ನಗರಸಭೆ: ಆಸ್ತಿ ತೆರಿಗೆ ದಂಡನೆ ರಹಿತ ಪಾವತಿ
ಉಡುಪಿ, ಮೇ 8: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಸ್ತವ್ಯ/ವಾಣಿಜ್ಯ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲಕರು/ ಅನುಭೋಗದಾರರು 2019-20ನೇ ಸಾಲಿನ ಆಸ್ತಿ ತೆರಿಗೆಯನ್ನು ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಂತೆ ದಂಡನೆ ರಹಿತವಾಗಿ ಪಾವತಿಸಲು ಜೂನ್ 30 ಕೊನೆಯ ದಿನವಾಗಿದೆ.
ಆದುದರಿಂದ ತೆರಿಗೆದಾರರು ಆಸ್ತಿ ತೆರಿಗೆಯನ್ನು ನಿಗದಿತ ಅವಧಿಯೊಳಗೆ ದಂಡನೆ ರಹಿತವಾಗಿ ಪಾವತಿಸುವಂತೆ ತಿಳಿಸಲಾಗಿದೆ. ಹಾಗೂ 2018-19 ನೇ ಸಾಲಿನ ತೆರಿಗೆ ಪಾವತಿಸದೇ ಬಾಕಿ ಇರುವವರು ದಂಡನೆ ಸಮೇತ ತೆರಿಗೆ ಪಾವತಿಸಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಬೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





