ಮ್ಯಾನ್ಯಾರ್: ರನ್ವೇಯಿಂದ ವಿಮಾನ ಜಾರಿ 11 ಮಂದಿಗೆ ಗಾಯ
ಯಾಂಗನ್ (ಮ್ಯಾನ್ಮಾರ್), ಮೇ 9: ಮ್ಯಾನ್ಮಾರ್ ರಾಜಧಾನಿ ಯಾಂಗನ್ನ ವಿಮಾನ ನಿಲ್ದಾಣದಲ್ಲಿ ಬುಧವಾರ ವಿಮಾನವೊಂದು ಭೂಸ್ಪರ್ಶ ನಡೆಸಿದ ವೇಳೆ ರನ್ವೇಯಿಂದ ಹೊರಜಾರಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ನಗರದಲ್ಲಿ ಬಿರುಗಾಳಿ ಬೀಸುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
‘‘ಬಿಮನ್ ಬಾಂಗ್ಲಾದೇಶ್ ಏರ್ಲೈನ್ಸ್ ವಿಮಾನದ ಓರ್ವ ಪೈಲಟ್, ಓರ್ವ ಗಗನಸಖಿ ಮತ್ತು ಒಂಬತ್ತು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ’’ ಎಂದು ವಿಮಾನ ನಿಲ್ದಾಣದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
Next Story