ರಾಷ್ಟ್ರಮಟ್ಟದ ಕರಾಟೆಯಲ್ಲಿ ಮೂಡಿಗೆರೆಯ ಲಕ್ಷ್ ಪಾಟೀಲ್ ಗೆ ಚಿನ್ನದ ಪದಕ

ಚಿಕ್ಕಮಗಳೂರು, ಮೇ 10: ಸ್ಟೂಡೆಂಟ್ ಗೇಮ್ಸ್ ಫೆಡರೇಷನ್ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇತ್ತೀಚಿಗೆ ನಡೆದ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯ ವೈಯುಕ್ತಿಕ ವಿಭಾಗದಲ್ಲಿ ಮೂಡಿಗೆರೆಯ ಬೆತನಿ ಅಂಗ್ಲ ಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಲಕ್ಷ್ ಪಾಟೀಲ್ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗಳಿಸಿದ್ದಾನೆ.
ಮೂಡಿಗೆರೆಯ ಜೆ.ಎಂ.ಎಫ್ ಸಿ ನ್ಯಾಯಾಲಯದ ಸರಕಾರಿ ಅಭಿಯೋಜಕ ಸುನೀಲ್ ಪಾಟೀಲ್ ಹಾಗೂ ಮಲ್ಲಿಕಾ ಪಾಟೀಲ್ ಅವರ ಪುತ್ರನಾಗಿರುವ ಲಕ್ಷ್ ಪಾಟೀಲ್ ಇಂಟರ್ ನ್ಯಾಷನಲ್ ಅಕಾಡೆಮಿ ಅಫ್ ಟ್ರೆಡಿಷನಲ್ ಮಾರ್ಷಲ್ ಅರ್ಟ್ಸ್ ಸಂಸ್ಥೆಯ ಶಿಕ್ಷಕರಾದ ರಾಜೇಂದ್ರನ್ ಮತ್ತು ಲತಾ ಚಂದ್ರು ಅವರ ಬಳಿ ಕರಾಟೆ ತರಬೇತಿ ಪಡೆಯುತ್ತಿದ್ದಾನೆ.
Next Story





