ಕೋಲಾರ: ನೀಲಗಿರಿ ತೋಪಿನಲ್ಲಿ ಮಹಿಳೆಯ ಹತ್ಯೆ

ಕೋಲಾರ, ಮೇ 10: ನೀಲಗಿರಿ ತೋಪಿನಲ್ಲಿ ಮಹಿಳೆಯ ತಲೆಗೆ ಹೊಡೆದು ಹತ್ಯೆ ಮಾಡಿದ ಘಟನೆ ಮಾಲೂರಿನ ರಾಂಪುರದಲ್ಲಿ ನಡೆದಿದೆ.
ಬೆಂಗಳೂರಿನ ಆನೇಕಲ್ ಬಳಿಯ ಬಿ.ಹೊಸಹಳ್ಳಿ ಗ್ರಾಮದ ಮಂಜುಳಾ (38) ಹತ್ಯೆಯಾದ ಮಹಿಳೆ. ತನ್ನ 14 ವರ್ಷದ ಮಗನೊಂದಿಗೆ ಅಂಬರೀಶ್ ಎಂಬವರನ್ನು ಭೇಟಿ ಮಾಡಲು ಬಂದಿದ್ದ ಮಹಿಳೆಯನ್ನು ಅಂಬರೀಶನೇ ಹೊಡೆದು ಕೊಲೆಗೈದಿದ್ದಾನೆ ಎನ್ನಲಾಗಿದೆ.
2 ವರ್ಷಗಳ ಹಿಂದೆ ಮಂಜುಳಾರ ಗಂಡ ತೀರಿಕೊಂಡಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮಾಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Next Story





