Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಚಾಮರಾಜನಗರದ ಯುವಕನಿಂದ ದಯಾಮರಣಕ್ಕೆ ಮನವಿ

ಚಾಮರಾಜನಗರದ ಯುವಕನಿಂದ ದಯಾಮರಣಕ್ಕೆ ಮನವಿ

ಕುಟುಂಬಕ್ಕೆ ಆಸರೆಯಾಗಬೇಕಾಗಿದ್ದ ಮಹೇಶನ ದುರಂತ ಕಥೆ ಇದು...

ವಾರ್ತಾಭಾರತಿವಾರ್ತಾಭಾರತಿ9 May 2019 5:58 PM IST
share
ಚಾಮರಾಜನಗರದ ಯುವಕನಿಂದ ದಯಾಮರಣಕ್ಕೆ ಮನವಿ

ಚಾಮರಾಜನಗರ, ಮೇ 9: ಆತ ಹದಿ ಹರೆಯದ ಯುವಕ. ಪಿಯುಸಿ ಓದಿ ಪಾಸಾಗಿ ಮುಂದೆ ಪದವಿ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿ, ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು ಸಾಕುವ ಕನಸು ಹೊತ್ತ ಚಿಗುರು ಮೀಸೆ ಹುಡುಗ. ಆದರೆ ವಿಧಿಯಾಟದ ಮುಂದೆ ಆತನ ಬದುಕು ದುಸ್ತರವಾಗಿದೆ. ಹೊಲದಲ್ಲಿ ಮಾವಿನ ಕಾಯಿ ಕೀಳಲು ಮರ ಹತ್ತಿದಾಗ ಮರದಿಂದ ಬಿದ್ದು ಬೆನ್ನು ಮೂಳೆ ಮುರಿದ ಕಾರಣ ಹಾಸಿಗೆ ಹಿಡಿದು 6 ವರ್ಷಗಳೇ ಕಳೆದೋಗಿವೆ. ಇವನ ಕೊರಗಿನಲ್ಲೇ ಆತನ ತಂದೆ ಕೂಡ ಪ್ರಾಣಬಿಟ್ಟಿದ್ದಾರೆ. ಎದೆ ಹಾಲು ಕುಡಿಸಿ ಬೆಳೆಸಿದ ಆ ಅಮ್ಮ ಈಗಲೂ ಮಗುವಿನಂತೆ ಸಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಗುರುವಿನಪುರದ ಮಹೇಶನ ವ್ಯಥೆ. ಗುರುವಿನ ಪುರ ಗ್ರಾಮದ ಚಿಕ್ಕ ಮಾದಪ್ಪನಿಗೆ ಮಹೇಶ ಒಬ್ಬನೇ ಮಗ, ಒಬ್ಬಳೇ ಮಗಳು, ಬಡತನ, ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲೇ ಬೇಕು, ಅದರ ನಡುವೆಯೂ ಮಗನನ್ನು ಚೆನ್ನಾಗಿ ಓದಿಸಿದ್ದರು ಆ ತಂದೆ ತಾಯಿ, ಪಿಯುಸಿ ಓದಿ ಪಾಸಾಗಿದ್ದ, ರಜಾ ಮುಗಿದ ಬಳಿಕ ಬಿ.ಕಾಂಗೆ ಸೇರಿಸುವ ಚಿಂತನೆ ಅಪ್ಪನದ್ದು, ಪದವಿ ಪಡೆದು, ನೌಕರಿ ಗಿಟ್ಟಿಸಿ ತಂದೆ ತಾಯಿಯನ್ನು ಸಾಕುವ ಕನಸು ಮಗನದ್ದು.

ರಜಾ ದಿನವೊಂದರಲ್ಲಿ ಜಮೀನಿನಲ್ಲಿದ್ದ ಅಪ್ಪ ಅಮ್ಮನ ಜೊತೆ ಕೆಲಸ ಮಾಡಲು ಹೋಗಿ, ಮಾವಿನ ಕಾಯಿ ತಿನ್ನಲು ಮರವೇರಿದ್ದ, ಕಾಲು ಜಾರಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದು ಆಸ್ಪತ್ರೆ ಸೇರಿದ್ದ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದರೂ ಗುಣವಾಗಲೇ ಇಲ್ಲ, ಕೂಲಿ ಇಲ್ಲದೇ ಸಾಲ ಕೊಟ್ಟವರಿಗೆ ವಾಪಸ್ಸು ಕೊಡಲಾಗದೆ ಬಾಧೆ ಹೆಚ್ಚಾದಾಗ, ಇತ್ತ ವಯಸ್ಸಿಗೆ ಬಂದ ಮಗನನ್ನು ಉಳಿಸಿಕೊಳ್ಳಲು ಆಗದೆ, ಸಾಲವನ್ನು ತೀರಿಸಲಾಗದೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾದರು ಮಹೇಶನ ತಂದೆ ಚಿಕ್ಕ ಮಾದಪ್ಪ. ನಂತರ ಮಗನನ್ನ ಸಾಕುವ ಹೊಣೆ ತಾಯಿಯದ್ದು, ತಮಗೆ ಬರುವ ವಿಧವಾ ವೇತನ, ಮಗನಿಗೆ ಬರುವ ಅಂಗವಿಕಲ ವೇತನ, ಸಂಘವೊಂದು ನೀಡುವ ಸಹಾಯ ಧನ ನಮ್ಮ ಜೀವನಕ್ಕೆ ಆಧಾರ. ಆದರೆ ಮಗನ ಚಿಕಿತ್ಸಾ ವೆಚ್ಚ ತಿಂಗಳಿಗೆ ನಾಲ್ಕಾರು ಸಾವಿರ ರೂಪಾಯಿಗಳು. ಹಾಗಾಗಿ 'ಜೀವನವೇ ದುಸ್ತರವಾಗಿದೆ. ನನಗೆ ಜೀವನ ಸಾಕಾಗಿ ಹೋಗಿದೆ ದಯಾಮರಣ ಕೊಡಿಸಿ' ಎಂದು ಜಿಲ್ಲಾಧಿಕಾರಿಗಳು ಮತ್ತು ರಾಜ್ಯಪಾಲರಿಗೆ ಮನವಿ ಮಾಡುತ್ತಾನೆ ಮಹೇಶ್.

ಬೆನ್ನು ಮೂಳೆ ಮುರಿದು ಕೊಂಡು, ಆಸ್ಪತ್ರೆ ಸೇರಿ ಚಿಕಿತ್ಸೆ ಫಲಕಾರಿಯಾಗದೆ ಮನೆಗೆ ವಾಪಸ್ಸು ಬಂದ ಮಹೇಶ್ ಕಳೆದ ಆರು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿದ್ದಾನೆ. ಲಕ್ಷ ಲಕ್ಷ ಸಾಲ ಮಾಡಿದರೂ ಗುಣಮುಖವಾಗದ ಖಾಯಿಲೆಯಿಂದ ಬಳಲುತ್ತಿರುವ ಯುವಕನಿಗೆ ಈಗ ಸಹಾಯ ಹಸ್ತ ಬೇಕಿದೆ.

'ಒಂದೊತ್ತಿನ ಊಟಕ್ಕೂ ಕಷ್ಟವಾಗುತ್ತಿದೆ. ನನಗೆ ವಿಧವಾ ವೇತನ ಮತ್ತು ಅವನಿಗೆ ಬರುವ ಅಂಗ ವಿಕಲವೇತನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅವನ ಚಿಕಿತ್ಸೆಗಾಗಿ ತಿಂಗಳಿಗೆ 4 ರಿಂದ 5 ಸಾವಿರ ಖರ್ಚು ಆಗುತ್ತದೆ. ಅದನ್ನು ಭರಿಸಲು ನನಗೆ ಆಗುತ್ತಿಲ್ಲ ಇತ್ತ ಮಗನನ್ನೇ ನೋಡಿಕೊಳ್ಳಲಾ, ಜೀವನ ಮಾಡಲು ಕೂಲಿ ಮಾಡಲಾ ? ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ಮಹೇಶನ ತಾಯಿ.

ಇನ್ನು ನನ್ನ ತಾಯಿ ನನಗಾಗಿ ಕಷ್ಟ ಪಡುತ್ತಿದ್ದಾರೆ, ಅದನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ, ನನಗೆ ಬಂದಿರುವ ಖಾಯಿಲೆ ಗುಣವಾಗಲೂ ಹತ್ತಾರು ಲಕ್ಷಗಳೆ ಬೇಕು. ಅದನ್ನು ಭರಿಸುವ ಶಕ್ತಿ ನಮಗಿಲ್ಲ. ನಮ್ಮದು ಬಡತನದ ಕುಟುಂಬ, ತನ್ನ ತಾಯಿ ನಿಶ್ಯಕ್ತಳು. ಅವಳಿಗೆ ತೊಂದರೆ ಕೊಡಲು ನನ್ನಿಂದ ಸಾಧ್ಯವಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ. ನನಗೆ ದಯಾಮರಣ ಕಲ್ಪಿಸಿ, ನನ್ನ ಅಮ್ಮನಾದರು ನೆಮ್ಮದಿಯಾಗಿರಲಿ ಎನ್ನುತ್ತಾನೆ ನತದೃಷ್ಟ ಯುವಕ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X