ಲಾಡ್ಜ್ ರೂಮ್ ನಿರಾಕರಿಸಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ
ಬೆಂಗಳೂರು, ಮೇ 9: ಯುವತಿಯೊಬ್ಬರನ್ನು ಲಾಡ್ಜ್‌ಗೆ ಕರೆದೊಯ್ದು ರೂಂ ನೀಡುವಂತೆ ಕೇಳಿದ್ದಕ್ಕೆ ನಿರಾಕರಿಸಿದ ಲಾಡ್ಜ್ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಾಚೇನಹಳ್ಳಿಯ ಓಯೋ ರೂಮ್ಸ್ ಎಂಬ ಲಾಡ್ಜ್‌ನಲ್ಲಿ ನಡೆದಿದೆ.
ಕಿರಣ್ ಮತ್ತು ಆತನ ಸಹಚರರು ಇಲ್ಲಿನ ಲಾಡ್ಜ್‌ಗೆ ಭೇಟಿ ನೀಡಿದ್ದು, ರೂಂ ನೀಡುವಂತೆ ಕೇಳಿದ್ದಾರೆ. ಈ ವೇಳೆ ಅಲ್ಲಿದ್ದ ಲಾಡ್ಜ್‌ನ ಸಿಬ್ಬಂದಿ ಆಶಿಸ್ ಎಂಬುವವರು ನಿರಾಕರಿಸಿದ್ದು, ಕಿರಣ್ ಹಾಗೂ ಗೆಳೆಯರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿದ್ದು, ದೂರಿನ ಮೇರೆಗೆ ದಾಂಧಲೆ ನಡೆಸಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕೃತ್ಯದ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕಿರಣ್ ಮತ್ತು ಆತನ ಸಹಚರರು ಮೇ 7ರಂದು ಸಂಜೆ ವೇಳೆ ರಾಚೇನಹಳ್ಳಿಯ ‘ಓಯೋ ರೂಮ್ಸ್’ ಲಾಡ್ಜ್‌ಗೆ ಓರ್ವ ಯುವತಿಯನ್ನು ಕರೆದೊಯ್ದಿದ್ದರು. ಲಾಡ್ಜ್‌ನಲ್ಲಿ ರೂಮ್ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಅಲ್ಲಿನ ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಕೇಳಿದ್ದಾರೆ. ಗುರುತಿನ ಚೀಟಿ ಇಲ್ಲ ಎಂದಿದ್ದಕ್ಕೆ ರೂಮ್ ಕೊಡಲು ಲಾಡ್ಜ್ ಸಿಬ್ಬಂದಿಗಳು ನಿರಾಕರಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಕಿರಣ್ ಮತ್ತು ಆತನ ಸಹಚರರು ಲಾಡ್ಜ್ ಸಿಬ್ಬಂದಿ ಆಶಿಸ್‌ನಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.







