Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಡಾ. ಕಫೀಲ್ ಖಾನ್ ಗೆ ಬಾಕಿಯಿರುವ ಎಲ್ಲಾ...

ಡಾ. ಕಫೀಲ್ ಖಾನ್ ಗೆ ಬಾಕಿಯಿರುವ ಎಲ್ಲಾ ಸಂಭಾವನೆ ನೀಡಿ: ಆದಿತ್ಯನಾಥ್ ಸರಕಾರಕ್ಕೆ ಸುಪ್ರೀಂ ಆದೇಶ

ವಾರ್ತಾಭಾರತಿವಾರ್ತಾಭಾರತಿ10 May 2019 5:05 PM IST
share
ಡಾ. ಕಫೀಲ್ ಖಾನ್ ಗೆ ಬಾಕಿಯಿರುವ ಎಲ್ಲಾ ಸಂಭಾವನೆ ನೀಡಿ: ಆದಿತ್ಯನಾಥ್ ಸರಕಾರಕ್ಕೆ ಸುಪ್ರೀಂ ಆದೇಶ

ಹೊಸದಿಲ್ಲಿ,ಮೇ 10: ಡಾ.ಕಫೀಲ್ ಖಾನ್ ಅವರ ಅಮಾನತಿಗೆ ಸಂಬಂಧಿಸಿದ ವಿಚಾರಣೆಯನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಮತ್ತು ಅಮಾನತು ಬಾಕಿಯಿರುವಂತೆ ಅವರಿಗೆ ಸಲ್ಲಬೇಕಾದ ಎಲ್ಲ ಜೀವನಾಧಾರ ಭತ್ಯೆಗಳನ್ನು ಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಉತ್ತರ ಪ್ರದೇಶದ ಆದಿತ್ಯನಾಥ ಸರಕಾರಕ್ಕೆ ಆದೇಶಿಸಿದೆ.

ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಂದೆ ನಿಂತಿರುವ ಡಾ.ಖಾನ್ ಆದೇಶದ ಬಗ್ಗೆ ಮಾತನಾಡಿದ್ದಾರೆ. ಆದಿತ್ಯನಾಥ್ ಸರಕಾರವು ಈಗ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕಿದೆ ಮತ್ತು 20 ತಿಂಗಳುಗಳಿಂದ ಬಾಕಿಯಿರುವ ಜೀವನಾಧಾರ ಭತ್ಯೆಗಳನ್ನು ತನಗೆ ಪಾವತಿಸಬೇಕಾಗಿದೆ ಎಂದು ಅವರು ಹೇಳಿದರು.

ನಿಜವಾದ ತಪ್ಪಿತಸ್ಥರ ವಿರುದ್ಧ ವಿಚಾರಣೆ ಕೈಗೆತ್ತಿಕೊಳ್ಳದಿರಲು ತನ್ನ ಅಮಾನತು ಸ್ಥಿತಿ ಮುಂದುವರಿಯಬೇಕು ಎಂದು ಆದಿತ್ಯನಾಥ್ ಸರಕಾರವು ಬಯಸಿದೆ ಎಂದು ಅವರು ಹೇಳಿದರು. ಇಬ್ಬರು ವೈದ್ಯರನ್ನು ಹೆಸರಿಸಿದ ಡಾ.ಖಾನ್,ಶೇ.10 ಕಮಿಷನ್‌ನ ಅವರ ದುರಾಸೆಯು ಬಿಆರ್‌ಡಿ ಆಸ್ಪತ್ರೆಯಲ್ಲಿ 70 ಮಕ್ಕಳ ಸಾವಿಗೆ ಕಾರಣವಾಗಿತ್ತು ಎಂದರು. ಪವಿತ್ರ ರಮಝಾನ್ ತಿಂಗಳಲ್ಲಿ ತನಗೆ ನಿರಾಳತೆ ಒದಗಿಸಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ತಾನು ಆಭಾರಿಯಾಗಿದ್ದೇನೆ ಎಂದರು.

ಡಾ.ಖಾನ್ ಅವರ ಅಮಾನತನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಟ್ವಿಟರ್ ಅಭಿಯಾನವೊಂದನ್ನು ಕಳೆದ ಮಾ.15ರಂದು ಆರಂಭಿಸಲಾಗಿತ್ತು. ‘‘ಈಗಾಗಲೇ 18 ತಿಂಗಳುಗಳು ಕಳೆದಿವೆ ಮತ್ತು ನಾನೀಗಲೂ ಅಮಾನತು ಸ್ಥಿತಿಯಲ್ಲಿಯೇ ಇದ್ದೇನೆ. ಉಚ್ಚ ನ್ಯಾಯಾಲಯವು ನನಗೆ ಕ್ಲೀನ್ ಚಿಟ್ ನೀಡಿದೆಯಾದರೂ ಆದಿತ್ಯನಾಥ್ ಸರಕಾರವು ನನ್ನ ಅಮಾನತನ್ನು ಹಿಂದೆಗೆದುಕೊಂಡಿಲ್ಲ,ನನಗೆ ಕರ್ತವ್ಯ ಸಲ್ಲಿಸಲು ಅವಕಾಶವನ್ನೂ ನೀಡುತ್ತಿಲ್ಲ. ನಾನು ಮಾಡದ ಅಪರಾಧಕ್ಕಾಗಿ ನನ್ನನ್ನು ದಂಡಿಸಲಾಗುತ್ತಿದೆ ಮತ್ತು ನನಗೆ ಸಾರ್ವಜನಿಕರ ಬೆಂಬಲದ ಅಗತ್ಯವಿದೆ ’’ ಎಂದು ಅಭಿಯಾನವನ್ನು ಪ್ರಕಟಿಸುತ್ತ ಡಾ.ಖಾನ್ ಹೇಳಿದ್ದರು.

   2017,ಆಗಸ್ಟ್‌ನಲ್ಲಿ ಗೋರಖ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕದ ಕೊರತೆಯಿಂದ ಮಕ್ಕಳು ಸಾವನ್ನಪ್ಪಿದ ಬಳಿಕ ಮಕ್ಕಳ ತಜ್ಞ ಡಾ.ಖಾನ್‌ರನ್ನು ಬಂಧಿಸಲಾಗಿತ್ತು. 2018,ಎಪ್ರಿಲ್‌ನಲ್ಲಿ ಅವರಿಗೆ ಜಾಮೀನು ದೊರಕಿತ್ತು. ಆದರೆ ಅವರು ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದಾಗಿನಿಂದಲೂ ತನ್ನ ಸೋದರನ ಮೇಲೆ ಗಂಭೀರ ಹಲ್ಲೆ ಸೇರಿದಂತೆ ಹಲವಾರು ಒಳಸಂಚುಗಳು ಅವರನ್ನು ಕಾಡುತ್ತಲೇ ಇವೆ. ಕಳೆದ ಸೆಪ್ಟೆಂಬರ್‌ನಲ್ಲಿ ಜಿಲ್ಲ್ಲಾ ಆಸ್ಪತ್ರೆಯಲ್ಲ್ಲಿ ಗಲಾಟೆ ಮಾಡಿದ್ದ ಆರೋಪದಲ್ಲಿ ಬಹರೈಚ್ ಪೊಲೀಸರು ಅವರನ್ನು ಬಂಧಿಸಿದ್ದರು. ಅವರು ಜಾಮೀನು ಬಿಡುಗಡೆಗೊಂಡ ಮರುದಿನವೇ ನಕಲಿ ದಾಖಲೆಗಳನ್ನು ಬಳಸಿ ಬ್ಯಾಂಕ್ ಖಾತೆಯನ್ನು ತೆರೆದ ಆರೋಪದಲ್ಲಿ ಗೋರಖ್‌ಪುರ ಪೊಲೀಸರು ಅವರನ್ನು ಮತ್ತು ಅವರ ಸೋದರನನ್ನು ಬಂಧಿಸಿದ್ದರು.

  ಆಸ್ಪತ್ರೆಯ ಮಿದುಳು ಜ್ವರ ವಾರ್ಡ್‌ನ ಮುಖ್ಯಸ್ಥರಾಗಿದ್ದ ಡಾ.ಖಾನ್ ಹಲವಾರು ಮಕ್ಕಳನ್ನು ಸಾವಿನ ದವಡೆಯಿಂದ ರಕ್ಷಿಸಿದ್ದರು. ಡಾ.ಖಾನ್ ಅವರ ಪ್ರಯತ್ನವಿಲ್ಲದಿದ್ದರೆ ಸಾವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತಿತ್ತು ಎಂದು ಆಸ್ಪತ್ರೆಯಲ್ಲಿ ಮಕ್ಕಳ ಪೋಷಕರು ಆಗ ಹೇಳಿದ್ದರು. ಆದರೆ ಇದು ಆಸ್ಪತ್ರೆಯ ಆಡಳಿತ ವರ್ಗದ ದೃಷ್ಟಿಯಲ್ಲಿ ಡಾ.ಖಾನ್ ಅವರನ್ನು ಹೀರೊ ಆಗಿಸಿರಲಿಲ್ಲ. ಕ್ರಿಮಿನಲ್ ಒಳಸಂಚು,ದಂಡನೀಯ ನರಹತ್ಯೆಗೆ ಪ್ರಯತ್ನ ಇತ್ಯಾದಿ ಆರೋಪಗಳನ್ನು ಹೊರಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನವೆಂಬರ್,2017ರಲ್ಲಿ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ಯನ್ನು ಸಲ್ಲಿಸಿದ್ದರು.

2017,ಸೆ.2ರಿಂದ ಗೋರಖ್‌ಪುರ ಜೈಲಿನಲ್ಲಿದ್ದ ಡಾ.ಖಾನ್,ಉನ್ನತ ಮಟ್ಟದಲ್ಲಿ ಆಡಳಿತಾತ್ಮಕ ವೈಫಲ್ಯಕ್ಕಾಗಿ ತನ್ನನ್ನು ಮತ್ತು ಇತರರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂದು ತನ್ನ ಪತ್ರದಲ್ಲಿ ಆರೋಪಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X