ಬಂಟ್ವಾಳ: ರಮಝಾನ್ ನಲ್ಲಿ ಅನಿಯಮಿತವಿದ್ಯುತ್ ಕಡಿತಗೊಳಿಸದಂತೆ ಮನವಿ

ಬಂಟ್ವಾಳ, ಮೇ 10: ಮೇ (ರಮಝಾನ್) ತಿಂಗಳಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸದಂತೆ ಆಗ್ರಹಿಸಿ ಜೆಡಿಎಸ್ ಬಂಟ್ವಾಳ ಯುವ ಘಟಕದಿಂದ ವತಿಯಿಂದ ಮೆಸ್ಕಾಂ ಅಧಿಕಾರಿಗಳಿಗೆ ಶುಕ್ರವಾರ ಮನವಿ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ, ಯುವ ಜನತಾ ದಳ ನಗರಾಧ್ಯಕ್ಷ ಸವಾಝ್ ಬಂಟ್ವಾಳ, ಇಸ್ಮಾಯಿಲ್ ಅರಬಿ, ಕ್ಷೇತ್ರ ಯುವ ಜನತಾದಳ ಅಧ್ಯಕ್ಷರು ಅಮಾನುಲ್ಲಾ, ಅಲ್ಪಸಂಖ್ಯಾತರ ಉಪಾಧ್ಯಕ್ಷ ರಫೀಕ್ ಕೊಚ್ಚಿ, ಪ್ರಧಾನ ಕಾರ್ಯದರ್ಶಿ ಶಫೀಕ್ ಆಲಡ್ಕ, ಮುಖಂಡರಾದ ಮುಸ್ತಫಾ, ಸತ್ತಾರ್ ಬಂಟ್ವಾಳ, ನಬೀಲ್ ಬಂಟ್ವಾಳ, ಅಬ್ದುಲ್ಲಾ, ಸಫೀಕ್, ಬಿಲಾಲ್, ಖಾದರ್, ರುಮಾನ್, ರಾಝಿ, ಜುನೈದ್ ಬಂಟ್ವಾಳ, ಅಸ್ಬರ್, ಸಿನಾನ್, ಕಬೀರ್ ಬಂಟ್ವಾಳ ಹಾಜರಿದ್ದರು.
Next Story





