ಜೈಲಿನಲ್ಲಿ ಅಸಾಂಜ್‌ರನ್ನು ಭೇಟಿಯಾದ ಪಮೇಲಾ ಆ್ಯಂಡರ್‌ಸನ್

ಲಂಡನ್, ಮೇ 8: ಮಾಜಿ ‘ಬೇವಾಚ್’ (ಅಮೆರಿಕದ ಟಿವಿ ಧಾರಾವಾಹಿ) ತಾರೆ ಹಾಗೂ ಹಾಲಿ ಪ್ರಾಣಿಗಳ ಹಕ್ಕುಗಳ ಹೋರಾಟಗಾರ್ತಿ ಪಮೇಲಾ ಆ್ಯಂಡರ್ಸನ್ ಮಂಗಳವಾರ ಲಂಡನ್‌ನ ಜೈಲಿನಲ್ಲಿರುವ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಭೇಟಿಯಾದರು.
ಭೇಟಿಯ ಬಳಿಕ, ಭಾವಾವೇಶದಿಂದ ಮಾತನಾಡಿದ ಅವರು, ಅಸಾಂಜ್ ಜೀವ ಅಪಾಯದಲ್ಲಿದೆ ಎಂದು ಎಚ್ಚರಿಸಿದರು.
‘‘ಇಲ್ಲಿ ಜೂಲಿಯನ್‌ರನ್ನು ನೋಡುವುದು ತುಂಬಾ ಕಷ್ಟ ಹಾಗೂ ಅವರನ್ನು ನೋಡಲು ಜೈಲಿನೊಳಗೆ ಹೋಗಬೇಕಾಗಿರುವುದು ತುಂಬಾ ಆಘಾತಕಾರಿ’’ ಎಂದು ಪಮೇಲಾ ಹೇಳಿದರು.
ಲಂಡನ್‌ನ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿದ್ದಾಗ ಅಸಾಂಜ್‌ರನ್ನು ನೋಡಲು ಪಮೇಲಾ ಹಲವು ಬಾರಿ ಹೋಗಿದ್ದರು.
‘‘ಅವರು ಒಳ್ಳೆಯ ವ್ಯಕ್ತಿ. ನಾನು ಅವರನ್ನು ಪ್ರೀತಿಸುತ್ತೇನೆ. ಅವರು ಅನುಭವಿಸುತ್ತಿರುವುದನ್ನು ನನಗೆ ಊಹಿಸಲೂ ಸಾಧ್ಯವಿಲ್ಲ’’ ಎಂದು ಅಸಾಂಜ್‌ರನ್ನು ಇಡಲಾಗಿರುವ ಬೆಲ್ಮರ್ಶ್ ಜೈಲಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಮೇಲಾ ಹೇಳಿದರು.
ಅವರು ಧರಿಸಿದ ಉದ್ದ ನಿಲುವಂಗಿಯಲ್ಲಿ ವಾಕ್‌ಸ್ವಾತಂತ್ರದ ರಕ್ಷಣೆ ಪರ ಘೋಷಣೆಗಳನ್ನು ಬರೆಯಲಾಗಿತ್ತು





