಾಡಲಾಗುತ್ತದೆ ಎಂದರು.







