ಕೆನರಾ ಬ್ಯಾಂಕ್‌ಗೆ 48,194 ಕೋಟಿ ರೂ.ಲಾಭ

ಬೆಂಗಳೂರು, ಮೇ 10: ದೇಶದ ಪ್ರತಿಷ್ಠಿತ ಕೆನರಾ ಬ್ಯಾಂಕ್ ಕಳೆದ ಆರ್ಥಿಕ ಸಾಲಿನಲ್ಲಿ ಒಟ್ಟು 48,194 ಕೋಟಿ ರೂ.ಗಳ ಲಾಭ ಗಳಿಸಿದೆ. ಇದೇ ಅವಧಿಯಲ್ಲಿ ಬ್ಯಾಂಕ್ 347 ಕೋಟಿ ರೂ.ಗಳ ನಿವ್ವಳ ವರಮಾನ ದಾಖಲಿಸಿದೆ.
ಕೆನರಾ ಬ್ಯಾಂಕ್ 31ನೇ ಮಾರ್ಚ್ 2019ಕ್ಕೆ ಕೊನೆಗೊಂಡ ವಿತ್ತೀಯ ವರ್ಷದಲ್ಲಿ 10,43,249 ಕೋಟಿ ರೂ.ಗಳ ಒಟ್ಟು ವಹಿವಾಟು ನಡೆಸಿದೆ. ಹಿಂದಿನ ಹಣಕಾಸು ಸಾಲಿಗೆ ಹೋಲಿಸಿದಲ್ಲಿ ಶೇ.12.71ರಷ್ಟು ವೃದ್ದಿ ಸಾಧಿಸಿದೆ ಎಂದು ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ನಾರಾಯಣ ತಿಳಿಸಿದ್ದಾರೆ.
ಬ್ಯಾಂಕ್ 4,44,218 ಕೋಟ ರೂ.ಗಳ ಮುಂಗಡ ನೀಡಿದ್ದು, ಶೇ.10.62ರಷ್ಟು ಪ್ರಗತಿ ಸಾಧಿಸಿದೆ. ವಸೂಲಾಗದ ಸಾಲ (ಎನ್‌ಪಿಎ) ಒಟ್ಟು ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಕೆನರಾ ಬ್ಯಾಂಕ್ ಪ್ರಸ್ತುತ ದೇಶಾದ್ಯಂತ 6,400 ಶಾಖೆಗಳನ್ನು ಹೊಂದಿದ್ದು, 59,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು.
Next Story







